Tuesday, 5th November 2024

ಬಲೂಚಿಸ್ತಾನದಲ್ಲಿ ಬಸ್‌ ಪಲ್ಟಿ: 18 ಮಂದಿ ಸಾವು, 30 ಜನರಿಗೆ ಗಾಯ

ಕರಾಚಿ: ಬಲೂಚಿಸ್ತಾನದ ಖುಜ್ದಾರ್‌ ಜಿಲ್ಲೆಯಲ್ಲಿ  ಬಸ್‌ ಪಲ್ಟಿಯಾಗಿ 18 ಮಂದಿ ಮೃತಪಟ್ಟು, 30 ಜನರು ಗಾಯಗೊಂಡಿದ್ದಾರೆ.

ವಾಧ್‌ನಿಂದ ದಾಬು ಎಂಬಲ್ಲಿಗೆ ತೆರಳುತ್ತಿದ್ದ ಬಸ್‌, ಖುಜ್ದಾರ್‌ ಜಿಲ್ಲೆಯ ಖೋರಿ ಎಂಬಲ್ಲಿ ಪಲ್ಟಿಯಾಗಿದೆ. ಬಸ್‌ ವೇಗವಾಗಿ ಚಲಿಸುತ್ತಿದ್ದಾಗ, ಚಾಲಕ ನಿಯಂತ್ರಣ ಕಳೆದುಕೊಂಡು ಬಸ್‌ ಪಲ್ಟಿಯಾಯಿತು ಎಂದು ಮೂಲಗಳು ತಿಳಿಸಿವೆ.

15 ಜನರು ಸ್ಥಳದಲ್ಲಿಯೇ ಮೃತಪಟ್ಟರೆ, ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಖುಜ್ದಾರ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.