Wednesday, 11th December 2024

ಮಳೆ ಹಿನ್ನೆಲೆ: 12ನೇ ದಿನದ ಪಾದಯಾತ್ರೆ ವಿಳಂಬ

ಚಿತ್ರದುರ್ಗ: ಎಐಸಿಸಿ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ 12ನೇ ದಿನದ ಪಾದಯಾತ್ರೆ ಮಂಗಳವಾರ ತಡವಾಗಿ ಆರಂಭವಾಗಿದೆ.

ಮಂಗಳವಾರ ಮಳೆ ಬಂದ ಹಿನ್ನೆಲೆಯಲ್ಲಿ ಪಾದಯಾತ್ರೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಂಡವಾಗಿ ಆರಂಭಗೊಂಡಿದೆ. ಹಿರಿಯೂರು ತಾಲ್ಲೂಕಿನ ಹರ್ತಿಕೋಟೆ ಗ್ರಾಮದಿಂದ ಯಾತ್ರೆ ಸಾಗಿ ಮುಂದು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಬಳಿ ಇರುವ ಚೇತನ್ ಹೋಟೆಲ್ ಬಳಿ ವಿಶ್ರಾಂತಿ ಪಡೆಯಲಿದೆ.

 

ಹಿರಿಯೂರಿನ ಹರ್ತಿಕೋಟೆಯಿಂದ ಮಂಗಳವಾರ ಶುರುವಾಗಿರುವ ಪಾದಯಾತ್ರೆ ಆರಂಭವಾಗಿದೆ. ಸಂಜೆ 4 ಗಂಟೆಗೆ ಸಾಣಿಕೆರೆಯಿಂದ ಮತ್ತೆ ಪುನಾರಂಭಗೊಳ್ಳಲಿದೆ. 7 ಗಂಟೆಗೆ ಸಂಜೆ ಚಿತ್ರದುರ್ಗದ ಸಿದ್ದಾಪುರದ ಸಮರ್ಥ್ ನಗರದ ಬಳಿ ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಸಿದ್ದಾಪುರದ ಸಾಯಿ ಗಣೇಶ್‌ ಲೇಔಟ್‌ ನಲ್ಲಿ ತಂಗಲಿದ್ದಾರೆ.

ಹರ್ತಿಕೋಟೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಪ್ರತಿ ದಿನವೂ 6 ಗಂಟೆಗೆ ನಮ್ಮ ಪಾದಯಾತ್ರೆ ಆರಂಭವಾಗುತ್ತಿತ್ತು. ಆದರೆ ಮಳೆಯಿಂದ ಒಂದು ಗಂಟೆ ತಡವಾಗಿ ಆರಂಭವಾಗಿದೆ.

ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರಿಗೆ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಹೀಗಾಗಿ ಪ್ರಿಯಾಂಕ ಗಾಂಧಿ ಅವರು ಮುಲಾಯಂ ಸಿಂಗ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಯಾತ್ರೆ ವೇಳೆ ಮುಲಾಯಂ ಸಿಂಗ್ ಯಾದವ್ ಅವರಿಗೆ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಭಾರತ್ ಜೋಡೋ ಪಾದಯಾತ್ರೆ ಆರಂಭವಾದ ಬೆನ್ನಲ್ಲೇ ರಾಹುಲ್‌ ಗಾಂಧಿ ನಾಲ್ಕು ಮಕ್ಕಳು ಜೊತೆ ಹೆಜ್ಜೆ ಹಾಕಿದ್ದು ಇಂದಿನ ವಿಶೇಷವಾಗಿತ್ತು. ನಂತರ ಪಾದಯಾತ್ರೆಯಲ್ಲಿ ಜೊತೆಯಾದ ಕೂಲಿ ಕಾರ್ಮಿಕ ಮಹಿಳೆಯರೂ ಕೂಡ ರಾಹುಲ್ ಗಾಂಧಿ ಜೊತೆಗೆ ಹೆಜ್ಜೆ ಹಾಕಿ ಗಮನ ಸೆಳೆದರು.