Thursday, 19th September 2024

Russia Helicopter Missing: ಉಕ್ರೇನ್‌ ಜೊತೆಗಿನ ಸಮರದ ನಡುವೆಯೇ 22 ಜನರಿದ್ದ ರಷ್ಯಾ ಹೆಲಿಕಾಪ್ಟರ್‌ ಮಿಸ್ಸಿಂಗ್‌

Russia helicopter Missing

ಮಾಸ್ಕೋ: ಪ್ರಸ್ತುತ ನಡೆಯುತ್ತಿರುವ ರಷ್ಯಾ-ಉಕ್ರೇನ್‌  ನಡುವಿನ ಸಮರದ ಮಧ್ಯೆಯೇ ಒಟ್ಟು 22ಮಂದಿಯನ್ನು ಹೊತ್ತೊಯ್ಯತ್ತಿದ್ದ ರಷ್ಯಾ ಹೆಲಿಕಾಪ್ಟರ್‌ವೊಂದು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಕಮ್ಚಟ್ಕಾದ ಪೂರ್ವ ಪೆನಿನ್‌ಸುಲಾ ಪ್ರದೇಶದಲ್ಲಿ ಎಂಐ-8ಟಿ(Mi-8T ) ಹೆಲಿಕಾಪ್ಟರ್‌ ನಾಪತ್ತೆ(Russia Helicopter Missing)ಯಾಗಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ.

ವಚ್ಕಾಜೆಟ್ಸ್ ಪ್ರದೇಶದಿಂದ ಟೇಕ್‌ ಮಾಡಿದ್ದ ಎಂಐ-8ಟಿ ಹೆಲಿಕಾಪ್ಟರ್‌ನಲ್ಲಿ ಮೂವರು ಸಿಬ್ಬಂದಿ ಸೇರಿದಂತೆ ಒಟ್ಟು 22ಮಂದಿ ಇದ್ದರು. ಬಳಿಕ ಗಮ್ಯ ಸ್ಥಾನವನ್ನು ವಿಮಾನ ತಲುಪಿಲ್ಲ. ಟೇಕ್‌ ಆಫ್‌ ಆದ ನಂತರ ಹೆಲಿಕಾಪ್ಟರ್‌ ಸಂಪರ್ಕ ಕಳೆದುಕೊಂಡಿದೆ. ಇನ್ನು ಕಳೆದ 24 ಗಂಟೆಗಳಲ್ಲಿಉಕ್ರೇನ್‌ ಗಡಿ ಸಮೀಪ ರಷ್ಯಾ ಹಾರಿಸಿದ್ದ 52 ಡ್ರೋನ್‌ಗಳಲ್ಲಿ 24 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ. ಹೀಗಾಗಿ ಹೆಲಿಕಾಪ್ಟರ್‌ ಕಣ್ಮರೆಯಾಗಿರುವ ಹಿಂದೆ ಉಕ್ರೇನ್‌ ಕೈವಾಡ ಇರುವ ಬಗ್ಗೆ  ರಷ್ಯಾ ಶಂಕಿಸಿದೆ.

Mi-8, 1960 ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಅವಳಿ-ಎಂಜಿನ್ ಹೆಲಿಕಾಪ್ಟರ್, ಆಗಾಗ್ಗೆ ಅಪಘಾತಗಳ ಇತಿಹಾಸದ ಹೊರತಾಗಿಯೂ, ರಷ್ಯಾ ಮತ್ತು ಇತರ ದೇಶಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತದೆ. ಸದ್ಯ ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿರುವ ಹೆಲಿಕಾಪ್ಟರ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ರಷ್ಯಾದ ಸುದ್ದಿ ವರದಿಯ ಪ್ರಕಾರ, ವಚ್ಕಜೆಟ್ಸ್ ಜ್ವಾಲಾಮುಖಿ ಪ್ರದೇಶದಿಂದ 25 ಕಿಮೀ ದೂರದ ನಿಕೋಲೇವ್ಕಾ ಗ್ರಾಮಕ್ಕೆ ಹೊರಟ ವಿತ್ಯಾಜ್-ಏರೋ ಎಂಐ -8 ಟಿ ಹೆಲಿಕಾಪ್ಟರ್, ಮಾಸ್ಕೋ ಸಮಯದ 07:15 ರ ನಿಗದಿತ ಚೆಕ್-ಇನ್ ಸಮಯದಲ್ಲಿ ಸಂಪರ್ಕ ಕಳೆದುಕೊಂಡಿದೆ.

https://x.com/GlobeNewsStream/status/1829802869156901030

ರಷ್ಯಾದ ತುರ್ತು ಸಚಿವಾಲಯವು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲು ರಕ್ಷಕರನ್ನು ಹೊಂದಿರುವ Mi-8 ಹೆಲಿಕಾಪ್ಟರ್ ಅನ್ನು ಕಳುಹಿಸಿದೆ. ಮತ್ತೊಂದೆಡೆ, ತನಿಖಾ ಸಮಿತಿಯು ಈ ದುರ್ಘಟನೆಗೆ ಸೂಕ್ತ ಕಾರಣ ಏನೆಂಬುದರ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ.

ಈ ವರ್ಷದ ಆರಂಭದಲ್ಲಿ, ಜನವರಿಯಲ್ಲಿ, ಉತ್ತರ ಅಫ್ಘಾನಿಸ್ತಾನದಲ್ಲಿ ಮಾಸ್ಕೋಗೆ ಹೊರಟಿದ್ದ ರಷ್ಯಾದ ಚಾರ್ಟರ್ ವಿಮಾನದ ಅಪಘಾತದಲ್ಲಿ ನಾಲ್ಕು ಜನರು ಬದುಕುಳಿದರು. ಚಾರ್ಟರ್ಡ್ ಆಂಬ್ಯುಲೆನ್ಸ್ ವಿಮಾನವು ಥಾಯ್ಲೆಂಡ್‌ನ ಉಟಾಪಾವೊ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆಗಿ ರಷ್ಯಾದ ಝುಕೊವ್ಸ್ಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿತ್ತು ಎಂದು ರಷ್ಯಾದ ವಾಯುಯಾನ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ವಿಮಾನವು ಫ್ರೆಂಚ್ ನಿರ್ಮಿತ ಡಸ್ಸಾಲ್ಟ್ ಫಾಲ್ಕನ್ 10 ಜೆಟ್, ಅಥ್ಲೆಟಿಕ್ ಗ್ರೂಪ್ LLC ಮತ್ತು ಖಾಸಗಿ ವ್ಯಕ್ತಿಯ ಸಹ-ಮಾಲೀಕತ್ವವನ್ನು ಹೊಂದಿತ್ತು. ವಿಮಾನದಲ್ಲಿ ನಾಲ್ವರು ಸಿಬ್ಬಂದಿ ಹಾಗೂ ಇಬ್ಬರು ಪ್ರಯಾಣಿಕರಿದ್ದರು.