Terror Attack: ಇಸ್ರೇಲ್ ಪರ ಪ್ರತಿಭಟನಾಕಾರರ ಮೇಲೆ ಭಯೋತ್ಪಾದಕ ದಾಳಿ; 6 ಮಂದಿಗೆ ಗಂಭೀರ ಗಾಯ
ಅಮೆರಿಕದ ಕೊಲೊರಾಡೋ ರಾಜ್ಯದಲ್ಲಿ ಭಯೋತ್ಪಾದಕ (Terrorist Attack) ದಾಳಿ ನಡೆದಿದೆ. ದಾಳಿಯಲ್ಲಿ ಆರು ಜನರಿಗೆ ಗಾಯಗಳಾಗಿವೆ. ಬಂಧಿಸಲ್ಪಟ್ಟಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.


ವಾಷಿಂಗ್ಟನ್: ಅಮೆರಿಕದ ಕೊಲೊರಾಡೋ ರಾಜ್ಯದಲ್ಲಿ ಭಯೋತ್ಪಾದಕ (Terrorist Attack) ದಾಳಿ ನಡೆದಿದೆ. ದಾಳಿಯಲ್ಲಿ ಆರು ಜನರಿಗೆ ಗಾಯಗಳಾಗಿವೆ. ಬಂಧಿಸಲ್ಪಟ್ಟಿರುವ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಎಫ್‌ಬಿಐ ಇದನ್ನು ಭಯೋತ್ಪಾದಕ ದಾಳಿ ಎಂದು ಹೇಳಿದೆ. ಬೌಲ್ಡರ್ ನಗರದ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಇದು ಶಾಂತಿಯುತ ಸಭೆಯ ಸಮಯದಲ್ಲಿ ಯಹೂದಿ ಸಮುದಾಯದ ಸದಸ್ಯರ ವಿರುದ್ಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೋದಲ್ಲಿ ಶರ್ಟ್ ಧರಿಸದ ವ್ಯಕ್ತಿಯೊಬ್ಬ ಮನೆಯಲ್ಲಿ ತಯಾರಿಸಿದ ಮೊಲೊಟೊವ್ ಕಾಕ್ಟೈಲ್ ಅನ್ನು ಹೋಲುವ ವಸ್ತುವನ್ನು ಗುಂಪಿನ ಮೇಲೆ ಎಸೆದಿದ್ದಾನೆ. ಆತ ಬಾಟಲಿಗಳನ್ನು ಎಸೆಯುವ ಮೊದಲು ಆತ ಅವಾಚ್ಯ ಶಬ್ದಗಳಲ್ಲಿ ಬೈದಿದ್ದಾನೆ ನಂತರ ಅಲ್ಲಿರುವ ಜನರು ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾನೆ. ದಾಳಿಕೋರ ಮತ್ತಷ್ಟು ಸಿಟ್ಟಿಗೆದ್ದು ಸುತ್ತಲಿದ್ದವರ ಮೇಲೆ ದಾಳಿ ಮಾಡಿದ್ದಾನೆ.
Pro-Hamas supporters should be categorized as domestic terrorists!! pic.twitter.com/cNLWq42Swm
— Jammles (@jammles9) June 1, 2025
ಕೊಲೊರಾಡೋದ ಬೌಲ್ಡರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ನಮಗೆ ತಿಳಿದಿದೆ ಮತ್ತು ಅದನ್ನು ಸಂಪೂರ್ಣವಾಗಿ ತನಿಖೆ ಮಾಡುತ್ತಿದ್ದೇವೆ" ಎಂದು ಎಫ್‌ಬಿಐ ಮುಖ್ಯಸ್ಥ ಕಾಶ್ ಪಟೇಲ್ ಎಕ್ಸ್‌ನಲ್ಲಿ ಹೇಳಿದರು. ಘಟನೆಯ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನ ತಿಳಿಸಿದೆ. ಘಟನೆಯ ಕುರಿತು ಮಾತನಾಡಿದ ಪ್ರತ್ಯಕ್ಷದರ್ಶಿಗಳು ನಾವು ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸುತ್ತಿದ್ದೆವು. ಏಕಾಏಕಾ ವ್ಯಕ್ತಿಯೊಬ್ಬ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ನಂತರ ಆತನ ಕೈಯಲ್ಲಿ ಸ್ಪೋಟಕಗಳ ಬಾಟಲಿ ಇತ್ತು. ಏಕಾಏಕಿ ಆತ ಕೆಲವರ ಮೇಲೆ ಎಸೆದ ಹಲವರಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಪೊಲೀಸರು ಆತನನ್ನು ಬಂಧಿಸಿದ್ದಾರೆ.
2023 ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಸಮಯದಲ್ಲಿ ವಶಪಡಿಸಿಕೊಂಡ ಒತ್ತೆಯಾಳುಗಳನ್ನು ಬೆಂಬಲಿಸಲು ಯಹೂದಿ ಸಮುದಾಯದ ಸಾಪ್ತಾಹಿಕ ಸಭೆಯಾದ "ಬೌಲ್ಡರ್ ರನ್ ಫಾರ್ ದೇರ್ ಲೈವ್ಸ್" ಕಾರ್ಯಕ್ರಮದಲ್ಲಿ ಭಾನುವಾರದಂದು ದಾಳಿ ನಡೆದಿದೆ ಎಂದು ಯಹೂದಿ ಕಾರ್ಯಕರ್ತರ ಗುಂಪಾದ ಆಂಟಿ-ಡಿಫಮೇಷನ್ ಲೀಗ್ X ನಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: Pakistan's Nur Khan Airbase: ಭಾರತದ ದಾಳಿಯಿಂದ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಗೆ ಭಾರೀ ಹಾನಿ; ದಾಳಿಯ ಚಿತ್ರಗಳು ವೈರಲ್
ವಾಷಿಂಗ್ಟನ್‌ನ ಯಹೂದಿ ವಸ್ತುಸಂಗ್ರಹಾಲಯದ ಹೊರಗೆ ಇಬ್ಬರು ಇಸ್ರೇಲಿ ರಾಯಭಾರ ಕಚೇರಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ಮಾರಕ ದಾಳಿ ನಡೆಸಿದ ಸುಮಾರು ಎರಡು ವಾರಗಳ ನಂತರ ಬೌಲ್ಡರ್ ಹಿಂಸಾಚಾರ ನಡೆದಿದೆ. "ಫ್ರೀ ಪ್ಯಾಲೆಸ್ಟೈನ್" ಎಂದು ಕೂಗಿದ 31 ವರ್ಷದ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದರು.