Masood Azhar: ಲಜ್ಜೆಗೆಟ್ಟ ಪಾಕ್‌ನಿಂದ ಮತ್ತೊಂದು ಹೀನ ಕೃತ್ಯ; ಮಸೂದ್ ಅಜರ್‌ಗೆ 14 ಕೋಟಿ ರೂ. ಪರಿಹಾರ?
Pakistan government: ಇತ್ತೀಚೆಗೆ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ತನ್ನ ಕುಟುಂಬಸ್ಥರನ್ನು ಕಳೆದುಕೊಂಡಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪಿನ ಸ್ಥಾಪಕ ಮತ್ತು ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮಸೂದ್ ಅಜರ್‌ಗೆ 14 ಕೋಟಿ ರೂ.ಗಳನ್ನುಪರಿಹಾರವಾಗಿ ನೀಡಲು ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದೆ.


ಇಸ್ಲಮಾಬಾದ್: ಪಾಕಿಸ್ತಾನ ಉಗ್ರ ಪೋಷಕ ರಾಷ್ಟ್ರ ಎಂಬ ವಿಚಾರ ಇಡೀ ಪ್ರಪಂಚ ಎದುರೇ ಬಟಾಬಯಲಾಗಿ ದಶಕಗಳೇ ಕಳೆದಿವೆ. ಅದಾಗ್ಯೂ ನಾಚಿಗೆ ಇಲ್ಲದೇ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಲೇ ಬಂದಿದೆ. ಇದೀಗ ಲಜ್ಜೆಗೆಟ್ಟ ಪಾಕಿಸ್ತಾನ ಮತ್ತೊಂದು ಹೀನ ಕೃತ್ಯಕ್ಕೆ ಮುಂದಾಗಿದೆ. ಇತ್ತೀಚೆಗೆ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ತನ್ನ ಕುಟುಂಬಸ್ಥರನ್ನು ಕಳೆದುಕೊಂಡಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪಿನ ಸ್ಥಾಪಕ ಮತ್ತು ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ಮಸೂದ್ ಅಜರ್‌ಗೆ(Masood Azhar) 14 ಕೋಟಿ ರೂ.ಗಳನ್ನುಪರಿಹಾರವಾಗಿ ನೀಡಲು ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದೆ. ಇದು ಮಸೂದ್ ಅಜರ್‌ಗೆ ಪರಿಹಾರವಾಗಿ ಈ ಮೊತ್ತ ನೀಡಲು ಪಾಕಿಸ್ತಾನ ನಿರ್ಧರಿಸಿದೆ ಎಂಬ ವಿಚಾರ ಹರಿದಾಡುತ್ತಿದೆ. ಆ ಮೂಲಕ ತನ್ನನ್ನು ತಾನು ಉಗ್ರ ಪೋಷಕ ರಾಷ್ಟ್ರ ಎಂಬುದನ್ನು ಪಾಕಿಸ್ತಾನ ಪದೇ ಪದೆ ಸಾಬೀತು ಮಾಡಿಕೊಳ್ಳುತ್ತಲೇ ಇದೆ.
ವರದಿಗಳ ಪ್ರಕಾರ, ಆಪರೇಷನ್ ಸಿಂಧೂರ್‌ನಲ್ಲಿ ಸಾವನ್ನಪ್ಪಿದ ಉಗ್ರರ ಕುಟುಂಬಗಳಿಗೆ ಪಾಕಿಸ್ತಾನ ಸರ್ಕಾರ ತಲಾ 1 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಿದೆ ಮತ್ತು ಮಸೂದ್ ಅಜರ್ ಈ ಯೋಜನೆಯ ಅತಿದೊಡ್ಡ ಫಲಾನುಭವಿಯಾಗಿದ್ದಾನಂತೆ. ಏಕೆಂದರೆ ಆತನ ಸಹೋದರ ಅಬ್ದುಲ್ ರೌಫ್ ಅಜರ್ ಸೇರಿದಂತೆ ಕುಟುಂಬದ 10 ಸದಸ್ಯರು ಮತ್ತು ಅವರ ನಾಲ್ವರು ಆಪ್ತ ಸಹಾಯಕರು ಭಾರತೀಯ ವಾಯುದಾಳಿಯಲ್ಲಿ ಹತರಾಗಿದ್ದರು. ಹೀಗಾಗಿ, ಮಸೂದ್ ಅಜರ್ ಪಾಕಿಸ್ತಾನ ಸರ್ಕಾರದಿಂದ 14 ಕೋಟಿ ರೂಪಾಯಿ ಪರಿಹಾರವನ್ನು ಪಡೆಯಲಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ: Masood Azhar: ಮಸೂದ್ ಅಜರ್ ಸತ್ತಿಲ್ಲ..! ಕುಟುಂಬಸ್ಥರನ್ನು ಕಳೆದುಕೊಂಡ ಬೆನ್ನಲ್ಲೇ ಉಗ್ರನಿಂದ ಪೋಸ್ಟ್
ಆಪರೇಷನ್ ಸಿಂಧೂರ್‌ನಲ್ಲಿ ಮಸೂದ್ ಅಜರ್ ಕುಟುಂಬ ಖತಂ
ಮೇ 7 ರ ಮಧ್ಯರಾತ್ರಿ, ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಒಳಗೆ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಮಾರಕ, ನಿಖರವಾದ ಕ್ಷಿಪಣಿ ದಾಳಿಗಳ ಆಪರೇಷನ್ ಸಿಂಧೂರ್ ನಡೆಸಿತ್ತು. ಭಾರತ ಗುರಿಯಾಗಿಸಿಕೊಂಡ ಒಂಬತ್ತು ಸ್ಥಳಗಳಲ್ಲಿ ಜೈಶ್-ಎ-ಮೊಹಮ್ಮದ್‌ನ ಪ್ರಧಾನ ಕಚೇರಿಯಾದ ಬಹಾವಲ್ಪುರದಲ್ಲಿರುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಕೂಡ ಒಂದು, ಇದರಲ್ಲಿ ಮಸೂದ್ ಅಜರ್‌ನ 10 ಕುಟುಂಬ ಸದಸ್ಯರು ಮತ್ತು ಅವನ ನಾಲ್ವರು ಆಪ್ತ ಸಹಾಯಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಈ ದಾಳಿಯಲ್ಲಿ ಮಸೂದ್‌ನ ಕಿರಿಯ ಸಹೋದರ ಅಬ್ದುಲ್ ರೌಫ್ ಅಜರ್ ಮತ್ತು ಅವನ ಇಬ್ಬರು ಅಳಿಯಂದಿರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಭಾರತದಲ್ಲಿ ಮೋಸ್ಟ್ ವಾಂಟೆಡ್ ಉಗ್ರನಾಗಿರುವ ಅಬ್ದುಲ್ ರೌಫ್ ಅಜರ್, 1999 ರಲ್ಲಿ ಕಂದಹಾರ್‌ನಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ಅಪಹರಣದ ಮಾಸ್ಟರ್ ಮೈಂಡ್ ಆಗಿದ್ದ ಮತ್ತು 2001 ರ ಸಂಸತ್ತಿನ ದಾಳಿ ಮತ್ತು ಪಠಾಣ್‌ಕೋಟ್ ವಾಯುನೆಲೆಯ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ.