Monday, 16th September 2024

ಆಹಾರ ಯೋಜನೆಯಡಿ ಲಂಚಾರೋಪ: ಇಂಡೋನೇಶ್ಯಾ ಸಚಿವರ ಬಂಧನ

ಜಕಾರ್ತಾ: ₹8.85 ಕೋಟಿ (1.2 ಮಿಲಿಯನ್‌ ಡಾಲರ್‌) ಲಂಚ ಸ್ವೀಕರಿಸಿದ ಆರೋಪದಡಿ ಇಂಡೊನೇಷ್ಯಾದ ಸಾಮಾಜಿಕ ವ್ಯವಹಾರಗಳ ಸಚಿವರನ್ನುಭಾನುವಾರ ಬಂಧಿಸಲಾಗಿದೆ. ಕೋವಿಡ್‌ ಸಂತ್ರಸ್ತರ ಆಹಾರ ಯೋಜನೆಗೆ ಸಂಬಂಧಿಸಿದಂತೆ ಈ ಪ್ರಕರಣವಾಗಿದೆ.

ಇಂಡೊನೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳವು ಸಚಿವ ಜೂಲಿಯಾರಿ ಬಟುಬರಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ₹8.85 ಕೋಟಿ ಮೊತ್ತ ಒಳಗೊಂಡ ಸೂಟ್‌ಕೇಸ್‌, ಬ್ಯಾಗ್‌ ಅನ್ನು ವಶಕ್ಕೆ ಪಡೆದಿತ್ತು.

ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರು, ‘ಇದು ಜನರ ಹಣ. ಕೋವಿಡ್‌-19 ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಇದರ ಅಗತ್ಯವಿದೆ. ನಾನು ಯಾವುದೇ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ’ ಎಂದರು.

ಕೋವಿಡ್‌ನಿಂದಾಗಿ ಇಂಡೊನೇಷ್ಯಾದ ಆರ್ಥಿಕತೆಯು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಸಮಸ್ಯೆಗೊಳಗಾಗಿರುವ ಜನರಿಗಾಗಿ ಸರ್ಕಾರವು ಆಹಾರ ಪ್ಯಾಕೆಜ್‌ಗಳಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಸಂತ್ರಸ್ಥರಿಗೆ ಆಹಾರ ವಿತರಣೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳಿಬ್ಬರಿಂದ ಜೂಲಿಯಾರಿ ₹8.85 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

Leave a Reply

Your email address will not be published. Required fields are marked *