Tuesday, 3rd December 2024

Kalaburagi News: ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಆಚರಣೆ

ರಾಯಪ್ಪ, ಹೈದರ್ ಅಲಿ, ಗಣಪತಿ ದೇವಕತೆ, ಕುಪೆಂದ್ರ ಸೇರಿ ಒಟ್ಟು 24 ಜನ ಸಹ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಚಿಂಚೋಳಿ : 2024ನೇ ಸಾಲಿನ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವು ಚಂದಾಪೂರದ ಬಂಜಾರ ಭವನದಲ್ಲಿ ಜರುಗಿತು.

ಪಧವಿಧರ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದಿಂದ ತಾಲೂಕಿನ ಯಲ್ಮಾಮಡಿ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಯಪ್ಪ ಖನಗೊಂಡ ಮರಪಳ್ಳಿ, ಚಿಮ್ಮನಚೋಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೈದರ್ ಅಲಿ ತಾಜಲಾಪೂರ. ಪದವಿ ಪೂರ್ವ ಕಾಲೇಜು ವಿಭಾಗದಿಂದ ಚಂದನಕೇರಾ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಮಾರುತಿ ಬೇಂದ್ರೆ, ಪ್ರಾಥಮಿಕ ವಿಭಾಗದಿಂದ ಕಲ್ಲೂರ್ ರೋಡ್ ಶ್ರೀ ವೀರಭದ್ರೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಗಣಪತಿ ದೇವಕತೆ, ಮಳ್ಳಿಕೊಳ್ಳ ತಾಂಡದ ವಿಠ್ಠಲ್ ನಾಗಪ್ಪ, ಚಂದಾಪೂರ ಶಾಲೆಯ ಫಿರ್ದೋಷ ತಹಸೀನ್, ಕೆಪಿಎಸ್ ಸಿ ಶಾಲೆಯ ಸುನೀತಾ, ರೂಪಲಾ ನಾಯಕ ತಾಂಡ ಶಾಲೆಯ ಅರತಿ ವ್ಹಿ ಜಾಧವ, ಕುಂಚಾವರಂ ಸ್ನೇಹಲತಾ, ರಟಕಲ್ ಉರ್ದು ಶಾಲೆಯ ಗೌಸಿಯಾ ಬೇಗಮ್, ಹಾಸರಗುಂಡಗಿ ವಿಜಯಕುಮಾರ ಸಜ್ಜನ, ಭೂಯಾಂರ. ಕೆ ಶಾಲೆಯ ಶಿವಕುಮಾರ ಎ ರಾಜಾಪೂರ, ಕನಕಪೂರ ಕೃಷ್ಣಪ್ಪ ರಾಠೋಡ, ಹುಲಿನಾಯಕ ತಾಂಡಾ ಶೇಷಪ್ಪ ಜಿ, ಇದ್ಲಾಮೋಕ ತಾಂಡ ಭದ್ರಶೆಟ್ಟಿ, ಗಡಿಲಿಂಗದಳ್ಳಿ ಸಿದ್ದಪ್ಪ ಜಿ ಪಾಟೀಲ್, ಪ್ರೌಢ ವಿಭಾಗದಿಂದ ಕಲ್ಲೂರ್ ರೋಡ್ ಶಾಲೆಯ ಉಷಾ ಜಿ ಓಂಕಾರ,ಕನಕಪೂರ ಶಾಲೆಯ ದೈಹಿಕ ಶಿಕ್ಷಕ ಕುಪೆಂದ್ರ, ಚಿಮ್ಮಚೋಡ ಲಿಂಗಾನಂದ, ಹಸರಗುಂಡಗಿ ದಿನೇಶ, ಚಂದನಕೇರಾ ಶಾಲೆಯ ರೇವಣಸಿದ್ಧಪ್ಪ, ದೇಗಲ್ಮಡಿ ಶಂಕರ, ಪೋಲಕಪಳ್ಳಿ ಆದರ್ಶವಿದ್ಯಾಲಯ ಶಾಲೆಯ ಕನ್ನಡ ಶಿಕ್ಷಕ ವಹಾಬ್ ಪಟೇಲ್, ಚಿಂಚೋಳಿ ರಾಮಚಂದ್ರ ಅನುದಾನಿತ ಪ್ರೌಢ ಶಾಲೆಯ ರಾಮಶೆಟ್ಟಿ ಸೇರಿ ಒಟ್ಟು 24 ಜನ ಸಹ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನಿಸಿ ಚಿಂಚೋಳಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ವ್ಹಿ. ಲಕ್ಷ್ಮಯ್ಯ ಅವರು ಎಲ್ಲಾ ವಿಷಯಗಳ ಶಿಕ್ಷಕರಿಗೆ ಹಾಗೂ ನಿವೃತ್ತ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಆನಂದ ಟೈಗರ್, ಸದಸ್ಯೆ ರಾಧಾಬಾಯಿ ಓಲಗೇರಿ, ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ, ಇಒ ಶಂಕರ ರಾಠೋಡ್, ನಾಗಶೆಟ್ಟಿ ಭದ್ರಶೆಟ್ಟಿ, ಅಶೋಕ ಹೂವಿನಬಾವಿ, ಜಯಪ್ಪ ಚಾಪೆಲ್, ಮಲ್ಲಿಕಾರ್ಜುನ್ ಪಾಲಮೂರ್, ಯಶವಂತ್ ಪೂಜಾರಿ, ನಾಗಪ್ಪ ಸಿಆರ್ ಪಿ, ಸುರೇಶ ಕೊರವಿ, ದೇವೀಂದ್ರಪ್ಪ ಹೋಳ್ಕರ್, ಶ್ರೀಶೈಲ್ ನಾಗಾವಿ ಸೇರಿದಂತೆ ವಲಯಗಳ ಸಿಆರ್ ಪಿ ಮತ್ತು ಬಿಆರ್ ಪಿ ಮತ್ತು ಶಿಕ್ಷಣ ಸಂಯೋಜಕರು ಹಾಗೂ ಶಿಕ್ಷಕ ವೃಂದದವರು, ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.