Thursday, 19th September 2024

Road Accident: ಇಂಧನ ಟ್ಯಾಂಕರ್ ಸ್ಫೋಟ: ನೈಜೀರಿಯಾದಲ್ಲಿ 48 ಮಂದಿ ಸಾವು

Road Accident

ನೈಜೀರಿಯಾದಲ್ಲಿ (Nigeria) ಇಂಧನ ಟ್ಯಾಂಕರ್ ಮತ್ತು ಟ್ರಕ್ (Fuel tanker and truck) ಮುಖಾಮುಖಿ ಡಿಕ್ಕಿಯಾಗಿ (Road Accident) ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಇಂಧನ ಟ್ಯಾಂಕರ್ ಸ್ಫೋಟಗೊಂಡ (tanker blast) ಪರಿಣಾಮ ಹೆಚ್ಚಿನ ಜನರು ಮೃತಪಟ್ಟಿದ್ದಾರೆ ಎಂದು ದೇಶದ ತುರ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.

ನೈಜೀರಿಯಾದ ಉತ್ತರ- ಮಧ್ಯ ನೈಜರ್ ರಾಜ್ಯದ ಅಗೈ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಇಂಧನ ಟ್ಯಾಂಕರ್ ಮತ್ತೊಂದು ಟ್ರಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಟ್ಯಾಂಕರ್ ಸ್ಫೋಟವಾಗಿದೆ. ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

Road Accident

ಟ್ರಕ್ ನಲ್ಲಿ ದನಗಳನ್ನು ಸಾಗಿಸಲಾಗುತ್ತಿದ್ದು, ಇದರಲ್ಲಿ 50 ಜೀವಂತವಾಗಿ ದಹನವಾಗಿದೆ. ಅಪಘಾತದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತುರ್ತಾಗಿ ನಡೆಸಲಾಗಿದೆ ಎಂದು ನೈಜರ್ ರಾಜ್ಯ ತುರ್ತು ನಿರ್ವಹಣಾ ಏಜೆನ್ಸಿಯ ಮಹಾನಿರ್ದೇಶಕ ಅಬ್ದುಲ್ಲಾಹಿ ಬಾಬಾ-ಅರಬ್ ಹೇಳಿದ್ದಾರೆ.

ಬಾಬಾ- ಅರಬ್ ಆರಂಭದಲ್ಲಿ 30 ಶವಗಳು ಪತ್ತೆಯಾಗಿತ್ತು. ಬಳಿಕ ಘರ್ಷಣೆಯಲ್ಲಿ ಸುಟ್ಟು ಕರಕಲಾದ ಹೆಚ್ಚುವರಿ 18 ಶವಗಳು ಕಂಡುಬಂದಿವೆ. ಮೃತರ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿದೆ.

ನೈಜರ್ ರಾಜ್ಯದ ಗವರ್ನರ್ ಮೊಹಮ್ಮದ್ ಬಾಗೊ, ಪೀಡಿತ ಪ್ರದೇಶದ ನಿವಾಸಿಗಳು ಶಾಂತವಾಗಿರಬೇಕು ಮತ್ತು ರಸ್ತೆ ಬಳಕೆದಾರರು ಯಾವಾಗಲೂ ಜಾಗರೂಕರಾಗಿರಿ. ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ರಸ್ತೆ ಸಂಚಾರ ನಿಯಮಗಳಿಗೆ ಬದ್ಧರಾಗಿರಿ ಎಂದು ಹೇಳಿದ್ದಾರೆ.

ಸರಕುಗಳನ್ನು ಸಾಗಿಸಲು ರೈಲು ಸಾರಿಗೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಆಫ್ರಿಕಾದ ಅತ್ಯಂತ ಜನನಿಬಿಢ ದೇಶವಾದ ನೈಜೀರಿಯಾದ ಹೆಚ್ಚಿನ ಪ್ರಮುಖ ರಸ್ತೆಗಳಲ್ಲಿ ಮಾರಣಾಂತಿಕ ಟ್ರಕ್ ಅಪಘಾತಗಳು ಸಂಭವಿಸುತ್ತಿರುತ್ತದೆ. ಅಲ್ಲದೆ ಅಜಾಗರೂಕ ಚಾಲನೆ, ಕಳಪೆ ರಸ್ತೆ ಪರಿಸ್ಥಿತಿ, ಕಳಪೆ ನಿರ್ವಹಣೆಯ ವಾಹನಗಳು ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನುತ್ತಾರೆ ತಜ್ಞರು. ನೈಜೀರಿಯಾವು 220 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.

ನೈಜೀರಿಯಾದ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ ಪ್ರಕಾರ, 2020ರಲ್ಲಿ ಅತೀ ಹೆಚ್ಚು ಅಂದರೆ 1,531 ಗ್ಯಾಸೋಲಿನ್ ಟ್ಯಾಂಕರ್ ಅಪಘಾತಕ್ಕೀಡಾಗಿ 535 ಮಂದಿ ಮೃತಪಟ್ಟಿದ್ದು, 1,142 ಮಂದಿ ಗಾಯಗೊಂಡಿದ್ದರು.

Viral News: ವಿಸರ್ಜನೆಯ ವೇಳೆ ಎಡವಟ್ಟು, 65 ಗ್ರಾಂ ಚಿನ್ನದ ಸರದ ಸಮೇತ ಮುಳುಗಿದ ಗಣೇಶ ಮೂರ್ತಿ!

ನೈಜೀರಿಯನ್ ನ್ಯಾಷನಲ್ ಪೆಟ್ರೋಲಿಯಂ ಕಂಪೆನಿ (ಎನ್‌ಎನ್‌ಪಿಸಿ) ಲಿಮಿಟೆಡ್ ಕಳೆದ ವಾರ ಪೆಟ್ರೋಲ್ ಬೆಲೆಯನ್ನು ಕನಿಷ್ಠ ಶೇ. 39ರಷ್ಟು ಹೆಚ್ಚಿಸಿದೆ. ಇದು ಒಂದು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಎರಡನೇ ಪ್ರಮುಖ ಹೆಚ್ಚಳವಾಗಿದೆ. ಆದರೆ ಕೊರತೆ ಮುಂದುವರಿದಿದ್ದು, ದೇಶದ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

Leave a Reply

Your email address will not be published. Required fields are marked *