ಬೈಕ್ ಖರೀದಿಯಲ್ಲಿ ಬಣ್ಣಗಳದೇ ಪಾರಮ್ಯ
ಬೈಕ್ ಖರೀದಿಯಲ್ಲಿ ಬಣ್ಣಗಳದೇ ಪಾರಮ್ಯ
Vishwavani News
October 11, 2022
ಬೈಕೋಬೇಡಿ
ಅಶೋಕ್ ನಾಯಕ್
ಯುವ ಜನಾಂಗಕ್ಕೆ ಬೈಕ್ ರೈಡ್ ಎಂದರೇನೆ ಭಾರೀ ಕ್ರೇಜ್. ಚಿಕ್ಕಂದಿನಿಂದಲೂ ಸೈಕಲ್ ಓಡಿಸಿಯೇ ಅಭ್ಯಾಸವಿದ್ದವರು, ಬೈಕ್ ಸಿಕ್ಕಾಗ ಸಿಕ್ಕಾಪಟ್ಟೆ ಖುಷಿಪಡ್ತಾರೆ. ಇದು ಹೊಸ ಬಟ್ಟೆ ಹಾಗೂ ಹೊಸತಾಗಿ ಶಾಲೆಗೋ ಸೇರಿದಾಗ ಸಂತಸಗೊಳ್ಳುವ ಕ್ಷಣ. ಇಂತಹ ಕ್ಷಣಗಳನ್ನು ಯಾವನೇ ಆಗಲಿ ಮಿಸ್ ಮಾಡಲು ಇಷ್ಟಪಡಲ್ಲ. ಕೆಲವೇ ಕೆಲವು ಬಣ್ಣಗಳಿಗೆ ಸೀಮಿತವಾಗಿದ್ದ ಬೈಕ್ ಈಗ ಬೇರೆ ಬೇರೆ ರೀತಿಯ ಅಂದರೆ, ಎಂದು ಕೇಳದ ಸಮ್ಮಿಶ್ರ ಬಣ್ಣಗಳಲ್ಲಿ ಅವತಾರ ತಾಳುತ್ತಿದ್ದು, ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ.
ಜಾವಾ ೪೨ ಬೊಬ್ಬರ್
ಪ್ರತೀ ಗಂಟೆಗೆ ೩೦ ಕಿಮೀ ಮೈಲೇಜ್ ನೀಡುವ ಈ ಬೈಕ್ ನಲ್ಲಿ ೩೩೪ ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಬೈಕ್ ಕ್ರೂಸರ್ ವಾಹನವಾಗಿದ್ದು, ಎರಡು ಲಕ್ಷ ರೂಪಾಯಿ ಆಸುಪಾಸಿನಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಎಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ ಇದೆ. ತನ್ನ ಮಾಡೆಲನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಈ ಬೈಕ್ ಒಂದೇ ವೇರಿಯಂಟ್ ಹಾಗೂ ಮೂರು ಬಣ್ಣಗಳಲ್ಲಿ ಲಭ್ಯವಿದೆ.
ಜಾವಾ ಯೆಜ್ದಿ ಕಂಪೆನಿಯ ಈ ಮಾಡೆಲ್ನಲ್ಲಿ ೬ ಸ್ಪೀಡ್ ರ್ಗೇ ಬಾಕ್ಸ್ ನೀಡಲಾಗಿದೆ. ಜಾವಾ ಪೆರಾಕ್ ನಂತೆ ಕಾಣುವ ಈ ಬೈಕ್, ಡಿಸೈನ್ನಿಂದಲೇ ಬೆರಗು ಮೂಡಿಸುತ್ತವೆ. ಇದಕ್ಕೆ ಬಾಡಿ ವರ್ಕ್ ಕಡಿಮೆ ಬೀಳುತ್ತೆ.
ಗುಂಡಾದ ಹೆಡ್ ಲೈಟ, ಫ್ಲ್ಯಾಟ್ ಹ್ಯಾಂಡಲ್ ಬಾರ್, ಎರಡು ಹಂತದ ಅಡ್ಜಸ್ಟ್ ರೈಡರ್ ಹಾಗೂ ಫೋರ್ಕ್ ಟ್ಯೂಬ್ ಕವರ್ ಹಾಗೂ ವಯರ್ ಸ್ಪೋಕ್ ಚಕ್ರಗಳು ವಾಹನದ ಡಿಸೈನ್ನ್ನು ಎತ್ತಿ ತೋರಿಸುತ್ತದೆ. ಎಲ್ಇಡಿ ಲೈಟಿಂಗ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಯೆಜ್ಸಿಯ ಇತರ ಬೈಕುಗಳಂತೆ ಸ್ವಿಚ್ ಗೇರ್, ಯುಎಸ್ಬಿ ಚಾರ್ಜರ್ ಪಾಯಿಂಟ್ ಮುಂತಾದವು ಅಸಾಮಾನ್ಯವಾಗಿವೆ. ಬ್ರೇಕಿಂಗ್ ಹಾರ್ಡ್ ವೇರ್ ನಲ್ಲಿ ಸಿಂಗಲ್ ಡಿಸ್ಕ ಅನ್ನು ಎರಡೂ ಚಕ್ರಗಳಿಗೆ ನೀಡಲಾಗಿದೆ.
ಎಪ್ರಿಲಿಯಾ ಎಸ್‌ಎಕ್ಸ್‌ಆರ್ ೧೬೦
ಎಪ್ರಿಲಿಯಾ ವಾಹನ ತಯಾರಿಕಾ ಕಂಪನಿಯು ಕಳೆದ ಮೇ ನಲ್ಲಿ ತನ್ನ ಉತ್ಪನ್ನದ ಬೆಲೆಯನ್ನು ಹೆಚ್ಚಿಸಿದೆ. ದೀರ್ಘ ವರ್ಷಗಳ ನಂತರ ಎಸ್‌ಎಕ್ಸ್ ಆರ್ ೧೬೦ ಮಾಡೆಲನ್ನು ಬಿಡುಗಡೆ ಮಾಡಿತ್ತು. ಆದರೆ, ಅಧಿಕೃತವಾಗಿ ಮಾರುಕಟ್ಟೆಗೆ ಬಂದಿದ್ದು ಕರೋನಾ ಕಾರಣದಿಂದಾಗಿ. ವಿಶೇಷ ಲಕ್ಷಣಗಳಾದ ಎಲಇಡಿ ಲೈಟಿಂಗ್, ಎಲ್ಸಿಡಿ ಇನ್ಸ್ ಸ್ಟ್ರುಮೆಂಟ್ ಕ್ಲಸ್ಟರ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ವೇಗ, ಟ್ಯಾಕೋಮೀಟರ್, ಮೈಲೇಜ್ ಹಾಗೂ ಸರಾಸರಿ ವೇಗ, ಜತೆಗೆ ಎಂಜಿನ್ ಮಾಲ್ಪಂಕ್ಷನ್ ಇಂಡಿಕೇಟರ್ ಒಳಗೊಂಡಿದೆ.
ಈ ಮಾಡೆಲ್ಗೆ ಯಾಮಾಹಾ ಏರೋಕ್ಸ್ ೧೫೫ ಪರಮ ವಿರೋಧಿ ಎಂದು ಹೇಳಲಾಗುತ್ತದೆ. ಇದಕ್ಕೆ ಟಿವಿಎಸ್ ಅಪಾಚೆ ಆರ್‌ಟಿಆರ್ ೨೦ ೪ವಿ ಹೊರತಲ್ಲ. ಸರಿ ಸುಮಾರು ಒಂದೂವರೆ ಲಕ್ಷ ರೂಪಾಯಿ ಆಸುಪಾಸಿನಲ್ಲಿ ಖರೀದಿಗೆ ಲಭ್ಯವಿದೆ.