ರೋಬಾಟ್ ಪಯಣ ಎತ್ತ ಸಾಗಿದೆ ?

ರೋಬಾಟ್ ಪಯಣ ಎತ್ತ ಸಾಗಿದೆ ?

image-e6fe72d9-beff-435c-a405-5dd77597aacf.jpg
Profile Vishwavani News November 1, 2022
image-eda2dfb8-6698-4f9c-a659-bcbc8633020b.jpg
image-22a0faf0-9f13-45e2-a52d-88dae929d6c3.jpg
ಟೆಕ್‌ ನೋಟ ವಿಕ್ರಮ ಜೋಶಿ ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಫ್ಯಾಕ್ಟರಿ, ಸರಕು ಸಾಗಣೆ ಇಂತಹ ಕೆಲಸಕ್ಕೆ ಸಮರ್ಥ ರೋಬಾಟ್‌ಗಳು ಮನುಷ್ಯ ನಿಗೆ ಬೇಕು. ಮನುಕುಲ ಉಳಿಯಲು ಇಂತಹ ರೋಬಾಟ್‌ಗಳು ಅವಶ್ಯಕ. ಆದರೆ ನಮ್ಮನ್ನು ಪ್ರೀತಿಸುವ, ಮುದ್ದಿಸುವ, ನಮ್ಮಂತೆ ವಿಚಾರ ಮಾಡುವ ಹ್ಯುಮನಾಯ್ಡ ರೋಬಾಟ್ ಮಾತ್ರ ಬೇಡ, ಅದು ಅನವಶ್ಯಕ ಎನ್ನುತ್ತಾರೆ ಲೇಖಕರು. ನಿಮಗೇನನ್ನಿಸುತ್ತದೆ? ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ಮೊದಲ ಮಹಾಯುದ್ಧದ ಸಮಯದಲ್ಲಿ ಹುಲ್ಲು ಕೊಯ್ಯುವ ಯಂತ್ರದ ಆವಿಷ್ಕಾರ ಆಗಿರಲಿಲ್ಲ. ಅಮೇರಿಕಾದ ವೈಟ್ ಹೌಸ್ ಎದುರು ಹಬ್ಬಿರುವ ಹುಲ್ಲನ್ನು ಹೆಚ್ಚು ಉದ್ದ ವಾಗಿ ಬೆಳೆಯದಂತೆ ನಿಯಂತ್ರಿಸಲು ಕುರಿಗಳನ್ನು ಆಗ ಮೇಯಲು ಬಿಡುತ್ತಿದ್ದರಂತೆ. ಹುಲ್ಲು ಕೊಯ್ಯುವ ಯಂತ್ರ ಜನರ ಕೈಗೆ ಸಿಕ್ಕಿದಾಗ, ಅದೊಂದು ಕೆಲಸಕ್ಕೆ ಕುರಿಗಳ ಮೇಲಿನ ಅವಲಂಬನೆ ಕಡಿಮೆಯಾಯಿತು. ಇದಾಗಿ ಶತಮಾನವು ಕಳೆದಿದೆ. ಈಗ ಅದೇ ಕೆಲಸಕ್ಕೆ ಕುರಿಗಳ ಬೇಡಿಕೆ ಮತ್ತೆ ಹೆಚ್ಚಿದೆ ಎಂದರೆ ಅಚ್ಚರಿಯೆ? ಸೌರ ಶಕ್ತಿಯು ಇಂದು ಪರ್ಯಾಯ ಶಕ್ತಿಯ ಒಂದು ಮೂಲ. ಸೌರ ಫಲಕದ ಸ್ಥಾಪನೆ ಬಹಳ ವೇಗವಾಗಿ ಜಗತ್ತಿನ ನಡೆಯುತ್ತಿದೆ. ಆ ಸೌರ ಫಲಕಗಳನ್ನು ನೆಟ್ಟ ಬಯಲನ್ನು ನೋಡಿದ್ದರೆ ನಿಮ್ಮ ಕಲ್ಪನೆಗೆ ಬರಬಹುದು ; ಫಲಕದ ಕೆಳಗೆ, ಅಕ್ಕ ಪಕ್ಕ ಸಾಕಷ್ಟು ಹುಲ್ಲು ಬೆಳೆದು