ಜಕಾರ್ತಾ: ಪತನಗೊಂಡ ಶ್ರೀವಿಜಯ ಏರ್ ವಿಮಾನದ ಎರಡು ಕಪ್ಪು ಪೆಟ್ಟಿಗೆಗಳ ಸ್ಥಳಗಳನ್ನ ಭಾನುವಾರ ಒಂದು ದಿನದ ಶೋಧದ ನಂತರ ಗುರುತಿಸಲಾಗಿದೆ ಎಂದು ಇಂಡೋನೇಷ್ಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ ಮುಖ್ಯಸ್ಥ ತ್ಜಾಜೊನೊ ತಿಳಿಸಿದ್ದಾರೆ.
ಸ್ಫೋಟದ ಕುರಿತು ಮಾಹಿತಿಗಳನ್ನ ಹಂಚಿಕೊಳ್ಳುವ ಈ ಪೆಟ್ಟಿಗೆಗಳನ್ನ ಶೀಘ್ರದಲ್ಲೇ ಮರಳಿ ಪಡೆಯಲಾಗುತ್ತೆ ಎಂದು ಮಿಲಿಟರಿ ಮುಖ್ಯಸ್ಥ ಹಡಿ ಹೇಳಿದ್ದಾರೆ.
62ಕ್ಕೂ ಹೆಚ್ಚು ಮಂದಿಯನ್ನ ಹೊತ್ತು ಸಾಗುತ್ತಿದ್ದ ಶ್ರೀವಿಜಯ ಏರ್ ವಿಮಾನ ಎಸ್ ಜೆ 182 ವಿಮಾನ ನಾಪತ್ತೆಯಾಗಿತ್ತು. ರಕ್ಷಣೆ ಪಡೆಗಳ ಸತತ ಶೋಧನೆಯ ನಂತರ ವಿಮಾನ ಇಂಡೋನೇಷ್ಯಾದ ಜಕಾರ್ತಾದ ತಂಜುಂಗ್ ಪ್ರಿಯೋಕ್ ಬಂದರಿನಲ್ಲಿ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ವರದಿಯಾಗಿದೆ.