Monday, 16th September 2024

ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ಮೂರು ರಾಕೆಟ್‌ ದಾಳಿ

ಕಾಬೂಲ್‌: ‌ಅಫ್ಗಾನಿಸ್ತಾನ ಅಧ್ಯಕ್ಷ ಆಶ್ರಫ್ ಘನಿ ಅವರ ನಿವಾಸದ ಸಮೀಪದ ಮೈದಾನದಲ್ಲಿ ಮಂಗಳ ವಾರ ಮೂರು ರಾಕೆಟ್‌ಗಳು ದಾಳಿ ನಡೆದಿರುವುದು ವರದಿಯಾಗಿದೆ.

ಮುಸ್ಲಿಂ ಸಮುದಾಯದ ತ್ಯಾಗ- ಬಲಿದಾನಗಳ ಹಬ್ಬ ಈದ್‌ ಅಲ್‌-ಅಧಾಕ್ಕೆ ಒಂದು ದಿನ ಬಾಕಿ ಇರು ವಂತೆಯೇ ದಾಳಿ ನಡೆದಿದೆ. ಘಟನೆಯಲ್ಲಿ ಒಂದು ಕಾರು ಭಸ್ಮವಾಗಿದೆ. ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ ಎಂದು ‌ಆಂತರಿಕ ಸಚಿವಾಲಯದ ವಕ್ತಾರ ಹೇಳಿದ್ದಾರೆ.

ಅಧ್ಯಕ್ಷರ ನಿವಾಸದ ಸುತ್ತಾ ಭದ್ರವಾದ ಸಿಮೆಂಟ್ ಗೋಡೆಗಳಿವೆ. ಭವನ ಸಂಪರ್ಕಿಸುವ ಸುತ್ತಮುತ್ತಲಿನ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ. ಅಮೆರಿಕ ತನ್ನ ಸೇನಾಪಡೆಗಳನ್ನು ‌ಅಫ್ಗಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ ನಂತರ, ಅಫ್ಗನ್ ಮತ್ತು ತಾಲಿಬಾನಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ‌

Leave a Reply

Your email address will not be published. Required fields are marked *