Wednesday, 11th December 2024

ಸಿಎಂ ಹೆಲಿಕಾಪ್ಟರ್‌ ಲ್ಯಾಂಡ್‌ ಆಗುತ್ತಿದ್ದ ಹೆಲಿಪ್ಯಾಡ್‌ ಬಳಿ ಬೆಂಕಿ

ಡುಪಿ: ಸಿಎಂ ಹೆಲಿಕಾಪ್ಟರ್‌ ಲ್ಯಾಂಡ್‌ ಆಗುತ್ತಿದ್ದ ಹೆಲಿಪ್ಯಾಡ್‌ ಬಳಿ ಬೆಂಕಿ ಕಾಣಿಸಿ ಕೊಂಡಿದ್ದು, ಬೈಂದೂರಿನ ಅಗ್ನಿಶಾಮಕ ಸಿಬ್ಬಂದಿಗಳಿಂದ ಕೂಡಲೇ ಬೆಂಕಿ ನಂದಿಸ ಲಾಗಿದೆ.

ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್‌ ಬಳಿ ಬೆಂಕಿ ಸಿಎಂ ಹೆಲಿಕಾಪ್ಟರ್‌ ಲ್ಯಾಂಡ್‌ ಆಗುತ್ತಿದ್ದ ಬೆಂಕಿ ಕಾಣಿಸಿಕೊಂಡಿದ್ದು, ಭಯಭೀತರಾಗಿದ್ದಾರೆ. ಅರೆಶಿರೂರು ಹೆಲಿಪ್ಯಾಡ್‌ ನಲ್ಲಿ ಸಿಎಂ ಇಳಿದು ಕೊಲ್ಲೂರು ಮೂಕಾಂಬಿಕಾ ದೇಗುಲದ ದರ್ಶನಕ್ಕೆ ಎಸ್ಕಾರ್ಟ್‌ ಮೂಲಕ ತೆರಳಿದ್ದಾರ ಎಂದು ತಿಳಿದು ಬಂದಿದೆ.

ಬಿಜೆಪಿ ಪರ ನಟ ರಿಷಬ್ ಶೆಟ್ಟಿ ಪ್ರಚಾರ ಮಾಡುವ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಮೂಕಾಂಬಿಕಾ ಆಶೀರ್ವಾದ ಕೊಡುತ್ತಾಳೆ ನೋಡೋಣ. ನಮ್ಮ ಸಿದ್ಧಾಂತ ಅವರ ಸಿದ್ಧಾಂತಕ್ಕೆ ಸಾಮ್ಯತೆ ಇದೆ. ದೇವಸ್ಥಾನದಲ್ಲಿ ಆಕಸ್ಮಿಕವಾಗಿ ರಿಷಬ್ ಶೆಟ್ಟಿ ಸಿಕ್ಕರು. ನಾನು ಬರುವ ಮೊದಲೇ ದೇವಸ್ಥಾನದಲ್ಲೇ ಇದ್ದರು. ಈ ಹಿಂದೆ ಕೂಡ ನಮ್ಮ ಸಿದ್ಧಾಂತ ವನ್ನು ಪ್ರತಿಪಾದನೆ ಮಾಡಿದ್ದಾರೆ ಎಂದರು.

ವಿಧಾನಸಭೆ ಚುನಾವಣೆ ಮತದಾರರ ಸೆಳೆಯೋದಕ್ಕೆ ಬಿಜೆಪಿ ಪರವಾಗಿ ಇದೀಗ ಸ್ಟಾರ್‌ ನಟರು ಎಂಟ್ರಿಯಾಗುತ್ತಿದ್ದು, ಕಿಚ್ಚ ಸುದೀಪ್‌ ಬೆನ್ನಲ್ಲೆ ಇದೀಗ ಮತ್ತೊಬ್ಬ ಸ್ಟಾರ್‌ ನಟರು ಎಂಟ್ರಿಯಾಗಲಿದ್ದಾರೆ. ಬಿಜೆಪಿ ಪರವಾಗಿ ರಿಷಬ್‌ ಶೆಟ್ಟಿ ಮತ ಪ್ರಚಾರ ಮಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು