Monday, 16th September 2024

ಯುಎನ್‌ಸಿಡಿಎಫ್‌ನ ಅತ್ಯುನ್ನತ ಹುದ್ದೆಗೆ ಪ್ರೀತಿ ಸಿನ್ಹಾ ನೇಮಕ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಬಂಡವಾಳ ಅಭಿವೃದ್ಧಿ ನಿಧಿಯ ಭಾರತೀಯ ಮೂಲದ ಹೂಡಿಕೆ ಮತ್ತು ಅಭವೃದ್ಧಿ ಬ್ಯಾಂಕರ್‌ ಪ್ರೀತಿ ಸಿನ್ಹಾ ರನ್ನು ಕಾರ್ಯನಿರ್ವಾಹಕ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದೆ.

ಯುಎನ್‌ಸಿಡಿಎಫ್‌ನ ಅತ್ಯುನ್ನತ ಹುದ್ದೆಯನ್ನು ಸಿನ್ಹಾ ಅವರು ಸೋಮವಾರ ಅಲಂಕರಿಸಿದರು. ಜುಡಿತ್‌ ಕಾರ್ಲ್‌ ಅವರ ನಿವೃತ್ತಿಯಿಂದ ತೆರವಾದ ಸ್ಥಾನ ಸಿನ್ಹಾ ಅವರಿಗೆ ದೊರೆತಿದೆ. ಕಾರ್ಲ್‌ ಅವರು ವಿಶ್ವಸಂಸ್ಥೆಯಲ್ಲಿ 30 ವರ್ಷಗಳವರೆಗೆ ಸೇವೆ ಸಲ್ಲಿಸಿದ್ದಾರೆ.

1966ರಲ್ಲಿ ಸ್ಥಾಪನೆಯಾದ ಯುಎನ್‌ಸಿಡಿಎಫ್‌ ನ್ಯೂಯಾರ್ಕ್‌ನಲ್ಲಿ ಕೇಂದ್ರ ಕಚೇರಿ ಹೊಂದಿದೆ. ಇದು ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೇಶಗಳಿಗೆ ಆರ್ಥಿಕ ನೆರವನ್ನು ಒದಗಿಸುತ್ತದೆ.

ಪ್ರೀತಿ ಅವರು, ಮಹಿಳೆಯರು, ಯುವಕರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ನಿರ್ದಿಷ್ಟ ಒತ್ತು ನೀಡಲಿದ್ದಾರೆ. ಸಣ್ಣ ಹಿಡುವಳಿದಾರ ರೈತರು ಮತ್ತು ಅವಕಾಶ ವಂಚಿತ ಸಮುದಾಯಗಳ ಏಳಿಗೆಗೆ ಪ್ರೋತ್ಸಾಹ ನೀಡಲಿದ್ದಾರೆ.

 

Leave a Reply

Your email address will not be published. Required fields are marked *