ಮೋಟರೋಲಾ ಹೊಸ ಫೋನ್
ಮೋಟರೋಲಾ ಹೊಸ ಫೋನ್
Vishwavani News
October 18, 2022
ಮೋಟರೋಲಾ ಸಂಸ್ಥೆಯು ನಿನ್ನೆ ಹೊಸ ಸ್ಮಾಟ್ ಫೋನ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೋಟೋ ಇ೨೨ಎಸ್ ಹೆಸರಿನ ಈ ಹೊಸ ಫೋನ್ ೬.೫ ಡಿಸ್ಪ್ಲೇ, ೫೦೦೦ ಎಂಎಎಚ್ ಬ್ಯಾಟರಿ, ೬೪ ಜಿಬಿ ಮೆಮೊರಿ, ಅಂದ್ರಾಯ್ಡ್ ೧೨ ಹೊಂದಿದೆ. ಇದರ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಬಳಸುವ ಮೂಲಕ ೧ಟಿಬಿಯ ತನಕ ಹೆಚ್ಚಿಸಬಹುದು.
೧೬ ಎಂಪಿ ಎ.ಐ. ಶಕ್ತಿಯ (ಕೃತಕ ಬುದ್ಧಿಮತ್ತೆ)ಯ ಕ್ಯಾಮೆರಾ, ಈ ಸ್ಮಾರ್ಟ್ಫೋನ್‌ನ ವಿಶೇಷತೆ. ವಿಡಿಯೋ ಮತ್ತು ಸ್ಟಿಲ್ ಫೋಟೋ ಗಳನ್ನು ತೆಗೆಯುವಾಗ ಡ್ಯುಎಲ್ ಕ್ಯಾಪ್ಚರ್ ತಂತ್ರ ಉಪಯೋಗಿಸಲು ಸಾಧ್ಯ. ಟೈಮ್ ಲ್ಯಾಪ್ಸ್, ಡ್ಯುಎಲ್ ಕ್ಯಾಪ್ಚರ್, ಫೇಸ್ ಬ್ಯೂಟಿ, ಲೈವ್ ಫಿಲ್ಟರ್, ಪನೋರಮಾ, ಪ್ರೊ ಮೋಡ್, ನೈಟ್ ವಿಷನ್, ಪೋಟ್ರೈಟ್ ಮೋಡ್ ಮೊದಲಾದ ಫೀಚರ್ ಗಳನ್ನು ಹೊಂದಿರುವ ಕ್ಯಾಮೆರಾ ಇದರಲ್ಲಿದೆ.
ಮೋಟೋ ಸಂಸ್ಥೆಯ ಹೇಳಿಕೆಯ ಪ್ರಕಾರ, ಇದರ ಪ್ರೊಸೆಸರ್‌ನ್ನು ಹೈಪರ್ ಎಂಜಿನ್ ಟೆಕ್ನಾಲಜಿಯಲ್ಲಿ ತಯಾರಿಸ ಲಾಗಿದ್ದು, ಬೇಗನೆ ರಿಫ್ರೆಶ್ ಮಾಡಬಹುದು, ಬೇಗನೆ ನೆಟ್ ವರ್ಕ್ ಸಂಪರ್ಕ ಪಡೆಯಬಹುದು ಮತ್ತು ಪವರ್ ಬಳಕೆಯಲ್ಲಿ ಮಿತವ್ಯಯ ಸಾಧಿಸಬಹುದು.
ಇದನ್ನು ಖರೀದಿಸುವ ಗ್ರಾಹಕರಿಗೆ ರಿಲಯನ್ಸ್ ಜಿಯೊದಿಂದ ರು.೫೪೯/- ರಿಯಾಯತಿ ಮತ್ತು ರಿಚಾರ್ಜ್ ಮಾಡಿದಾಗ ರು.೨,೦೦೦/- ಕ್ಯಾಷ್‌ಬ್ಯಾಕ್ ಸೌಲಭ್ಯ (ಷರತ್ತುಗಳು ಅನ್ವಯ) ದೊರಕಲಿದೆ. ಈ ಸ್ಮಾರ್ಟ್-ನ್‌ನ ಅಂದಾಜು ಬೆಲೆ ರು. ೮,೯೯೯/- ದಿಂದ ಆರಂಭ.