ತಂತ್ರಜ್ಞಾನ ಮತ್ತು ಸಿನೆಮಾ

ತಂತ್ರಜ್ಞಾನ ಮತ್ತು ಸಿನೆಮಾ

image-e8a61ef8-1c75-4a7b-9cf8-8e6e9f78e2ef.jpg
Profile Vishwavani News October 18, 2022
image-c9f68009-b40a-4dbd-a9d5-8c2444d3b41a.jpg
image-c83ea3a7-9c4e-46bc-ab4c-d2f5b8741b0a.jpg
image-7a585ade-def7-44fe-97c6-b2a4750b417d.jpg
image-c9f68009-b40a-4dbd-a9d5-8c2444d3b41a.jpg
ಟೆಕ್ ನೋಟ ವಿಕ್ರಮ ಜೋಶಿ ಈ ಕಾಲಮಾನದಲ್ಲಿ ತಂತ್ರಜ್ಞಾನವನ್ನು ಚೆನ್ನಾಗಿ ದುಡಿಸಿಕೊಂಡ ಸಿನಿಮಾಗಳು ಗೆಲ್ಲುತ್ತವೆ. ಜನರಿಗೆ ಮನರಂಜನೆ ನೀಡಲು ಇಂದು ತಂತ್ರಜ್ಞಾನ ಬೇಕೇ ಬೇಕು. ಸಿನಿಮಾ ಮಂದಿರಕ್ಕೆ ಭವಿಷ್ಯ ಇದೆಯೇ? ಇದು ಮತ್ತೆ ಮತ್ತೆ ಕೇಳಿಬರುವ ಪ್ರಶ್ನೆ. ಹಾಲಿ ವುಡ್, ಬಾಲಿವುಡ್, ಸ್ಯಾಂಡಲ್ ವುಡ್, ಎಲ್ಲಾ ಭಾಷೆಯಲ್ಲೂ, ಜಾಗತಿಕ ಮಟ್ಟದಲ್ಲಿ ಈ ಪ್ರಶ್ನೆ ಕಾಡುತ್ತಿದೆ. ೧೯೦೫ರಲ್ಲಿ ಮೊದಲ ಸಿನಿಮಾ ಮಂದಿರ ಸ್ಥಾಪಿತವಾದಾಗಿನಿಂದ, ಅಮೆರಿಕದ ಮಹಾ ಖಿನ್ನತೆಯ ಕಾಲ, ದೂರದರ್ಶನ ಆವಿಷ್ಕಾರ ಆದಾಗ, ಕಂಪ್ಯೂಟರ್ ಬಂದಾಗ, ಆರ್ಥಿಕ ಬಿಕ್ಕಟ್ಟು ಎದುರಾದಾಗ, ಒಟಿಟಿ ಜನಪ್ರಿಯ ಆಗುತ್ತಿರುವಾಗ, ವರ್ಷ ದಿಂದ ಈಚೆಗೆ ಕರೋನಾ ಜಗತ್ತನ್ನೇ ತಲ್ಲಣಿಸಿದಾಗ ಈ ಪ್ರಶ್ನೆ ಪದೇ ಪದೇ ಜನರ ಮನವನ್ನು ಬಡಿಯುತ್ತಿದೆ. ಪ್ರಚಲಿತ ವಿದ್ಯಮಾನ - ‘ಕಾಂತಾರ’. ಕಳೆದ ಎರಡು ಮೂರು ವಾರಗಳಲ್ಲಿ ಯಾರಿಗೇ ಕರೆ ಮಾಡಿ - ಕಾಂತಾರ ಸಿನಿಮಾ ನೋಡಿದ್ದೀರಾ? ಥಿಯೇಟರ್ ಗೇ ಹೋಗಿ ನೋಡಿ. ತುಂಬಾ ಚೆನ್ನಾಗಿದೆ... ಎಂದೇ ಮಾತನ್ನು ಮುಗಿಸುವುದು. ಆಗಲೇ ಚಿತ್ರ ಮಂದಿರಕ್ಕೆ ಭವಿಷ್ಯ ಇದೆ ಎನ್ನುವ ಉತ್ತರ ಸಿಕ್ಕಿ ಬಿಡುತ್ತದೆ. ಹಾಗಿದ್ದರೆ ಪ್ರತಿ ವರ್ಷ ಸಾವಿರಾರು ಚಲನಚಿತ್ರ ಬಿಡುಗಡೆ ಆಗುತ್ತವೆ, ಅವೆಲ್ಲವನ್ನೂ ನಾವು ನೋಡುತ್ತೆವೆಯೇ? ಬಾಲಿವುಡ್ ಬಾಕ್ಸ್ ಆಫೀಸ್ ನಷ್ಟದಲ್ಲಿ ಕೊಚ್ಚಿ ಹೋಗಿದೆ. ಅಲ್ಲಿಯ ಜಗದ್ವಿಖ್ಯಾತ ನಾಯಕ ನಾಯಕಿಯರ ಸಿನಿಮಾವೇ ಮಂದಿರದಲ್ಲಿ ನಿಲ್ಲುತ್ತಿಲ್ಲ. ಅದು ಹೇಗೆ ಸಿನಿಮಾ ಗೃಹಕ್ಕೆ ಭವಿಷ್ಯ ಇದೆ ಅನ್ನುತ್ತೀರಿ? ಮತ್ತದೇ ಪ್ರಶ್ನೆ. ಮೊದಲಿನ ಕಾಲದಲ್ಲಿ ಸಿನಿಮಾ ಎನ್ನುವುದು ಒಂದು ಕಲೆಯಾಗಿತ್ತು. ಅದರಲ್ಲಿ ನಟ, ನಟನೆ, ಸಂಗೀತವೇ ಪ್ರಾಧಾನ್ಯ. ಸಿನಿಮಾ ಮಂದಿರ ಹೇಗೆ ಇರಲಿ, ಸಂಗೀತದ ಪರಿಣಾಮ ನಾಲ್ಕು ಗೋಡಗಳ ಮಧ್ಯೆ ಹೇಗೋ ಕೇಳಿಸಲಿ, ಸೂಕ್ಷ್ಮತೆಯ ವಿವರಣೆ ಇರದೇ ಹೋಗಲಿ ಜನ ಮುಗಿಲು ಬಿದ್ದು ನೋಡುತ್ತಿದ್ದರು. ಸಿನಿಮಾ ಮಂದಿರ ಬಿಟ್ಟರೆ ಬೇರೆ ಮನರಂಜನೆ ಇಲ್ಲ. ಟಿವಿ ಎನ್ನುವ ಪೆಟ್ಟಿಗೆ ಮನೆ ಮನೆಗೆ ಲಗ್ಗೆ ಹಾಕಿದಾಗಲೂ ಜನರಿಗೆ ಅದರಲ್ಲಿ ಸಿನಿಮಾ ಮಂದಿರದ ಅನುಭವ ಸಿಕ್ಕುತ್ತಿರಲಿಲ್ಲ. ಒಂದೋ ನಮಗೆ ಬೇಕಾದ ಆಯ್ಕೆ ಅಲ್ಲಿರುತ್ತಿರಲಿಲ್ಲ, ಇನ್ನೊಂದು ಸಣ್ಣ ಕಪ್ಪು ಬಿಳುಪಿನ ಪರದೆಯ ಮೇಲೆ ಆ ಪರಿಣಾಮ ಕಾಣುತ್ತಿರಲಿಲ್ಲ. ಆದರೆ ಕಳೆದ ಎರಡು ಮೂರು ದಶಕಗಳಲ್ಲಿ ತಂತ್ರಜ್ಞಾನ ದಾಪುಗಾಲು ಹಾಕಿದೆ. ವಿಶೇಷವಾಗಿ ಸಿನಿಮಾ ರಂಗದಲ್ಲಿ. ಗ್ರಾಫಿಕ್ಸ್, ಸ್ಕ್ರೀನ್, ಸೌಂಡ್ ಸಿಸ್ಟಮ, ಸ್ಪೆಷಲ್ ಎಫೆಕ್ಟ್ಸ್, ಹೀಗೆ ಒಂದಾ ಎರಡಾ? ಸಿನಿಮಾ ಮಾಡುವುದರಿಂದ ಶುರುವಾಗಿ, ಸಂಸ್ಕರಣೆ, ಸಂಗೀತ ಸಂಯೋಜನೆ, ದೃಶ್ಯಗಳ ಹೊಂದಾಣಿಕೆ, ಹಿನ್ನಲೆ ಧ್ವನಿ, ಗಾಯನ, ಸಿನಿಮಾ ವಿತರಣೆ, ಪ್ರಸಾರಣೆ, ಜಾಹಿರಾತು ನಿರ್ವಹಣೆ ಪ್ರತಿಯೊಂದು ಕ್ಷೇತ್ರ ದಲ್ಲೂ ಕ್ರಾಂತಿಯಾಗಿದೆ. ಇದರ ಜತೆಗೆ ಗ್ರಾಹಕರನ್ನು ಅರಿಯುವ ಬಗೆಯೂ. ಈ ಸಿನಿಮಾ ಓಡುತ್ತದೆಯೋ, ಇಲ್ಲವೋ ಅಂತ ಮೊದಲು ಸಿನಿಮಾ ವಿತರಕರು, ನಿರ್ದೇಶಕರು, ನಿರ್ಮಾಪಕರು ಕೂತು ನಿರ್ಧರಿಸುತ್ತಿದ್ದರು. ಅವರ ಅನುಭವವೇ ಅಲ್ಲಿ ಬಂಡವಾಳ. ಈಗ ಗ್ರಾಹಕರೇ ಅದನ್ನು ನಿರ್ಧರಿಸುತ್ತಿzರೆ. ಯಾರು, ಯಾವ ವಯಸ್ಸಿನ ಜನರು, ಯಾವಾಗ, ಯಾವ ಬಗೆಯ, ಎಷ್ಟು ಹೊತ್ತು, ಎಷ್ಟು ಬಾರಿ ನೋಡುತ್ತಾರೆ ಎನ್ನುವ ಮಾಹಿತಿ ವಿಶ್ಲೇಷಣೆ ಮಾಡಬಲ್ಲ ತಂತ್ರeನ ಬಂದಿದೆ. ಕಳೆದ ದಶಕಗಳಲ್ಲಿನ ಬದಲಾವಣೆ, ಇವತ್ತಿನ ಪರಿಸ್ಥಿತಿ, ಭವಿಷ್ಯದ ಬಗ್ಗೆ ಗೊತ್ತಿರುವ ಮಾಹಿತಿಯ ಪ್ರಕ್ಷೇಪಣ ಹೀಗೆ ಮೂರು ಬಿಂದುಗಳನ್ನು ಅಕ್ಕ ಪಕ್ಕದಲ್ಲಿ ಕೂರಿಸಿ ಅವಲೋಕಿಸಿದರೆ ಎರಡು ವಿಷಯಗಳು ಖಚಿತವಾಗುತ್ತದೆ. ಒಂದು ಇಂದು, ಮುಂದು, ಎಂದೂ ನಮಗೆ ಮನರಂಜನೆ ಮೊದಲಿಗಿಂತ ಹೆಚ್ಚು ಬೇಕು, ಇನ್ನೊಂದು ಮನರಂಜನೆಗೆ ಸಿನಿಮಾ ಮಂದಿರವೊಂದೇ ಗತಿಯಲ್ಲ ಎನ್ನುವುದು. ಹಾಗಂತ ಸಿನಿಮಾ ಮಾಡುವುದೇ ಬೇಡವಾ? ಹಾಗಲ್ಲ. ಸಿನಿಮಾ ವೀಕ್ಷಕನಿಗೆ ಮನರಂಜನೆ ಬೇಕು, ಅವನ ಹತ್ತಿರ ಹಣವಿದೆ, ವೇಳೆಯನ್ನೂ ಮಾಡಿಕೊಳ್ಳುತ್ತಿzನೆ. ಅದರ ಜೊತೆಗೆ ಅವನ ಕೈಯಲ್ಲಿ ಎಲೆಕ್ಟ್ರಾನಿಕ್ ಸಾಧನಗಳಿವೆ. ಆತ ಸಿನಿಮಾ ಮಂದಿರವನ್ನು ಕಿಸೆಯಲ್ಲಿಯೇ ಹಾಕಿಕೊಂಡು ಓಡಾಡಬಲ್ಲ! ಇದು ವೀಕ್ಷಕರ ವಿಚಾರವಾದರೆ, ಸಿನಿಮಾ ಇಂಡಸ್ಟ್ರಿಯವರ ಕಥೆಯೇ ಬೇರೆ. ಅಲ್ಲಿ ಕಲಾಗಾರರಿಗೆ ಕಲೆ, ಹೆಸರು, ಮನ್ನಣೆಯ ದಾಹವಿದ್ದರೆ, ನಿರ್ಮಾಪಕರಿಗೆ ಹಣ ಮುಖ್ಯ. ಇವೆಲ್ಲದರ ನಡುವೆ ಇಂದು ಸಿನಿಮಾ ರಂಗದಲ್ಲಿ ಸ್ಪರ್ಧೆ ಆಕಾಶಕ್ಕೆ ಮುಟ್ಟಿದೆ. ಕೊನೆಗೆ ವೀಕ್ಷಕ ಹಾಗೂ ಸಿನಿಮಾ ತಯಾರಕ ಇಬ್ಬರೂ ಗೆಲ್ಲಬೇಕು. ಹಾಗಾಬೇಕು ಅಂದರೆ ಸಮಾಜವು ಚಲನಚಿತ್ರ ವೀಕ್ಷಿಸುವುದರಲ್ಲಿ ಮೂರು ಭಾಗವಾಗಿ ಒಡೆದಿರುವುದನ್ನು ಗಮನಿಸಬೇಕು. ೧.ಮೊದಲನೆಯದು ಸಿನಿಮಾ ಮಂದಿರಕ್ಕೇ ಹೋಗಿ ನೋಡುವಂತೆ ಸಿನಿಮಾ ಮಾಡುವುದು. ಅದಕ್ಕೆ ಅದ್ದೂರಿಯಾಗಿ ಖರ್ಚು ಮಾಡಬೇಕು. ಇಲ್ಲಿ ಕಲೆ, ತಂತ್ರಜ್ಞಾನ, ಮಾರ್ಕೆಟಿಂಗ್, ವಿತರಣೆ ಎಲ್ಲವೂ ನಾಜೂಕಾಗಿ ಕೂಡಿರಬೇಕು. ಒಂದು ತಪ್ಪಿದರೂ ಯೋಜನೆ ಹಳ್ಳಕ್ಕೆ ಬಿದ್ದಂತೆ. ೨. ಎರಡನೇಯದು ಡಿಟಿಎಚ್ ಹಾಗೂ ಓಟಿಟಿ - ಮನೆಯ ಕೂತು ಮನೆಯವರ ಜೊತೆ ನೋಡುವಂತಹದ್ದು. ಸಿನಿಮಾದಲ್ಲಿ ಸ್ಪೆಷಲ್ ಎಫೆಕ್ಸ್ಟ್ ಇಲ್ಲ, ಬಹು ಕೋಟೆ ಬಜೆಟ್ ಸಿನಿಮಾವಲ್ಲ, ಆದರೆ ಅಲ್ಲಿ ಕಲೆಯಿದೆ, ಸುಂದರ ಸಂಗೀತ, ಮನಸ್ಸಿಗೆ ಹಿತಕೊಡುವ ಭಾವುಕತೆ, ಭಾಷೆಯಿದೆ. ಬಜೆಟ್ ಕೊರತೆ, ಸಣ್ಣ ಪ್ರಮಾಣದ ಸುಂದರ ಸಿನಿಮಾ ಮಾಡಬೇಕು ಎಂದವರು ಓಟಿಟಿ ಪ್ಲಾಟಫಾರ್ಮ್‌ನ್ನು ಗುರಿಯಾಗಿಸಿ ನಿರ್ಮಿಸಬೇಕು. ಅದನ್ನು ಬಿಟ್ಟು ‘ಜನರು ಸಿನಿಮಾ ಮಂದಿರಕ್ಕೆ ಬರಲಿಲ್ಲ, ನನ್ನ ಕನಸಿನ ಪ್ರಾಜೆಕ್ಟ್ ಸರ್ವನಾಶ ಆಯಿತೆಂದು’ ಕೊರಗಬಾರದು. ೩. ಮೂರನೆಯ ಭಾಗ. ಮೂಲತಃ ಸಿನಿಮಾ ಮನರಂಜನೆಯ ಸೆಲೆ - ಅದು ಬತ್ತಬಾರದು. ಸ್ಟೀವ್ ಜಾಬ್ಸ ಒಂದು ಕಡೆ ‘ಸಿನಿಮಾ ಮಂದಿರ ಎನ್ನುವುದು ಪಾಪ್ ಕಾರ್ನ್ ತಿನ್ನುವ ಹೊಟೆಲ್’ ಆಗಬಾರದು ಅಂತ ಹೇಳುತ್ತಾರೆ. ಆದರೆ ಬಹಳಷ್ಟು ಕಲಾವಿದರಿಗೆ ಸಿನಿಮಾ ಎನ್ನುವುದು ಕಲೆ, ಸಾಮಾಜಿಕ ಸಂದೇಶ, ಹಾಗೂ ದಾಖಲೆಗಳನ್ನು ಮಾಡಿಡಲು ಒಂದು ಮಾಧ್ಯಮ. ಮನರಂಜನೆಯ ಜತೆ ಎಲ್ಲವೂ ಮುಖ್ಯ. ಕಲೆಯನ್ನೇ ಮುಖ್ಯವಾಗಿಟ್ಟುಕೊಂಡು ಸಿನಿಮಾ ಮಾಡಿದರೆ ಅದು ಆರ್ಥಿಕವಾಗಿ ಸೊರಗಬಹುದು. ಹಾಗಿದ್ದರೆ ಅದಕ್ಕೆ ವೀಕ್ಷಕರಿಲ್ಲವೆ? ಅದಕ್ಕೇ ಆದ ವಿಶೇಷ ವೀಕ್ಷಕರಿದ್ದಾರೆ. ಡಾಕ್ಯುಮೆಂಟರಿ, ಸೀರಿಸ್ ಎಲ್ಲವೂ ಸಿನಿಮಾ ಮಂದಿರಕ್ಕೆ ಯೋಗ್ಯವಲ್ಲ. ಅದಕ್ಕಾಗಿಯೇ ಇಂದು ಓಟಿಟಿ ಪ್ಲಾಟ್ ಫಾರ್ಮ್ ದೆ. ಇದೇ ಮೂರನೇಯ ಭಾಗ - ಒಬ್ಬರೇ, ಅಥವಾ ಸದಭಿರುಚಿ ಇರುವವರು ಒಟ್ಟಿಗೇ ನೋಡಬಹುದಾದ ಚಲನಚಿತ್ರಗಳು. ಅವುಗಳು ಸಿನಿಮಾ ಮಂದಿರದ ಆಸುಪಾಸು ಕೂಡ ಬರಬಾರದು. ಸ್ಟ್ರೀಮಿಂಗ್ ತಂತ್ರಜ್ಞಾನ ಇವರಿಗೆ ವರ. ಇವೆಲ್ಲವನ್ನೂ ಓದಿದ ಮೇಲೆ ನಿಮಗೆ ಏನನಿಸುತ್ತದೆ? ನನ್ನ ಪ್ರಕಾರ, ಇನ್ನು ಮುಂದೆ ಸಿನಿಮಾ ಮಂದಿರಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಯಾರು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾರೋ ಅವರು ಗೆಲ್ಲುತ್ತಾರೆ. ಇಲ್ಲ ನಾವು ಬದಲಾಗುವುದಿಲ್ಲ ಅಂದವರು ಸಿನಿಮಾ ಮಂದಿರವನ್ನು ಮುಚ್ಚಿ ಹೋಗಬೇಕಾಗುತ್ತದೆ. ಇದು ಕಠೋರ ಸತ್ಯ. ಇನ್ನೂ ನಂಬಿಕೆ ಬಂದಿಲ್ಲ ಎಂದರೆ ಪಿವಿಆರ್, ಐನಾಕ್ಸ ಗಳ ಷೇರಿನ ಬೆಲೆಯ ಹೇಗೆ ಬೆಳೆದಿದೆ ಎಂದು ನೋಡಿ. ಸಂಗೀತಕಾರರು ತಮಗೆ ಹಣವೇ ಸಿಗುವುದಿಲ್ಲ ಎಂದು ದೂರಿದ್ದು ಕೇಳುತ್ತೇವೆ. ಸಾರೆಗಮಾ, ಟಿಪ್ಸ್ ಕಂಪನಿಗಳದ್ದು ಹಾಟ್ ಸ್ಟಾಕ್ಸ್! ಆರ್‌ಆರ್‌ಆರ್, ಕೆಜಿಎಫ್, ಬಾಹುಬಲಿ, ಕಾಂತಾರ ಇವೆಲ್ಲ ಸಿನಿಮಾ ಮಂದಿರದ ಭವಿಷ್ಯಕ್ಕೆ ಪ್ರತಿಧ್ವನಿ. ಹಾಗೆಯೇ ಸೀತಾ ರಮಣನ್, ಪುಷ್ಪಾ ಇವು ಓಟಿಟಿಯಲ್ಲಿ ಜನಪ್ರಿಯವಾದವು. ಹುಡುಕಿದರೆ ನೂರಾರು ಉತ್ತಮ ಮಟ್ಟದ ಚಲನಚಿತ್ರ ಸಿಗುತ್ತದೆ. ಪ್ರತಿಯೊಂದು ಭಾಷೆಯಲ್ಲಿ ಅದರದ್ದೇ ಆದ ಜಗತ್ತಿದೆ. ತಂತ್ರಜ್ಞಾನ ಹೇಗಿದೆ ಅಂದರೆ ಭಾಷಾಂತರಿಸಿದ ಚಲನಚಿತ್ರವೂ ಈಗ ಲಭ್ಯವಿದೆ. ಭಾಷೆಯ ದಿಗ್ಭಂಧನವಿಲ್ಲ. ಮೊದಲು ಹಾಲಿವುಡ್ ತಂತ್ರeನ ಬಾಲಿವುಡ್‌ಗೆ ಬರಲು ಒಂದು ಕಾಲಗಟ್ಟವೇ ಬೇಕಿತ್ತು. ಇಂದು ಹೊಸ ಮಾದರಿ, ನವೀನ ಸಾಫ್ಟ-ವೇರ್ ಹೊಂದಿರುವ ಐಮ್ಯಾಕ್ ಅಮೆರಿಕದಲ್ಲಿ ಬಿಡುಗಡೆ ಆದರೆ ಮುಂದಿನವಾರವೇ ಬೆಂಗಳೂರಿನಲ್ಲಿ ಸಿಗುತ್ತದೆ. ಸಿನಿಮಾ ಎನ್ನುವುದು ಕಲೆ, ತಂತ್ರಜ್ಞಾನ ಹಾಗೂ ವಾಣಿಜ್ಯದ ಸಂಗಮ. ದಾರಿ ಬೇರೆ ಬೇರೆ ಆಗಿರಬಹುದು, ಆದರೆ ಸಿನಿಮಾ ಎನ್ನುವ ನದಿ ಸೇರಬೇಕಾದದ್ದು ಜನಸಾಗರವನ್ನು. ಸಿನಿಮಾ ರಂಗವನ್ನು ಕೈ ಹಿಡಿದು ಮುನ್ನಡೆಸುತ್ತಿರುವ ತಂತ್ರಜ್ಞಾನದ ಕುರಿತು ಮುಂದೆ ಚರ್ಚಿಸೋಣ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