ಜಕಾರ್ತ: ಇಂಡೊನೇಷ್ಯಾ ಸೇನೆಗೆ ಹೊಸದಾಗಿ ನಿಯುಕ್ತರಾದ ಮಹಿಳಾ ಸೈನಿಕರಿಗೆ ಕಡ್ಡಾಯವಾಗಿ ನಡೆಸುತ್ತಿದ್ದ ಕನ್ಯತ್ವ ಪರೀಕ್ಷೆಯನ್ನು ರದ್ದು ಪಡಿಸಿದೆ. ಈ ನಿರ್ಧಾರವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಸ್ವಾಗತಿಸಿದೆ.
7 ವರ್ಷಗಳ ಹಿಂದೆಯೇ ಕನ್ಯತ್ವ ಪರೀಕ್ಷೆಗೆ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿತ್ತು. ಅದರ ಹೊರತಾಗಿಯೂ ಇಂಡೊನೇಷ್ಯಾ ಸೇನೆ ತನ್ನ ಮಹಿಳಾ ಸೈನಿಕರಿಗೆ ಕನ್ಯತ್ವ ಪರೀಕ್ಷೆ ನಡೆಸುತ್ತಿತ್ತು.
ಜಗತ್ತಿನಾದ್ಯಂತ ಕನ್ಯತ್ವ ಪರೀಕ್ಷೆಯ ಹೆಸರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿತ್ತು. ಇದನ್ನು ಮನಗಂಡು ವಿಶ್ವ ಆರೋಗ್ಯ ಸಂಸ್ಥೆ ಆ ಘೋಷಣೆ ಹೊರಡಿಸಿತ್ತು. ಇಂಡೊನೇಷ್ಯಾದ ವಾಯುಪಡೆ ಮತ್ತು ನೌಕಾಪಡೆಗಳಲ್ಲಿ ಕನ್ಯತ್ವ ಪರೀಕ್ಷೆ ಚಾಲ್ತಿಯಲ್ಲಿದ್ದು, ಅಲ್ಲಿಯೂ ಆ ಪರೀಕ್ಷೆಯನ್ನು ರದ್ದುಗೊಳಿಸಬೇಕೆನ್ನುವ ಆಗ್ರಹ ಕೇಳಿ ಬಂದಿದೆ.