Mass Stabbing: ನಿರಾಶ್ರಿತರ ತಾಣಕ್ಕೆ ನುಗ್ಗಿ ಚಾಕು ಇರಿದ ವ್ಯಕ್ತಿ; 11 ಮಂದಿಗೆ ಗಂಭೀರ ಗಾಯ
ಒರೆಗಾನ್‌ನ ಸೇಲಂನಲ್ಲಿರುವ ಯೂನಿಯನ್ ಗಾಸ್ಪೆಲ್ ಮಿಷನ್‌ನ ಪುರುಷರ ನಿರಾಶ್ರಿತ ತಾಣದಲ್ಲಿ ಭಾನುವಾರ ವ್ಯಕ್ತಿಯೊಬ್ಬ ಮಲಗಿದ್ದವರ ಮೇಲೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ 11 ಮಂದಿಗೆ ಗಂಭೀರವಾಗಿ ಗಾಯವಾಗಿದೆ. ಈ ನಿರಾಶ್ರಿತ ತಾಣ ಕಮರ್ಷಿಯಲ್ ಸ್ಟ್ರೀಟ್ ಈಶಾನ್ಯದ 700 ಬ್ಲಾಕ್‌ನಲ್ಲಿದೆ.


ಸೇಲಂ: ಒರೆಗಾನ್‌ನ ಸೇಲಂನಲ್ಲಿರುವ ಯೂನಿಯನ್ ಗಾಸ್ಪೆಲ್ ಮಿಷನ್‌ನ ಪುರುಷರ ನಿರಾಶ್ರಿತ (Mass Stabbing) ತಾಣದಲ್ಲಿ ಭಾನುವಾರ ವ್ಯಕ್ತಿಯೊಬ್ಬ ಮಲಗಿದ್ದವರ ಮೇಲೆ ಚಾಕು ಇರಿದಿದ್ದಾನೆ. ಘಟನೆಯಲ್ಲಿ 11 ಮಂದಿಗೆ ಗಂಭೀರವಾಗಿ ಗಾಯವಾಗಿದೆ. ಈ ನಿರಾಶ್ರಿತ ತಾಣ ಕಮರ್ಷಿಯಲ್ ಸ್ಟ್ರೀಟ್ ಈಶಾನ್ಯದ 700 ಬ್ಲಾಕ್‌ನಲ್ಲಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಸಂಜೆ 7.15 ರ ಸುಮಾರಿಗೆ ಬಂದ ಕರೆಗೆ ಸೇಲಂ ಪೊಲೀಸರು ಪ್ರತಿಕ್ರಿಯಿಸಿ ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದರು.
ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಅಧಿಕಾರಿಗಳು ಪಾದಚಾರಿ ಮಾರ್ಗದಲ್ಲಿ ಮುಖಮುಚ್ಚಿ ಮಲಗಿದ್ದ ವ್ಯಕ್ತಿಯನ್ನು ಬಂಧಿಸುತ್ತಿರುವುದನ್ನು ತೋರಿಸಲಾಗಿದೆ. ಪೊಲೀಸ್ ಚಟುವಟಿಕೆಯಿಂದಾಗಿ ಈಶಾನ್ಯ ಡಿ ಸ್ಟ್ರೀಟ್‌ನ ರಸ್ತೆಗಳನ್ನು ಮುಚ್ಚಲಾಗಿದೆ. ಘಟನಾ ಸ್ಥಳದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ, ಅವುಗಳಲ್ಲಿ ಒಂದು ಅಧಿಕಾರಿಗಳು ಶಂಕಿತನನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವುದನ್ನು ತೋರಿಸುತ್ತದೆ. ಈವರೆಗೆ, ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಶಂಕಿತನ ಗುರುತು ಮತ್ತು ಉದ್ದೇಶ ಇನ್ನೂ ತಿಳಿದುಬಂದಿಲ್ಲ.
ಒಬ್ಬ ಬಲಿಪಶುವಿನ ಕುತ್ತಿಗೆಯಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಆ ವ್ಯಕ್ತಿ ಕನಿಷ್ಠ ಏಳು ಜನರಿಗೆ ಇರಿದಿರುವುದನ್ನು ತಾನು ಗಾಬರಿಯಿಂದ ನೋಡುತ್ತಿದ್ದೆ ಎಂದು ಪ್ರತ್ಯಕ್ಷದರ್ಶಿ ಮಲಿಕ್ ಲಾ ಹೇಳಿದರು. ಎಲ್ಲರೂ ಮೂಲತಃ ತಮ್ಮ ದಾರಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಅವರು ಹೇಳಿದ್ದಾರೆ. ನಿರಾಶ್ರಿತ ತಾಣದಲ್ಲಿ ವಾಸಿಸುವ 62 ವರ್ಷದ ಡಾನ್ ಮಿಲ್ಸ್ ಕೂಡ ಶಂಕಿತ ವ್ಯಕ್ತಿ ಒಳಗೆ ಬಂದಾಗ ತಾನು ಫ್ರಂಟ್ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: Suhas Shetty Murder: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಕೊಲೆಗಾರರ ಹೆಡೆಮುರಿ ಕಟ್ಟುತ್ತೇವೆ ಎಂದ ಸಿಎಂ
ಆ ಸಮಯದಲ್ಲಿ ಕಟ್ಟಡಕ್ಕೆ ಸಾರ್ವಜನಿಕ ಪ್ರವೇಶ ಮುಚ್ಚಲಾಗಿತ್ತು. ನನಗೆ ಜೋರಾದ ಕಿರುಚಾಟ ಕೇಳಿತು. ನಾನು ಹೋಗಿ ನೋಡಿದಾಗ ಹಲವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಹೇಳಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.