ತುಮಕೂರು: ಆಹಾರ ಕ್ರಮದಲ್ಲಿ ಬದಲಾವಣೆ, ವ್ಯಾಯಾಮ ರಹಿತ ಜೀವನ ಶೈಲಿ, ಲವಣಾಂಶಗಳ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದ ಯುವ ಜನರು ಆಸ್ಟಿಯೋಪೊರೋಸಿಸ್ ಸಮಸ್ಯೆಗೆ ಒಳಗಾಗುತ್ತಿರುವುದು ಆತಂಕಕಾರಿ ವಿಚಾರ ಎಂದು ಜಿಲ್ಲಾ ಆರ್‌ಸಿಹೆಚ್‌ಓ ಡಾ.ಕೇಶವ್‌ರಾಜ್ ಕಳವಳ ವ್ಯಕ್ತಪಡಿಸಿದರು.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ನಡೆದ ಆಸ್ಟಿಯೋಪೊರೊಸಿಸ್ ದಿನಚಾರಣೆ ಹಾಗೂ ಸಮು ದಾಯ ಆರೋಗ್ಯ ಸಿಬ್ಬಂದಿಗಳಿಗೆ ಆಸ್ಟೋ ಪೊರೊಸಿಸ್ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುವಕರು ಸೇರಿದಂತೆ 30 ವರ್ಷಕ್ಕಿಂತ ಹೆಚ್ಚಿನ ಎಲ್ಲಾ ವಯೋಮಾನದವರು ಆಗಾಗ್ಗೆ ತಮ್ಮ ಕೀಲುಮೂಳೆ ತಪಾಸಣೆಗೆ ಒಳಗಾಗಿ ಅಗತ್ಯ ಚಿಕಿತ್ಸೆ ಪಡೆದರೆ ವಯೋಸಹಜ ಕೀಲುಮೂಳೆ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿ ಸಾರ್ವಜನಿಕರ ಆರೋಗ್ಯ ಕಾಳಜಿ ಮಾಡುವಲ್ಲಿ ಸಮುದಾಯ ಆರೋಗ್ಯ ಸಿಬ್ಬಂಧಿಗಳ ಪಾತ್ರ ಪ್ರಮುಖವಾದದ್ದು, ಕೀಲು ಮೂಳೆ ಆರೋಗ್ಯದ ಅರಿವು ಮೂಡಿಸಲು ಸಮುದಾಯ ಆರೋಗ್ಯ ಪ್ರತಿನಿಧಿಗಳಿಗೆ ನಾವು ಈ ಬಗ್ಗೆ ಅರಿವು ಮೂಡಿಸುತ್ತಿರುವುದು ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಯೊ ಬ್ಬರಿಗೂ ಅರಿವು ಮೂಡಿಸುವಲ್ಲಿ ಸೇತುವೆಯಾಗಲಿದೆ ಎಂದರು.
ಕೀಲು, ಮೂಳೆ ವಿಭಾಗ ಮುಖ್ಯಸ್ಥ ಡಾ.ಮಹೇಶ್ ಮಾತನಾಡಿ ಸೂರ್ಯನ ಬೆಳಕಿನಿಂದ ದೊರೆಯುವ ವಿಟಮಿನ್ ಡಿ ಮಾನವನ ಕೀಲುಮೂಳೆ ಆರೋಗ್ಯದ ಪ್ರಮುಖಾಂಶ. ಮುಟ್ಟುನಿಂತ ಮಹಿಳೆಯರಲ್ಲಿ ಕೀಲುಮೂಳೆ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು ಅವರು ಕಡ್ಡಾಯವಾಗಿ ತಮ್ಮ ಕೀಲುಮೂಳೆಗಳ ಸಾಂದ್ರತೆ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ದೊರೆಯುವ ಉಚಿತ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು. ಸ್ತ್ರೀರೋಗ ತಜ್ಞರಾದ ಡಾ.ಹೇಮಾ, ಕೀಲುಮೂಳೆ ತಜ್ಞರಾದ ಡಾ.ಆದರ್ಶ್, ಕ್ಯಾನ್ಸರ್ ತಜ್ಞರಾದ ಡಾ.ಮಧು ಮಾಲತಿ ಉಪನ್ಯಾಸ ನೀಡಿದರು. ಮೆಡಿಕಲ್ ಮೇಲ್ವಿಚಾರಕ ಡಾ.ನಿರಂಜನಮೂರ್ತಿ ಹಾಗೂ ಸಮುದಾಯ ಆರೋಗ್ಯ ವಿಭಾಗದ ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂಧಿ ಉಪಸ್ಥಿತರಿದ್ದರು.