Sunday, 15th December 2024

ಗಣಿ ಕಾರ್ಮಿಕರಿದ್ದ ಬಸ್ಸುಗಳ ಡಿಕ್ಕಿ: 16 ಮಂದಿ ಸಾವು

ಮೆಕ್ಸಿಕೊ : ಮೆಕ್ಸಿಕೋ ಗಡಿ ರಾಜ್ಯ ಸೊನೋರಾದಲ್ಲಿ ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಎರಡು ಬಸ್ ಗಳು ಡಿಕ್ಕಿ ಹೊಡೆದ ಪರಿಣಾಮ 16 ಜನರು ಮೃತಪಟ್ಟು, 14 ಜನರು ಗಾಯಗೊಂಡಿದ್ದಾರೆ.

ಬಸ್ಸುಗಳು ನೋಚೆ ಬ್ಯೂನಾ ಗಣಿಯ ಕಾರ್ಮಿಕರನ್ನು ಸಾಗಿಸುತ್ತಿದ್ದಾಗ ಘಟನೆ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಮೆಕ್ಸಿಕನ್ ಪ್ರೆಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ 14 ಮಂದಿಯ ಸ್ಥಿತಿ ಗಂಭೀರ ವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.