Monday, 16th September 2024

ಅಲಾಸ್ಕಾದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ಲಾಸ್ ಎಂಜಲೀಸ್: ಅಮೆರಿಕದ ಅಲಾಸ್ಕಾ ಕರಾವಳಿಯಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.

ಯಾವುದೇ ಸಾವು-ನೋವು ಅಥವಾ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ಅಲಾಸ್ಕ ಪೆನಿನ್ಸುಲಾ ಸೇರಿದಂತೆ ಅಮೆರಿಕ ದಕ್ಷಿಣ ಕರಾವಳಿಯ ಹೆಚ್ಚಿನ ಭಾಗದಲ್ಲಿ ಸುನಾಮಿ ಅಲೆ ಗಳು ಆವರಿಸಿದ್ದು, ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಸ್ಯಾಂಡ್ ಪಾಯಿಂಟ್ ನಲ್ಲಿ ಭಾರೀ ಗಾತ್ರದ ಅಲೆ ಅಪ್ಪಳಿಸಿವೆ. ವ್ಯಾಪಕವಾದ ಪ್ರವಾಹ ಇಲ್ಲದಿದ್ದರೂ ಕೆಲವೆಡೆ ಸಣ್ಣಪ್ರಮಾಣದ ಸುನಾಮಿ ಅಲೆಗಳು ಕಂಡುಬಂದಿವೆ. ಕಿಂಗ್ ಕೋವ್ ಸಮೀಪ ಅಲಾಸ್ಕ ಪೆನಿನ್ಸುಲಾ ಪ್ರದೇಶದಲ್ಲಿ ಭೂಕಂಪದ ಅನುಭವವಾಗಿದೆ ಎಂದು ನಗರ ಆಡಳಿತ ಅಧಿಕಾರಿ ಗ್ಯಾರಿ ಹೆನ್ನಿಘ್ ಆಂಕಾರೇಜ್ ಹೇಳಿದ್ದಾರೆ.

 

Leave a Reply

Your email address will not be published. Required fields are marked *