ವಾಹನ ಖರೀದಿಯಲ್ಲಿ ಯಾಕೆ ಚೌಕಾಶಿ !?
ವಾಹನ ಖರೀದಿಯಲ್ಲಿ ಯಾಕೆ ಚೌಕಾಶಿ !?
Vishwavani News
November 1, 2022
ಬೈಕೋಬೇಡಿ
ಅಶೋಕ್ ನಾಯಕ್
ವಾಹನ ತಯಾರಿ ದೇಶದಲ್ಲಿ ಆಗುತ್ತೋ, ವಿದೇಶದಲ್ಲಿ ಆಗುತ್ತೋ ಈಗ ಅದು ಬಹುದೊಡ್ಡ ವಿಚಾರವೇ ಅಲ್ಲ. ಕಾರಣ, ಹಿಂದಿನ ಕಾಲದಂತೆ, ವಿದೇಶದಲ್ಲಿ ಸಿದ್ಧವಾದ ವಾಹನದ ಆಮದು ಅಷ್ಟು ಕಠಿಣವಲ್ಲ. ಇದಕ್ಕೆ ಅಗತ್ಯ ವಿಧಾನ ಅನುಸರಿಸಿದರೆ ಸಾಕು, ಕೆಲವೇ ದಿನಗಳಲ್ಲಿ ನೀವು ಇಷ್ಟಪಟ್ಟ ವಾಹನದ ಮಾಲೀಕರಾಗಿರುತ್ತೀರಿ.
ಇಲ್ಲಿ ತಾಳ್ಮೆ ವಹಿಸಬೇಕಷ್ಟೇ. ಈಗಿನ ಶಿಕ್ಷಿತರು ವಾಹನ ಖರೀದಿ ಕುರಿತಂತೆ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಕೇವಲ ಎಷ್ಟು ಖರ್ಚಾಗುತ್ತದೆ ಎಂಬುದರ ಕುರಿತು ಸ್ಪಷ್ಟತೆ ಇರಬೇಕಷ್ಟೇ. ಈಗ ವಾಹನದ ಲುಕ್, ಬಣ್ಣ, ಮೈಲೇಜ್ ಹಾಗೂ ಸ್ಥಳೀಯ ರಸ್ತೆಗಳಿಗೆ ಒಗ್ಗುತ್ತೋ ಎಂಬುದೇ ಈಗ ಆಲೋಚಿಸ ಬೇಕಾದ ವಿಷಯ.
ಸಮಯ ಕಳೆದಂತೆ, ನಾವೂ ಹೊಂದಿಕೊಂಡು ಹೋಗಬೇಕೆಂಬುದು ಇಲ್ಲೇ ನಾವು ತಿಳಿದುಕೊಳ್ಳಬೇಕು. ವಾಹನದತ್ತ ನಮ್ಮ ಕ್ರೇಜ್ ಕಡಿಮೆಯಾಗುವ ಮುನ್ನ ಎಲ್ಲಾ ಮಾಡೆಲ್ ಬಳಸಬೇಕೆಂಬುದು ಕೈಯಲ್ಲಿ ಕಾಸಿರುವವರ ಮನಸ್ಸಿನ ಆಸೆ ಕೂಡ ಹೌದು.
ಯಾಮಾಹಾ ಡಬ್ಲ್ಯುಆರ್ 155ಆರ್
ಇಂಡೋನೇಶಿಯಾದಲ್ಲಿ ಈ ವಾಹನ ಕಳೆದ ವರ್ಷ ಪರಿಚಯಿಸಲ್ಪಟ್ಟಿತು. ಇದಕ್ಕೂ ಮುನ್ನ ಥೈಲ್ಯಾಂಡಿನಲ್ಲಿ ಇದೇ ವಾಹನ ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾ ಯಿತು. ಇದರ ಬೆಲೆ ಎರಡೂವರೆ ಲಕ್ಷ ರೂಪಾಯಿ ಆಸುಪಾಸು. ಇದು ವೈಜೆಡ್‌ಎಫ್ ಆರ್೧೫ ವಿ೩ ಮಾಡೆಲ್ನಂತೆ ಓಡಬಲ್ಲದು. ೧೫೫ ಸಿಸಿ ಎಂಜಿನ್, ವಾಹನದ ಎದುರು ೨೧ ಇಂಚಿನ ಹಾಗೂ ಹಿಂದಿನ ಟೈರು ೧೮ ಇಂಚಿನದ್ದಾಗಿದ್ದು, ಬೈಕ್ ರೈಡ್ ಮಾಡುವ ಸಂದರ್ಭ ಯಾವುದೇ ಅಡೆತಡೆಗಳನ್ನು ಮೀರಬಲ್ಲದು. ಆದರೆ, ಇದಕ್ಕೆ ಎಬಿಎಸ್ ನೀಡಲಾಗಿಲ್ಲ.
