Donald Trump: ಲಿಬಿಯಾಕ್ಕೆ ಗಾಜಾದಲ್ಲಿರುವ ಪ್ಯಾಲೆಸ್ತೇನಿಯನ್ನರ ಸ್ಥಳಾಂತರ- ಇದು ನಿಜವೇ?
ಗಾಜಾದಿಂದ ಲಿಬಿಯಾಕ್ಕೆ ಸುಮಾರು 1.9 ಮಿಲಿಯನ್ ಪ್ಯಾಲೆಸ್ತೇನಿಯನ್ನರನ್ನು ಸ್ಥಳಾಂತರ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರ ಯೋಜನೆಯ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧಿಕಾರಿಯೊಬ್ಬರು, ಇದು ಸುಳ್ಳು ಮತ್ತು ತರ್ಕಬದ್ಧವಲ್ಲದ ಯೋಜನೆ ಎಂದು ಹೇಳಿದರು. ಅಲ್ಲದೇ ಗಾಜಾದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಮಾಡುವುದು ಅಸಾಧ್ಯ ಎಂದು ತಿಳಿಸಿದರು.


ಗಾಜಾ: ಗಾಜಾದಲ್ಲಿರುವ (Gaza) ಸುಮಾರು 1.9 ಮಿಲಿಯನ್ ಪ್ಯಾಲೆಸ್ತೇನಿಯನ್ನರನ್ನು (Palestinians) ಲಿಬಿಯಾಕ್ಕೆ (Libya) ಸ್ಥಳಾಂತರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಯೋಜನೆ ರೂಪಿಸಿದ್ದಾರೆ ಎನ್ನಲಾಗಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾಲೆಸ್ತೇನಿಯನ್ನರ ಸ್ಥಳಾಂತರ ವರದಿ ಸುಳ್ಳು . ಇದು ತರ್ಕಬದ್ಧವಲ್ಲ. ಗಾಜಾದಲ್ಲಿರುವ ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ಹಮಾಸ್ ದಾಳಿಯಿಂದ ಸಾವಿರಾರು ಇಸ್ರೇಲಿಗರು ಸಾವನ್ನಪ್ಪಿದ ಬಳಿಕ ಈ ಯೋಜನೆಯೊಂದನ್ನು ಮಾಡಲಾಗಿತ್ತು ಎನ್ನಲಾಗಿದೆ.
ಗಾಜಾದಿಂದ ಲಿಬಿಯಾಕ್ಕೆ ಸುಮಾರು 1.9 ಮಿಲಿಯನ್ ಪ್ಯಾಲೆಸ್ತೇನಿಯನ್ನರನ್ನು ಸ್ಥಳಾಂತರ ಮಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಜನೆಯ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕದ ಅಧಿಕಾರಿಯೊಬ್ಬರು, ಇದು ಸುಳ್ಳು ಮತ್ತು ತರ್ಕಬದ್ಧವಲ್ಲದ ಯೋಜನೆ ಎಂದು ಹೇಳಿದರು. ಅಲ್ಲದೇ ಗಾಜಾದಲ್ಲಿನ ಪ್ರಸ್ತುತ ಪರಿಸ್ಥಿತಿಯಲ್ಲಿ ಇಂತಹ ಯೋಜನೆ ಮಾಡುವುದು ಅಸಾಧ್ಯ ಎಂದು ತಿಳಿಸಿದರು. 2023ರ ಅಕ್ಟೋಬರ್ ನಲ್ಲಿ ಹಮಾಸ್ ದಾಳಿಯಿಂದ ಸುಮಾರು 1,200 ಇಸ್ರೇಲಿಗರು ಸಾವನ್ನಪ್ಪಿದ ಬಳಿಕ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಈ ಕುರಿತು ಪ್ರಸ್ತಾಪವನ್ನು ಮಾಡಲಾಗಿತ್ತು.
ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸ್ಥಗಿತಗೊಂಡಿರುವ ಶತಕೋಟಿ ಡಾಲರ್‌ಗಳ ಲಿಬಿಯಾ ಆಸ್ತಿಗಳನ್ನು ಗಾಜಾದಿಂದ ಸ್ಥಳಾಂತರಗೊಳಿಸುವ ಪ್ಯಾಲೆಸ್ತೇನಿಯನ್ನರಿಗೆ ನೀಡುವ ಯೋಜನೆಯನ್ನು ಮಾಡಲಾಗಿತ್ತು. ಇದಕ್ಕೆ ಪ್ರತಿಯಾಗಿ ಲಿಬಿಯಾ ಯುದ್ಧದಿಂದ ಸಂಕಷ್ಟದಲ್ಲಿರುವ ಗಾಜಾ ನಾಗರಿಕರಿಗೆ ತಾತ್ಕಾಲಿಕವಾಗಿ ಆತಿಥ್ಯವನ್ನು ಒದಗಿಸುತ್ತದೆ. ಈ ಕುರಿತು ಯುಎಸ್ ಅಧಿಕಾರಿಗಳು ಲಿಬಿಯಾ ಅಧಿಕಾರಿಗಳೊಂದಿಗೆ ಆರಂಭಿಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಆದರೆ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಾಗಿಲ್ಲ.
ಇದೀಗ ಈ ಕುರಿತು ಚರ್ಚೆ ಜೋರಾಗಿದ್ದು, ಇದನ್ನು ಅಮೆರಿಕದ ಅಧಿಕಾರಿಯೊಬ್ಬರು ನಿರಾಕರಿಸಿದ್ದಾರೆ. ಹಿರಿಯ ಹಮಾಸ್ ನಾಯಕ ಬಾಸೆಮ್ ನಯೀಮ್ ಅವರು ಕೂಡ ಇಂತಹ ಯಾವುದೇ ಚರ್ಚೆಗಳ ಬಗ್ಗೆ ಕೇಳಿಲ್ಲ ಎಂದು ಹೇಳಿದ್ದಾರೆ. ಪ್ಯಾಲೆಸ್ತೇನಿಯನ್ನರು ತಮ್ಮ ತಾಯ್ನಾಡಿನೊಂದಿಗೆ ಆಳವಾದ ಸಂಪರ್ಕ ಹೊಂದಿದ್ದಾರೆ ಮತ್ತು ಅದಕ್ಕಾಗಿ ಹೋರಾಡಲು ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Virat Kohli tribute: ಚಿನ್ನಸ್ವಾಮಿ ಅಂಗಳದಲ್ಲಿಂದು ಕೊಹ್ಲಿ ಮೇನಿಯಾ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಟ್ರಂಪ್ ಅವರು ಮಧ್ಯಪ್ರಾಚ್ಯದೊಳಗೆ ಪ್ಯಾಲೆಸ್ಟೀನಿಯನ್ನರು ಸ್ಥಳಾಂತರಗೊಳ್ಳಲು ಬಯಸುತ್ತಾರೆ. ಗಾಜಾ ನಿರಂತರ ಸಂಘರ್ಷಕ್ಕೆ ಒಳಗಾಗುತ್ತಿದೆ. ಇದೊಂದು ಅಸಹ್ಯ ಸ್ಥಳ. ಇದು ಮುಕ್ತ ವಲಯವಾಗಬೇಕು ಎಂದು ಹೇಳಿದ್ದರು. ಈ ಪ್ರದೇಶದ ನಾಯಕರು ಒಟ್ಟಾಗಿ ಕೆಲಸ ಮಾಡಿದರೆ 1.9 ಮಿಲಿಯನ್ ಜನರನ್ನು ಸ್ಥಳಾಂತರಿಸುವುದು ಅಸಾಧ್ಯವಾದ ಕೆಲಸವಲ್ಲ ಎಂದು ಟ್ರಂಪ್ ಹೇಳಿದರು.
ಪ್ಯಾಲೆಸ್ತೇನಿಯನ್ನರು ಮಧ್ಯಪ್ರಾಚ್ಯವನ್ನು ಪ್ರೀತಿಸುತ್ತಾರೆ. ಸುಂದರವಾದ ಸಮುದಾಯಗಳನ್ನು ನಿರ್ಮಿಸಬಲ್ಲರು. ಅವರು ಮನಸ್ಸು ಮಾಡಿದರೆ ಮಧ್ಯಪ್ರಾಚ್ಯದಲ್ಲಿ ಮನೆ ಹೊಂದಬಹುದು. ಗಾಜಾದಲ್ಲಿರುವ 1.9 ಮಿಲಿಯನ್ ಜನರಿಗೆ ಹೊಸ ವಸತಿ ನಿರ್ಮಾಣ ಮಾಡುವುದು ಅಸಾಧ್ಯವೇನಲ್ಲ ಎಂದು ಅವರು ಹೇಳಿದ್ದರು.