ನಾಲಿಗೆಯನ್ನು ಗೋಲಾಕಾರ ಮಾಡಿ ಟೇಬಲ್ ಟೆನ್ನಿಸ್‌ನಷ್ಟು ದಪ್ಪ ಹೊಂದಿರುವ (unique tongue) ಇಟಾಲಿಯನ್ ಮಹಿಳೆ ( Italian woman ) ಈಗ ಗಿನ್ನಿಸ್ ದಾಖಲೆ (Guinness World Record) ಬರೆದಿದ್ದಾರೆ. ಇಟಲಿಯ 37 ವರ್ಷದ ಅಂಬ್ರಾ ಕೊಲಿನಾ ತಮ್ಮ ನಾಲಿಗೆಯನ್ನು ವಕ್ರಗೊಳಿಸುವ ಸಾಮರ್ಥ್ಯದಿಂದ ಈ ದಾಖಲೆ ನಿರ್ಮಿಸಿದ್ದಾರೆ.
ಅಂಬ್ರಾ ಅವರು 13.83 ಸೆ.ಮೀ. ಅಂದರೆ ಸರಿಸುಮಾರು 5.44 ಇಂಚು ಅಳತೆಯ ಅತಿದೊಡ್ಡ ನಾಲಿಗೆಯ ಸುತ್ತಳತೆ ಹೊಂದಿರುವ ಮಹಿಳೆಯೆಂಬ ದಾಖಲೆ ಬರೆದಿದ್ದಾರೆ. ಇವರ ನಾಲಿಗೆಯು ಟೇಬಲ್ ಟೆನ್ನಿಸ್ ಚೆಂಡಿನ ಗಾತ್ರ 4.94 ಇಂಚಿಗಿಂತ ಹೆಚ್ಚಾಗಿದೆ.
ಇದಕ್ಕೂ ಮೊದಲು ಇದೇ ದಾಖಲೆಯನ್ನು ಅಮೆರಿಕದ ಜೆನ್ನಿ ದುವಾಂಡರ್ ಬರೆದಿದ್ದರು. ಇವರ ನಾಲಿಗೆ ಅಂಬ್ರಾ ಅವರ ನಾಲಿಗೆಗಿಂತ ಅರ್ಧ ಸೆಂಟಿ ಮೀಟರ್ ಕಡಿಮೆ ಇತ್ತು. ಈಗ ಇವರ ದಾಖಲೆಯನ್ನು ಅಂಬ್ರಾ ಮುರಿದಿದ್ದಾರೆ. ಈ ಕುರಿತು ಮಾತನಾಡಿರುವ ಅಂಬ್ರಾ, ಬಾಲ್ಯದಿಂದಲೂ ನಾನು ಯಾವಾಗಲೂ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕಗಳ ಮುಖ್ಯಪಾತ್ರಗಳನ್ನು ಮೆಚ್ಚುಗೆಯಿಂದ ಅನುಸರಿಸುತ್ತಿದ್ದೇನೆ ಮತ್ತು ಈಗ ಅದರ ಭಾಗವಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಂಬ್ರಾ ಅವರು ಅಮೆರಿಕದ ಡಾಂಟೆ ಬಾರ್ನ್ಸ್ ಅವರ ಚಿತ್ರಗಳನ್ನು ನೋಡಿ ಪ್ರೇರೇಪಣೆಯಿಂದ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪುಸ್ತಕಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ಹೆಸರು ಸೇರಿಕೊಳ್ಳುವ ಮೊದಲು ಅವರು ನಾಲಿಗೆಯನ್ನು ಉಬ್ಬಿಸಿ ಸ್ನೇಹಿತರನ್ನು ಮೆಚ್ಚಿಸುತ್ತಿದ್ದರು. ಇದು ಅವರ ಮೋಜಿನ ಪಾರ್ಟಿಯ ಒಂದು ಟ್ರಿಕ್ ಅಷ್ಟೇ ಆಗಿತ್ತು.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ದಾಖಲೆಗಾಗಿ ಅಂಬ್ರಾ ಅವರ ನಾಲಿಗೆಯನ್ನು ವೈದ್ಯರು ಮೂರು ಬಾರಿ ಅಳೆದಿದ್ದು, ಸರಾಸರಿ ಅಳತೆಯು ಅಂತಿಮ ಮೊತ್ತವಾಗಿದೆ.
Mark Zuckerberg: ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ!
ಕೆಲವು ಸಂಶೋಧನೆ ಮಾಡಿದ ಬಳಿಕ ಅಂಬ್ರಾ ತಮ್ಮ ನಾಲಿಗೆಯನ್ನು ಗೋಲಾಕಾರ ಮಾಡುವುದರಲ್ಲಿ ಪರಿಣಿತರಾಗಿದ್ದರು ಹಾಗೂ ನಾಲಿಗೆಯನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ಅರಿತುಕೊಂಡರು.