ಭಾರತದಲ್ಲಿ ಆಗಿದ್ದರೆ, ಸಿಂಗಲ್ ಚಾನೆಲ್ ಎಬಿಎಸ್ ನೀಡಲಾಗುತ್ತಿತ್ತು. ಈ ವಾಹನದಲ್ಲಿ ೮.೧ ಲೀಟರು ಇಂಧನ ಸಂಗ್ರಹ ಸಾಧ್ಯತೆ ಇದೆ. ಯಮಹಾ ಬ್ರ್ಯಾಂಡ್‌ನ ಹೆಚ್ಚುಗಾರಿಕೆ, ಸುಖವಾದ ರೈಡಿಂಗ್, ವೇಗದ ಪಿಕ್‌ಅಪ್ ಮೊದಲಾದ ಸೌಕರ್ಯಗಳು ಈ ವಾಹನದ ವಿಶೇಷತೆ. ಸ್ಪೋರ್ಟಿ ಲುಕ್ ಇರುವುದರಿಂದಾಗಿ, ಇದು ಯುವಜನತೆಗೆ ಮೆಚ್ಚುಗೆಯಾಗ ಬಹುದು.
ಹೋಂಡಾ ಆಕ್ಟಿವಾ 6ಜಿ
ಟ್ಯೂಬ್ಲೆಸ್ ಟೈರ್ ಹೊಂದಿರುವ ಈ ಬೈಕಿನ ಎಂಜಿನ್ ೧೦೯.೫೦ ಸಿಸಿ ಸಾಮರ್ಥ್ಯವುಳ್ಳzಗಿದೆ. ವಾಹನದ ಆರಂಭಿಕ ದರ ೭೨
ಸಾವಿರ ಆಸುಪಾಸು. ಇದರಲ್ಲಿ ಡಿಲಕ್ಸ್ ವೇರಿಯಂಟ್ ಮಾಡೆಲ್ ದರ ೭೪ ಸಾವಿರ ರೂ. ಆಸುಪಾಸು ಇರುತ್ತದೆ. ಆಕ್ಟಿವಾ ೧೨೫ ನಂತರ ಆಕ್ಟಿವಾ ೬ಜಿ ವಾಹನ ಪರಿಚಯಿಸಲಾಗಿದೆ.
ಡಿಲಕ್ಸ್ ವೇರಿಯಂಟ್‌ನಲ್ಲಿ ಎಲಇಡಿ ಲೈಟನ್ನು ಪರಿಚಯಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಜಪಾನ್ ಮೂಲದ ಕಂಪೆನಿ ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಈ ವಾಹನಕ್ಕೆ ಎಸಿಜಿ ಸ್ಟಾರ್ಟರ್ ಮೋಟಾರನ್ನು ಅಳವಡಿಸಲಾಗಿದೆ. ಆಕ್ಟಿವಾ ೫ಜಿ ಗೆ
ಹೋಲಿಸಿದರೆ, ೬ಜಿ ಮಾಡೆಲ್‌ನಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ೧೨ ಇಂಚು ದಪ್ಪದ ಚಕ್ರ ಅಳವಡಿಸಲಾಗಿದೆ.
ಗೃಹೋಪಯೋಗಿ ಉಪಯೋಗಗಳಿಗೆ ಈ ವಾಹನ ಹೇಳಿ ಮಾಡಿಸಿದ್ದಾಗಿದೆ. ಸ್ಫರ್ಧೆ ವಿಚಾರದಲ್ಲಿ ಟಿವಿಎಸ್ ಜುಪಿಟರ್ ಹಾಗೂ
ಹೀರೋ ಪ್ಲೇಶರ್ ಪ್ಲಸ್ ನಿಕಟವಾಗಿದೆ. ಈ ಮಾಡೆಲ್ನಂತೆ ಅದೇ ದರದಲ್ಲಿ ಹೀರೋ ಸ್ಪ್ಲೆಂರ್ಡ ಪ್ಲಸ್, ಹೀರೋ ಪ್ಯಾಶನ್ ಪ್ರೊ ಹಾಗೂ ಹೋಂಡಾ ಡಿಯೋ ಲಭ್ಯವಿದೆ.