Sunday, 15th December 2024

ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ: ಮೂವರ ಸಾವು

ಜಕಾರ್ತ: ಶನಿವಾರ ಇಂಡೋನೇಷ್ಯಾದ ರೆಸಾರ್ಟ್ ದ್ವೀಪದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿ ಸಿದ್ದು, ಮೂವರು ಮೃತಪಟ್ಟಿದ್ದಾರೆ.

ವಿಪತ್ತು ನಿರ್ವಹಣ ಪಡೆ ಹಾಗೂ ರಕ್ಷಣ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸ ಲಾಗಿದೆ. ಭೂಕಂಪನದ ತೀವ್ರತೆಗೆ ಹಲವಾರು ಮನೆಗಳು ನೆಲಕ್ಕುರುಳಿದ್ದು, ಬಾಂಗ್ಲಿ ಜಿಲ್ಲೆಯಲ್ಲಿ ಭೂಕಂಪನ ದಿಂದ ಹೆಚ್ಚಿನ ಹಾನಿಯಾಗಿದೆ.

ಬೆಳಿಗ್ಗೆ 3:18ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, 10 ಕಿ.ಮೀ ಆಳದಲ್ಲಿ ಹಾಗೂ ಕರಂಗಾಸೆಮ್ ಜಿಲ್ಲೆಯಿಂದ ವಾಯುವ್ಯ ಭಾಗದ 8 ಕಿ.ಮೀ ದೂರ ದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. 7 ಮಂದಿ ಗಾಯಗೊಂಡಿದ್ದಾರೆ., ಭೂಕಂಪನದಿಂದ ಸುನಾಮಿಯ ಯಾವುದೇ ಆತಂಕವಿಲ್ಲ.

ಕಟ್ಟಡದ ಅವಶೇಷಗಳು ಮೈಮೇಲೆ ಬಿದ್ದ ಕಾರಣ 7 ಮಂದಿ ಎಲುಬುಗಳು ಮುರಿದಿವೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಜನವರಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 42 ಮಂದಿ ಮೃತಪಟ್ಟಿದ್ದರು. ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಭೀಕರ ಭೂಕಂಪ ಸಂಭವಿಸಿತ್ತು.

ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಕಂಪನ ದಾಖಲಾಗಿತ್ತು. ಭಾರೀ ಪ್ರಮಾಣದ ಭೂಕಂಪನದಿಂದ ಆಸ್ಪತ್ರೆ, ಕಟ್ಟಡಗಳು ಕುಸಿದು ಬಿದ್ದ ಪರಿಣಾಮ ನೂರಾರು ಮಂದಿ ಅವಶೇಷಗಳಡಿ ಸಿಲುಕುವಂತಾಯಿತು.