Thursday, 20th June 2024

ಶ್ರೀಲಂಕಾದಲ್ಲಿ 9 ನೂತನ ಸಚಿವರ ಪ್ರಮಾಣ ವಚನ

ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಶುಕ್ರವಾರ 9 ಮಂದಿ ನೂತನ ಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ಶ್ರೀಲಂಕಾ ಫ್ರೀಡಂ ಪಾರ್ಟಿ ಪ್ರತಿನಿಧಿಸುವ ಮಾಜಿ ಸಚಿವ ನಿಮಲ್ ಸಿರಿಪಾಲ ಡಿ’ಸಿಲ್ವಾ, ಸ್ವತಂತ್ರ ಸಂಸದರಾದ ಸುಶಿಲ್ ಪ್ರೇಮಜಯಂತ, ವಿಜಯದಾಸ ರಾಜಪಕ್ಸ, ತಿರಾನ್ ಅಲೆಸ್ ಸೇರಿದಂತೆ ಒಂಬತ್ತು ಹೊಸ ಸಚಿವರು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಮತ್ತು ಪ್ರಧಾನಿ ಸೇರಿ ಸಚಿವ ಸಂಪುಟವು 25 ಸದಸ್ಯರಿಗೆ ಸೀಮಿತ ವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ನಿಮಲ್ ಸಿರಿಪಾಲ ಡಿ ಸಿಲ್ವಾ ಪೋರ್ಟ್ಸ್ ಅವರು ನೌಕಾ ಮತ್ತು ವಿಮಾನಯಾನ ಸೇವೆಗಳ ಸಚಿವರಾಗಿ, ಸುಸಿಲ್ ಪ್ರೇಮಜಯಂತ ಶಿಕ್ಷಣ ಸಚಿವರಾಗಿ ನೇಮಕಗೊಂಡರೆ, ಕೆಹೆಲಿಯ ರಂಬುಕವೆಲ್ಲಾ ಆರೋಗ್ಯ ಸಚಿವರಾಗಿ ಮತ್ತು ವಿಜಯದಾಸ ರಾಜಪಕ್ಷೆ ಅವರು ನ್ಯಾಯ, ಜೈಲು ವ್ಯವಹಾರಗಳು ಮತ್ತು ಸಾಂವಿಧಾನಿಕ ಸುಧಾರಣೆ ಸಚಿವ ರಾಗಿದ್ದಾರೆ.

ಪ್ರವಾಸೋದ್ಯಮ ಸಚಿವರಾಗಿ ಹರಿನ್ ಫೆರ್ನಾಂಡೋ, ತೋಟಗಾರಿಕೆ ಸಚಿವರಾಗಿ ರಮೇಶ್ ಪತಿರಾಣ, ಕಾರ್ಮಿಕ ಮತ್ತು ವಿದೇಶಿ ಉದ್ಯೋಗ ಸಚಿವರಾಗಿ ಮನುಷ ನಾಣಯ್ಯ, ವ್ಯಾಪಾರ, ವಾಣಿಜ್ಯ ಮತ್ತು ಆಹಾರ ಭದ್ರತೆ ಸಚಿವ ರಾಗಿ ನಳಿನ್ ಫೆರ್ನಾಂಡೋ ಮತ್ತು ತಿರಾನ್ ಅಲ್ಲೆಸ್ ಸಾರ್ವಜನಿಕ ಭದ್ರತಾ ಸಚಿವರಾಗಿ ನೇಮಕವಾಗಿದ್ದಾರೆ.

error: Content is protected !!