Monday, 16th September 2024

ವಿಶ್ವಸಂಸ್ಥೆಯ ಸಲಹಾ ಸಮಿತಿಗೆ ವಿದಿಶಾ ಮೈತ್ರಾ ಆಯ್ಕೆ

ವಿಶ್ವಸಂಸ್ಥೆ: ಭಾರತೀಯ ರಾಯಭಾರಿ ವಿದಿಶಾ ಮೈತ್ರಾ ಅವರು ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ.

ಏಷ್ಯಾ-ಫೆಸಿಪಿಕ್ ರಾಷ್ಟ್ರಗಳಿಂದ ವಿಶ್ವಸಂಸ್ಥೆಯ ಈ ಸಲಹಾ ಸಮಿತಿಗೆ ಆಯ್ಕೆಯಾದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಮೈತ್ರಾ ಅವರು 126 ಮತ ಪಡೆದಿರುವುದಾಗಿ ವರದಿ ಹೇಳಿದೆ.

193 ಸದಸ್ಯರನ್ನೊಳಗೊಂಡಿರುವ ಜನರಲ್ ಅಸೆಂಬ್ಲಿ, ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡುತ್ತದೆ. ಏಷ್ಯಾ-ಫೆಸಿಪಿಕ್ ರಾಷ್ಟ್ರಗಳ ಕೂಟದಿಂದ ಆಯ್ಕೆಯಾದ ಇಬ್ಬರಲ್ಲಿ ಮೈತ್ರಾ ಕೂಡಾ ಒಬ್ಬರಾಗಿದ್ದಾರೆ. ಈ ಕೂಟದಲ್ಲಿ ಇರಾಕ್ ನ ಅಲಿ ಮೊಹಮ್ಮದ್ ಫಾಯೆಖ್ ಅಲ್ ದಬಾಗ್ ಸ್ಪರ್ಧಿಸಿದ್ದು, ಕೇವಲ 64 ಮತ ಪಡೆದು ಪರಾಜಯಗೊಂಡಿದ್ದಾರೆ.

ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಅಯವ್ಯಯ ಪ್ರಶ್ನೆಗಳ(ಎಸಿಎಬಿಕ್ಯೂ) ಕುರಿತ ಸಲಹಾ ಸಮಿತಿ ಮೂರು ವರ್ಷದ ಅವಧಿ ಯದ್ದಾಗಿದೆ. 2021ರ ಜನವರಿ 1ರಿಂದ ಮೈತ್ರಾ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

 

Leave a Reply

Your email address will not be published. Required fields are marked *