Tuesday, 3rd December 2024

Yadgir News: ಬಪ್ಪರಗಾ ಗ್ರಾಮದ ದಲಿತರಿಗೆ ಬಹಿಷ್ಕಾರ; ಸಾಮರಸ್ಯದಿಂದ ಬದುಕಲು ಮನವೊಲಿಸಿದ ಅಧಿಕಾರಿಗಳು

Yadgir News

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ (Yadgir News) ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ . ಅವರ ನಿರ್ದೇಶನ ಮೇರೆಗೆ ಸಮಸ್ಯೆ ಆಲಿಸಲು ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿ, ಶಾಂತಿ ಸಭೆ ನಡೆಸಿ ಸೌಹಾರ್ದಯುತ ವಾತಾವರಣ ನಿರ್ಮಿಸಿದರು.

ಗ್ರಾಮದಲ್ಲಿ ದಲಿತರಿಗೆ ಕಿರಾಣಿ ಹಾಗೂ ಮತ್ತಿತರ ದೈನಂದಿನ ಬಳಕೆ ವಸ್ತುಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ಗಮನಕ್ಕೆ ಬಂದಾಗ, ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲು ಸೂಚಿಸಿದ್ದರು.

ಡಿಸಿ ಸೂಚನೆ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಹುಣಸಗಿ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಲಿಂ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ‌ ಶಾಂತಿ ಸಭೆ ಏರ್ಪಡಿಸಿ, ಇಂತಹ ಅಸ್ಪೃಶ್ಯತೆ ಆಚರಣೆ ಬಿಟ್ಟು ಸಾಮರಸ್ಯದಿಂದ ಬದುಕಲು ಜನರು ಮುಂದಾಗಬೇಕು ಎಂದು ಮನವರಿಕೆ ಮಾಡಿದರು.

ಈ ಸುದ್ದಿಯನ್ನೂ ಓದಿ | Tumkur News: ನಾಗಮಂಗಲದಲ್ಲಿ ದುಷ್ಟ ಶಕ್ತಿಗಳ ಅಟ್ಟಹಾಸ

ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು: ಬಿಇಒ ವೆಂಕಟೇಶಪ್ಪ

ಬಾಗೇಪಲ್ಲಿ: ಶಿಕ್ಷಣದ ಜೊತೆಗೆ ಕ್ರೀಡೆಯನ್ನು ಸಮತೋಲನವಾಗಿ ನೋಡಬೇಕು. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿದಾಗ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡುತ್ತದೆ ಎಂದು ಬಿಇಒ ಕೆ.ವೆಂಕಟೇಶಪ್ಪ ತಿಳಿಸಿದರು.

ಬಾಗೇಪಲ್ಲಿ ಪಟ್ಟಣದ ವಿಶ್ವೇಶ್ವರಯ್ಯ ತಾಲ್ಲೂಕು ಕ್ರೀಡಾಂಗಣದಲ್ಲಿ 2024-25 ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಆಟಗಳಿಗೆ ಮೊದಲು ಕ್ರೀಡಾ ಮನೋಭಾವದ ಅವಶ್ಯಕತೆ ಇದೆ. ಮನಸ್ಸನ್ನು ನಿಯಂತ್ರಿಸಿ ಶಾಂತಿ ಮಾರ್ಗದಲ್ಲಿ ನಡೆಯಲು ಕ್ರೀಡೆ ಬೇಕು. ಬಹುಮಾನಕ್ಕಾಗಿಯೇ ಕ್ರೀಡೆಗಳಲ್ಲಿ ಭಾಗಿಯಗುವುದು ತರವಲ್ಲ ಎಂದರು.

ಇದನ್ನೂ ಓದಿ: Lalbaugcha Raja: ಮುಂಬಯಿಯ ಲಾಲ್‌ಬಾಗ್ಚಾ ಗಣಪತಿಗೆ ₹15 ಕೋಟಿ ಬೆಲೆಯ ಚಿನ್ನದ ಕಿರೀಟ ಅರ್ಪಣೆ; ಕೊಟ್ಟವರು ಯಾರು?

ಇಂದಿನ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಆರೋಗ್ಯದತ್ತ ನಿರ್ಲಕ್ಷ ತೋರುತ್ತಿರುವುದು ವಿಷಾದದ ಸಂಗತಿ. ದಿನದ ಒಂದಷ್ಟು ಅವಧಿಯನ್ನಾದರೂ ಆರೋಗ್ಯಕ್ಕಾಗಿ ಮೀಸಲಾಗಿಡಬೇಕು. ಮಕ್ಕಳು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು. ಪುಸ್ತಕ ಜ್ಞಾನಕ್ಕಿಂತ ಮಿಗಿಲಾದ ಕ್ರೀಡಾ ಪ್ರೌಢಮೆ ಕೆಲವರಲ್ಲಿರುತ್ತದೆ. ಶಿಕ್ಷಣ ಹಾಗೂ ಕ್ರೀಡೆ ಎರಡಕ್ಕೂ ಸಮಾನ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ಸಮನ್ವಯ ಅಧಿಕಾರಿಗಳಾದ ವೆಂಕಟರಾಮ್, ದೈಹಿಕ ಶಿಕ್ಷಣ ಪರಿವೀಕ್ಷಕ ರಂಗನಾಥ್, ಆರ್.ಹನುಮಂತ ರೆಡ್ಡಿ, ಪಿ.ಎನ್.ನಾರಾಯಣ ಸ್ವಾಮಿ, ಕೆ.ವಿ.ಶ್ರೀನಿವಾಸ್, ಈಶ್ವರಪ್ಪ, ವೆಂಕಟೇಶಪ್ಪ, ಸುಜಾತ, ಸಿ.ನಾರಾಯಣ ಸ್ವಾಮಿ, ಅಪ್ಪಣ್ಣ,ರಘುನಾಥ, ಶ್ರೀನಿವಾಸ್ ಪದ್ಮಾವತಿ, ರಾಜರಾಜೇಶ್ವರಿ, ಇನ್ನೂ ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.