ಕೊಳ್ಳುತ್ತದೆ. ಅದನ್ನು ಬೆಳೆಯಲು ಬಿಡಬಾರದು. ಆಗಾಗ ಕಟಾವು ಮಾಡುತ್ತಿರಬೇಕು. ಆದರೆ ಆ ಹುಲ್ಲನ್ನು ಕೊಯ್ಯಲು ಆಧುನಿಕವಾದ ಯಾವ ಯಂತ್ರವೂ ಅಷ್ಟೊಂದು ಪರಿಣಾಮಕಾರಿಯಾಗಿ ಬಳಕೆ ಆಗುವುದಿಲ್ಲವಂತೆ. ಅದಕ್ಕಾಗಿ ಅಲ್ಲಿ ಕುರಿಗಳನ್ನು ಮೇಯಲು ಬಿಡುತ್ತಾರೆ. ಈ ಪದ್ಧತಿ ಮೊದಲು ಯುರೋಪಿನಲ್ಲಿ ಶುರುವಾಗಿದ್ದು. ಈಗ ಅಮೆರಿಕ ದಲ್ಲೂ ಇದಕ್ಕೆ ಜನಪ್ರಿಯತೆ ಸಿಗುತ್ತಿದೆ. ಇದರಿಂದಾಗಿ ಎಲ್ಲಿ ಸೌರ ಶಕ್ತಿ ಕೇಂದ್ರಗಳಿವೆಯೋ ಅ ಕುರಿಗಳ ಬೇಡಿಕೆ ಹೆಚ್ಚಾಗುತ್ತಿದೆ! ಜನರು ಸಾಲ ಮಾಡಿ ಹಣ ತಂದು ಕುರಿಗಳನ್ನು ಸಾಕುತ್ತಿzರಂತೆ. ನೋಡಿ, ನಾವು ತಂತ್ರಜ್ಞಾನ ಯುಗದಲ್ಲಿದ್ದೇವೆ. ಟೆಸ್ಲಾದಿಂದ ರೊಬಾಟ್ ಕೆಲವು ದಿನಗಳ ಹಿಂದೆ ಇಲಾನ್ ಮಸ್ಕ್ ಕಂಪನಿ ಟೆಸ್ಲಾ ಒಂದು ಹೊಸ ಅತ್ಯಾಧುನಿಕ ಮಾನವರೂಪಿ ರೋಬಾಟ್‌ನ್ನು ಜಗತ್ತಿಗೆ ಪ್ರದರ್ಶಿಸಿತು. ಮನುಷ್ಯನನ್ನು ನಕಲಿ ಮಾಡುವ ಹಂತಕ್ಕೆ ಇದು ಬೆಳೆದಿರಬಹುದು ಎನ್ನುವುದು ಎಲ್ಲರ ನಿರೀಕ್ಷೆ. ಆದರೆ ಅದು ಹುಸಿಯಾಯಿತು. ತನ್ನ ಕೈ ಆಡಿಸಿದ್ದು, ಕಾಲು ಕುಣಿಸಿದ್ದು ಬಿಟ್ಟರೆ ಮತ್ತೇನೂ ಹೊಸ ದನ್ನು ಮಾಡಲಿಲ್ಲ. ಇದಕ್ಕಿಂತ ಕೆಲವು ವರ್ಷಗಳ ಹಿಂದೆ ಹೊಂಡಾ ಕಂಪನಿಯು ಪರಿಚಯಿಸಿದ್ದ ಅಸೀಮೊ ರೋಬಾಟ್ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಬಲ್ಲ ದಾಗಿತ್ತು. ಮೇಲಿನ ಎರಡೂ ವಿಷಯಗಳು ಬೇರೆ ಬೇರೆ ಅನಿಸಬಹುದು ಆದರೆ ಎರಡಕ್ಕೂ ಒಂದ ಕ್ಕೊಂದು ಕೊಂಡಿಯಿದೆ. ಒಂದು ಕಡೆ ಹುಲ್ಲು ಕೊಯ್ಯಲು ಕುರಿ ಬೇಕು, ಇನ್ನೊಂದು ಕಡೆ ಮಾನವರೂಪಿ ರೋಬಾಟ್ ಸಂಶೋಧನೆಯ ಓಟ. ಎಲ್ಲಿದ್ದೇವೆ ನಾವು? ಕಾದಂಬರಿಕಾರರ ಕಲ್ಪನೆಯ ಕೂಸು ಇದು ಯಾವತ್ತು ಕರೇಲ್ ಕೆಪ್ಯಾಕ್ ಎನ್ನುವ ಕಾದಂಬರಿಕಾರ ಮೊದಲು ರೋಬಾಟ್ ಎನ್ನುವ ಪದ ಬಳಸಿದನೋ, ಎಂದು ಐಸಾಕ್ ಅಸಿಮೋವ್ ರೋಬಾಟಿಕ್ಸ್ ಪದಕ್ಕೆ ಜನ್ಮಕೊಟ್ಟನೋ ಅಂದಿನಿಂದ ಜಾಣ ಮನುಷ್ಯ ತನ್ನ ರೂಪಿಯನ್ನು ಸೃಷ್ಟಿಮಾಡುತ್ತೇನೆ ಎಂದು ಹಠ ಹಿಡಿದು ಕೂತಿದ್ದಾನೆ. ಎಂತೆಂತಹ ಕಲ್ಪನೆಗಳು? ಮನೆಗೆಲಸಕ್ಕೆ, ಆಫೀಸ್ ಕಾರ್ಯಕ್ಕೆ, ಹಸೆಯಲ್ಲಿ ಜೊತೆಯಲ್ಲಿ ಸಂಗಾತಿಯಾಗಿ ಮಾನವರೂಪಿ ರೋಬಾಟ. ಹಿರೋ, ವಿಲನ್, ಸುರ, ಅಸುರ ಎಲ್ಲವನ್ನೂ ನಾವು ಕಲ್ಪಿಸಿಕೊಂಡು ಕೊನೆಗೆ ನಮ್ಮ ಅಂತ್ಯವೂ ಇದರಿಂದಲೇ ಆಗುವುದು ಎನ್ನುವ ಹಂತಕ್ಕೆ ಬಂದಿದ್ದೇವೆ. ಆದರೆ ಇಲ್ಲಿಯ ತನಕ ಏನೂ ಆಗಿಲ್ಲ . ಕೇವಲ ಜಾಹೀರಾತು, ಪ್ರಚಾರ ಅಷ್ಟೇ. ಬಾಕಿ ಎಲ್ಲವನ್ನೂ ದೂರ ವಿಡಿ, ತಾನೇ ಸ್ವಂತವಾಗಿ ಒಂದು ಕಪ್ ಚಹಾ ಮಾಡಬಲ್ಲ ರೋಬಾಟ್ ಇನ್ನೂ ಹುಟ್ಟಿಲ್ಲ. ಮತ್ತೆ ಯಾಕೆ ಕಾಲಹರಣ? ಅದರಿಂದ ಯಾವ ದೇಶದ ಆರ್ಥಿಕ ಅಭಿವೃದ್ಧಿ ಆಗಿದೆ? ಆಗಿದೆ. ಏನಾದರೂ ಆಗಿದ್ದರೆ ಅದು ಇಂಡಸ್ಟ್ರಿ ಯಲ್ ಅಥವಾ ಸರ್ವೀಸ್ ರೋಬಾಟ್ ಗಳಿಂದ, ಹಾಗೂ ನಮ್ಮ ಜೊತೆ ಕೆಲಸ ಮಾಡಬಲ್ಲ ಸ್ನೇಹಜೀವಿ  ಕೋಬಾಟ್’ ಗಳಿಂದ. ಮೂವತ್ತು ಲಕ್ಷ ರೋಬಾಟ್‌ಗಳು! ಕಳೆದ ಒಂದು ವರ್ಷದಲ್ಲಿ ಇಂತಹ, ಅಂದರೆ ಸರ್ವಿಸ್ ರೋಬಾಟ್ ಮತ್ತು ಕೋಬಾಟ್‌ಗಳ ಬೆಳವಣಿಗೆ ಮೂವತ್ತು ಶೇಕಡಾ ಹೆಚ್ಚಿದೆಯಂತೆ. ಜಗತ್ತಿನಲ್ಲಿ ಇವತ್ತು ಮೂವತ್ತು ಲಕ್ಷಕ್ಕೂ ಹೆಚ್ಚು ರೋಬಾಟ್ ನಮ್ಮೊಂದಿಗೆ ಕೆಲಸ ಮಾಡುತ್ತಿದೆ ಅಂತ ಒಂದು ವರದಿ ಹೇಳುತ್ತದೆ. ಬೆಳವಣಿಗೆ ಆಗಿದ್ದರಲ್ಲಿ ೭೫% ಪಾಲು ಏಷ್ಯಾದ್ದು, ಅದರಲ್ಲಿ ೫೦% ಚೀನಾದಲ್ಲಿ ಆಗಿದೆ. ಜರ್ಮನಿ, ಜಪಾನ್, -ನ್ಸ್, ಸ್ವಿಜರ್ಲ್ಯಾಂಡ್ ಎಲ್ಲ ದೇಶಗಳಲ್ಲಿ ಜನಸಂಖ್ಯೆ ದಿನೇ ದಿನೇ ಕುಸಿಯುತ್ತಿದೆ. ವಂಶಾಭಿವೃದ್ಧಿ ಕ್ಷೀಣಿಸುತ್ತಿದೆ. ಕೆಲಸ ಮಾಡುವ ವಯಸ್ಸಿನವರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದ್ದೇವೆ. ಜರ್ಮನಿಯಲ್ಲಿ ಇಂದು ನಾಲ್ಕುವರೆ ಕೋಟಿ ಕಾರ್ಮಿಕರಿzರೆ. ಅದೇ ೨೦೩೫ರ ವೇಳೆಗೆ ಆ ಸಂಖ್ಯೆ ನಾಲ್ಕು ಲಕ್ಷಕ್ಕೆ ಬರಲಿದೆ. ಯಾರು ಕೆಲಸ ಮಾಡುವವರು? ನಮಗೆ ಮಾನವರೂಪಿ ರೋಬಾಟ್‌ಗಳು ಬೇಡ. ನಮ್ಮೊಡನೆ ಕೆಲಸ ಮಾಡಬಲ್ಲ ಇಂಡಸ್ಟ್ರಿಯಲ್ ರೋಬಾಟ್‌ಗಳು ಬೇಕು, ಅವುಗಳನ್ನು ಆದಷ್ಟು ಪರಿಣಾಮಕಾರಿ ಆಗಿಸುವ ತಂತ್ರಜ್ಞಾನದಲ್ಲಿ ಕ್ರಿಯಾಶೀಲತೆ ಹೆಚ್ಚಬೇಕು. ಇಂದು ಇವು ತುಂಬಾ ದುಬಾರಿ. ಇಂಥವುಗಳ ಬೆಲೆ ಕಡಿಮೆಯಾಗಲಿ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಯಲ್ಲೂ ಬಳಕೆ ಆಗುವಂತಿರಲಿ. ಎಷ್ಟೊಂದು ತಂತ್ರಜ್ಞಾ ನದ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ, ಕುರಿ ಮಾಡುವ ಕೆಲಸವನ್ನು ಮಾಡಬಲ್ಲ ಒಂದು ರೋಬಾಟ್ ನಮ್ಮ ಹತ್ತಿರವಿಲ್ಲ! ಇದು ಹೀಗೆಯೇ ಮುಂದೆ ಏನಾದೀತು? ಕೆಲಸ ಮಾಡಲು ಜನರಿಲ್ಲದೇ ಹೋದಾಗ ಆರ್ಥಿಕತೆಯು ಕುಸಿಯುತ್ತದೆ, ಆಗ ಮಾನವ ರೂಪಿ ರೋಬಾಟ್‌ಗಳು ಬಂದು ನಮ್ಮನ್ನು ಬದುಕಿಸುತ್ತವೆ ಎನ್ನುವ ಭ್ರಮೆ ಬೇಡ. ಮನುಕುಲವೂ ಬೆಳೆಯಲಿ, ಆತನ ದೈಹಿಕ ಕೆಲಸವೂ ಕಮ್ಮಿ ಆಗಲಿ, ಅಂತಹ ಒಂದು ಪರಿಹಾರ ಸಿಗಲಿ. ಅದು ಇಂಡಸ್ಟ್ರಿಯಲ್ ಹಾಗೂ ಸರ್ವಿಸ್ ರೋಬಾಟ್‌ಗಳಿಂದ ಮಾತ್ರ ಸಾಧ್ಯ. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಫ್ಯಾಕ್ಟರಿ, ಸರಕು ಸಾಗಣೆ ಇಂತಹ ಕೆಲಸಕ್ಕೆ ಸಮರ್ಥ ರೋಬಾಟ್‌ಗಳು ಬೇಕು. ನಮಗೆ ಸಹಕಾರಿ ಆಗುವ ಕಡೆಯೆಲ್ಲ ಯಥೇಚ್ಛವಾಗಿ ಬಳಸೋಣ. ಮನುಕುಲ ಉಳಿಯಲು ಇಂದು ಅವಶ್ಯಕ. ಆದರೆ ನಮ್ಮನ್ನು ಪ್ರೀತಿಸುವ, ಮುದ್ದಿಸುವ, ನಮ್ಮಂತೆ ವಿಚಾರ ಮಾಡುವ ಹ್ಯುಮನಾಯ್ಡ ರೋಬಾಟ್ ಮಾತ್ರ ಬೇಡ, ಅದು ಅನವಶ್ಯಕ. (ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ. ನಮ್ಮ ಇ-ಮೇಲ್:vishwavanimagazine@gmail.com)
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