ಬಾಲಬಸವನಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
ಶಿರಾ: ಶಿರಾ ತಾಲೂಕಿನಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಅನುದಾನವನ್ನು ನೀಡಲಾಗಿತ್ತು. ಇಂದು ದೇವಸ್ಥಾನಗಳ ಅಭಿವೃದ್ಧಿಯಾಗಿರುವುದನ್ನು ನೋಡಿ ಸಂತೋಷವಾಗಿದೆ ಎಂದು ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ಬಾಲಬಸವನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ವೀರಾಂಜನೇಯ ಸ್ವಾಮಿ ವಿಗ್ರಹ (ಪ್ರಾಣ) ಪ್ರತಿಷ್ಠಾಪನಾ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಠಾಪನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಮಾತನಾಡಿದರು. ಗ್ರಾಮಗಳಲ್ಲಿ ದೇವಸ್ಥಾನಗಳ ಅಭಿವೃದ್ಧಿಯಾಗಿ ದೇವತಾ ಕಾರ್ಯಗಳು ನಡೆಯುತ್ತಿದ್ದರೆ ದೇವರ ಅನುಗ್ರಹ ದೊರಕುತ್ತದೆ. ಈ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ 15 ಕೋಟಿಗೂ ಹೆಚ್ಚು ದೇವಸ್ಥಾನಗಳಿಗೆ ಅನುದಾನ ನೀಡಿದ್ದೆ. ಸರಕಾರದ ಅನುದಾನದ ಜೊತೆಗೆ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ನಾನು ಸುಮಾರು 1 ಲಕ್ಷ ರೂ. ಧನಸಹಾಯ ಮಾಡಿದ್ದು ನನ್ನ ಪುಣ್ಯ ಎಂದರು.
ಈ ಕುರಿತು ಮಾತನಾಡಿದ ಬಾಲಬಸವನಹಳ್ಳಿ ಗ್ರಾಮಸ್ಥರು, ಸ್ಥಳೀಯ ಮುಖಂಡರುಗಳು ಹಾಗೂ ದಾನಿಗಳ ಸಹಕಾರದಿಂದ ಇಂದು ಶ್ರೀ ವೀರಾಂಜನೇಯ ಸ್ವಾಮಿಯ ದೇವಸ್ಥಾನ ಉತ್ತಮವಾಗಿ ನಿರ್ಮಾಣಗೊಂಡು, ಉದ್ಘಾಟನೆಗೊಂಡಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಾಗರಾಜು, ಬಾಲಬಸವನಹಳ್ಳಿ ಗ್ರಾಮಸ್ಥರಾದ ಮುಖಂಡರಾದ ಉಮೇಶ್ ಗೌಡ, ರಮೇಶ್ ಬಾಬು, ರಾಮೇಗೌಡ, ರಂಗನಾಥ್, ರಂಗಪ್ಪ, ರಾಮಣ್ಣ, ರಾಮಲಿಂಗಯ್ಯ ರಂಗನಾಥಜ್ಜ. ತರೂರ್ ನಾಗರಾಜ್. ಎಸ್. ಎಲ್. ಗೌಡ. ಬಾನು ಪ್ರಕಾಶ್ ಸೇರಿದಂತೆ ಗ್ರಾಮದ ಅನೇಕ ಗ್ರಾಮಸ್ಥರು ಹಾಜರಿದ್ದರು.