ಕಠ್ಮಂಡು: ‘ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಪರ್ವತದಲ್ಲಿ ಸುಮಾರು 100 ಪರ್ವತಾರೋಹಿಗಳು ಮತ್ತು ಸಿಬ್ಬಂದಿಗೆ ಕರೋನಾ ಸೋಂಕು ತಗುಲಿದೆ’ ಎಂದು ವರದಿಯಾಗಿದೆ. ಪರ್ವತಾರೋಹಣದ ಗೈಡ್ ತಿಳಿಸಿದ್ದಾರೆ.
‘ಸೋಂಕು ತಗುಲಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಬೇಸ್ ಕ್ಯಾಂಪ್ ನಲ್ಲಿರುವ ಕನಿಷ್ಠ 100 ಜನರಲ್ಲಿ ಸೋಂಕು ದೃಢ ಪಟ್ಟಿದೆ’ ಎಂದು ಮಾಹಿತಿ ನೀಡಿದರು. ನೇಪಾಳದಲ್ಲಿ ಕಳೆದ ಶುಕ್ರವಾರ 8,607 ಹೊಸ ಪ್ರಕರಣಗಳು ವರದಿಯಾಗಿದ್ದು, 177 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.