ಗೌರಿಬಿದನೂರು : ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಜನವರಿ ೩,೪,೫ ನೇ ತಾರೀಖಿನಂದು ಫಸ್ಟ್ ಸರ್ಕಲ್ ಒಕ್ಕಲಿಗ ಉಧ್ಯಮಿ ಸಮಾವೇಶ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನಾಂಗದ ಬಂಧುಗಳು ಭಾಗವಹಿಸ ಬೇಕೆಂದು ತಾಲೂಕು ಅಧ್ಯಕ್ಷ ರಾಮಚಂದ್ರರೆಡ್ಡಿ ಮನವಿ ಮಾಡಿದರು.
ನಗರದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ಒಕ್ಕಲಿಗ ಉದ್ಯಮಿ ಸಂಘದ ವತಿಯಿಂದ ನಡೆದ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಜನವರಿ ೩,೪,೫ ನೇ ತಾರೀಖಿನಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ೩ನೇ ವರ್ಷದ ಉದ್ಯಮಿ ಒಕ್ಕಲಿಗರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ಅಂತಾ ರಾಷ್ಟ್ರೀಯ ಮಟ್ಟದ ಉದ್ಯಮಿಗಳು ಸಹ ಭಾಗವಹಿಸಲಿದ್ದಾರೆ, ಸಮುದಾಯದ ರೈತರು ಮತ್ತು ಯುವಕರು, ಈ ಉದ್ಯಮಿ ಸಮಾವೇಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಮುಂಚೂಣಿಗೆ ಬರಬೇಕು ಎಂದು ತಿಳಿಸಿದರು.
ಉದ್ಯಮಿ, ಶ್ರವಣ ರೆಡ್ಡಿ ಮಾತನಾಡಿ, ಫಸ್ಟ್ ಸರ್ಕಲ್, ಉದ್ಯಮಿ ಒಕ್ಕಲಿಗ, ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿರುವ ಸಮಾವೇಶಕ್ಕೆ ಹೆಚ್ಚಿನ ಯುವಕರು ಉತ್ಸಾಹಿ ಯುವಕರು ಪಾಲ್ಗೊಂಡು, ತಮ್ಮ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದು. ಬೇರೆ ಸಮುದಾಯಗಳು ಒಗ್ಗಟ್ಟಾಗಿ ತಮ್ಮ ಉದ್ಯಮಗಳನ್ನು ದೇಶದಾದ್ಯoತ ವಿಸ್ತರಣೆ ಮಾಡಿದ್ದಾರೆ, ರೈತರು ಮತ್ತು ಉದ್ಯಮಿ ಗಳು ಪರಸ್ಪರ ಸಹಾಯ ಮಾಡಿಕೊಳ್ಳುವುದರ ಮೂಲಕ ಉದ್ಯಮವನ್ನು ವಿಸ್ತರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯದರ್ಶಿ, ನರಸಿಂಹ ಗೌಡ ಮಾತನಾಡಿ, ಒಕ್ಕಲಿಗ ಯುವಕರನ್ನು ಉದ್ಯಮಕ್ಕೆ ತರಬೇಕು ಎನ್ನುವ ಉದ್ದೇಶ ದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಯುವಕರು ಸಮಾಜದಲ್ಲಿ ಮುಖ್ಯ ವಾಹಿನಿಗೆ ತರಲು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದ್ದು ೧೮೦೦ ಜನ ಉದ್ಯಮಿ ಗಳು ನೋಂದಣಿ ಮಾಡಿಕೊಂಡಿದ್ದು, ಇದು ಯುವ ಉದ್ಯಮಿಗಳಿಗೆ ದಾರಿ ದೀಪವಾಗಲಿದೆ, ಇಂತಹ ಅವಕಾಶ ಗಳನ್ನು ಬಳಸಿಕೊಂಡು ಉದ್ಯಮ ಸ್ಥಾಪನೆಗಳನ್ನು ಸ್ಥಾಪನೆ ಮಾಡಬಹುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ಉದ್ಯಮಿ ಒಕ್ಕಲಿಗ ಸಂಘದ ಅಧ್ಯಕ್ಷ ,ರಾಮಚಂದ್ರ ರೆಡ್ಡಿ ಉಪಾಧ್ಯಕ್ಷರು, ಶ್ರವಣ್ ರೆಡ್ಡಿ ಕಾರ್ಯದರ್ಶಿ, ನರಸಿಂಹ ಗೌಡ, ಆದಿ ಮೂರ್ತಿ ರೆಡ್ಡಿ, ಪ್ರಭಾಕರ್ ರೆಡ್ಡಿ ಅಶ್ವಥ್ ರೆಡ್ಡಿ, ಸೂರ್ಯ ಪ್ರಕಾಶ್, ಅನಿಲ್ ಕುಮಾರ್,ಜಾಲಿ ರಾಮಕೃಷ್ಣ,ನಾಗಭೂಷಣ ರೆಡ್ಡಿ, ಬಾಲಚಂದ್ರ ರೆಡ್ಡಿ , ವಿನಯ್, ಪವನ್ ರೆಡ್ಡಿ ,ಸುರೇಶ್ ರೆಡ್ಡಿ, ಶ್ರೀನಿವಾಸ ರೆಡ್ಡಿ ಲಕ್ಷ್ಮೀನಾರಾಯಣ ರೆಡ್ಡಿ, ರವಿ ಕುಮಾರ್, ಲಕ್ಷ್ಮಣ್ ರೆಡ್ಡಿಮುಂತಾದವರು ಪಾಲ್ಗೊಂಡಿದ್ದರು.