ಚಳಿಗಾಲದ ಶೀತದ ವಾತಾವರಣವು ರಕ್ತದೊತ್ತಡದ(Blood Pressure Tips) ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಯಾಕೆಂದರೆ ಶೀತ ಹವಾಮಾನದಲ್ಲಿ ದೇಹದ ಶಾಖವನ್ನು ಉಳಿಸಿಕೊಳ್ಳಲು ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದು ರಕ್ತದ ಹರಿವಿಗೆ ಪ್ರತಿರೋಧವನ್ನು ಹೆಚ್ಚಿಸುತ್ತದೆ. ರಕ್ತಪರಿಚಲನೆಗೆ ಹೃದಯವು ಹೆಚ್ಚು ಶ್ರಮಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿಮ್ಮ ದೇಹದ ಶಾಖವನ್ನು ಹೆಚ್ಚಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಈ ಸಲಹೆ ಪಾಲಿಸಿರಿ.
ಬೆಚ್ಚಗಿನ ಉಡುಪು ಧರಿಸಿ ಮತ್ತು ಆರಾಮವಾಗಿರಿ
ಕಾಟನ್, ಸ್ವೇಟರ್ಗಳಂತ ದೇಹವನ್ನು ಬೆಚ್ಚಗಿಡುವ ಬಟ್ಟೆಗಳನ್ನು ಧರಿಸುವುದು ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ರಕ್ತನಾಳಗಳ ಸಂಕೋಚನವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ.
ಮನೆಯೊಳಗೆ ದೈಹಿಕವಾಗಿ ಸಕ್ರಿಯರಾಗಿರಿ
ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ ಅತ್ಯಗತ್ಯ. ಚಳಿಗಾಲದಲ್ಲಿ ಜನರು ಹೊರಾಂಗಣ ಚಟುವಟಿಕೆಗಳನ್ನು ಕಡಿಮೆಮಾಡಬಹುದು, ಆದ್ದರಿಂದ ಯೋಗ, ಏರೋಬಿಕ್ಸ್ ಅಥವಾ ಮನೆಯೊಳಗೆ ಮಾಡುವಂತಹ ಒಳಾಂಗಣ ವ್ಯಾಯಾಮಗಳನ್ನು ಮಾಡಿ. ಈ ದೈಹಿಕ ಚಟುವಟಿಕೆಯು ರಕ್ತನಾಳಗಳನ್ನು ಸಡಿಲಗೊಳಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಉಪ್ಪಿನ ಸೇವನೆಯನ್ನು ಮಿತಿಗೊಳಿಸಿ
ಅತಿಯಾದ ಸೋಡಿಯಂ ಸೇವನೆ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಕಡಿಮೆ ಸೋಡಿಯಂ ಇರುವಂತಹ ಆಹಾರಗಳನ್ನು ಆರಿಸಿ. ಉಪ್ಪು ಅಧಿಕವಾಗಿರುವ ಸಂಸ್ಕರಿಸಿದ ಅಥವಾ ಪ್ಯಾಕೇಜ್ ಮಾಡಿದ ಆಹಾರವನ್ನು ತಪ್ಪಿಸಿ. ಈ ಆಹಾರ ಹೃದಯದ ಮೇಲೆ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತದೆ.
ನಿಯಮಿತವಾಗಿ ರಕ್ತದೊತ್ತಡವನ್ನು ಮೇಲ್ವಿಚಾರಣೆ ಮಾಡಿ
ಚಳಿಗಾಲದಲ್ಲಿ ನಿಮ್ಮ ರಕ್ತದೊತ್ತಡದ ಮೇಲೆ ನಿಗಾ ಇಡುವುದು ಒಳ್ಳೆಯದು. ಹಾಗಾಗಿ ಮನೆಯ ರಕ್ತದೊತ್ತಡ ಮಾನಿಟರ್ ಬಳಸಿ ಬಿಪಿ ಚೆಕ್ ಮಾಡಿ ಮತ್ತು ರೀಡಿಂಗ್ಗಳು ಹೆಚ್ಚಿದ್ದರೆ ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಹೈಡ್ರೇಟ್ ಆಗಿರಿ
ನಿರ್ಜಲೀಕರಣವು ರಕ್ತ ದಪ್ಪವಾಗಲು ಕಾರಣವಾಗಬಹುದು. ಇದು ರಕ್ತದ ಹರಿವಿಗೆ ಪ್ರತಿರೋಧವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ತಂಪಾದ ಹವಾಮಾನದಲ್ಲಿಯೂ ಸಹ, ನೀರು, ಗಿಡಮೂಲಿಕೆ ಚಹಾಗಳು ಅಥವಾ ಇತರ ಕೆಫೀನ್ ರಹಿತ ಬೆಚ್ಚಗಿನ ಪಾನೀಯಗಳನ್ನು ಕುಡಿಯುವ ಮೂಲಕ ಜಲಸಂಚಯನವನ್ನು ಹೆಚ್ಚಿಸಿಕೊಳ್ಳಿ.
ಹೃದಯಕ್ಕೆ ಆರೋಗ್ಯಕರ ಆಹಾರವನ್ನು ಸೇವಿಸಿ
ಹಣ್ಣುಗಳು, ತರಕಾರಿಗಳು, ಧಾನ್ಯಗಳು, ತೆಳ್ಳಗಿನ ಪ್ರೋಟೀನ್ಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರದ ಮೇಲೆ ಗಮನ ಹರಿಸಿ. ಬಾಳೆಹಣ್ಣು, ಪಾಲಕ್ ಮತ್ತು ಸಿಹಿ ಆಲೂಗಡ್ಡೆಯಂತಹ ಪೊಟ್ಯಾಸಿಯಮ್ ಅಧಿಕವಾಗಿರುವ ಆಹಾರಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯನ್ನು ಮಿತಿಗೊಳಿಸಿ
ಆಲ್ಕೋಹಾಲ್ ಮತ್ತು ಕೆಫೀನ್ ಎರಡೂ ತಾತ್ಕಾಲಿಕವಾಗಿ ರಕ್ತದೊತ್ತಡವನ್ನು ಹೆಚ್ಚಿಸಬಹುದು. ಚಳಿಗಾಲದಲ್ಲಿ, ಜನರು ಬೆಚ್ಚಗಿನ ಆಲ್ಕೊಹಾಲ್ಮುಕ್ತ ಪಾನೀಯಗಳು ಅಥವಾ ಬಿಸಿ ಕೆಫೀನ್ಮುಕ್ತ ಪಾನೀಯಗಳನ್ನು ಕುಡಿದರೆ, ರಕ್ತದೊತ್ತಡದ ಹೆಚ್ಚಳವನ್ನು ತಪ್ಪಿಸಬಹುದು.
ಈ ಸುದ್ದಿಯನ್ನೂ ಓದಿ:ಹೃದಯದ ಆರೋಗ್ಯಕ್ಕೆ ಕಪ್ಪು ಬೆಳ್ಳುಳ್ಳಿ ಪ್ರಯೋಜನಕಾರಿಯೇ?
ಸಾಕಷ್ಟು ನಿದ್ರೆ ಮಾಡಿ
ಕಳಪೆ ನಿದ್ರೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಹಾಗಾಗಿ ಪ್ರತಿ ರಾತ್ರಿ 7-9 ಗಂಟೆಗಳ ಗುಣಮಟ್ಟದ ನಿದ್ರೆಯನ್ನು ಮಾಡಿ.