ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Bro: ಡಾ.ಬ್ರೋ ವಿರುದ್ಧ ಆಟೋ, ಕ್ಯಾಬ್‌ ಚಾಲಕರ ಆಕ್ರೋಶ; ಕಾರಣವೇನು?

Dr Bro: ʼನಮ್ಮ ಯಾತ್ರಿʼ ಅಪ್ಲಿಕೇಶನ್‌ ಬಗ್ಗೆ ವಿಡಿಯೊವೊಂದನ್ನು ಡಾ.ಬ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಮಿಷನ್‌ ಇಲ್ಲ, ಕೇವಲ ಸರಳವಾದ ವೇದಿಕೆ ಎಂದು ತಿಳಿಸಿದ್ದಾರೆ. ಹೀಗಾಗಿ ಡಾ. ಬ್ರೋ ವಿರುದ್ಧ ಆಟೋ ಹಾಗೂ ಕ್ಯಾಬ್‌ ಚಾಲಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಡಾ.ಬ್ರೋ ವಿರುದ್ಧ ಆಟೋ, ಕ್ಯಾಬ್‌ ಚಾಲಕರ ಆಕ್ರೋಶ; ಕಾರಣವೇನು?

Profile Prabhakara R Mar 17, 2025 2:05 PM

ಬೆಂಗಳೂರು: ವಿಶ್ವ ಪರ್ಯಟನೆ ಮಾಡುತ್ತಾ, ಯೂಟ್ಯೂಬ್‌ನಲ್ಲಿ ತಮ್ಮ ಪ್ರವಾಸದ ವಿಡಿಯೊಗಳಿಂದಲೇ ಸಾಕಷ್ಟು ಜನಪ್ರಿಯತೆ ಗಳಿಸಿರುವ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ವಿರುದ್ಧ ಕ್ಯಾಬ್‌ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ತಮ್ಮ ವಿಡಿಯೊಗಳಿಂದ ಸಾಕಷ್ಟು ಮೆಚ್ಚುಗೆ ಪಡೆದಿರುವ ಡಾ.ಬ್ರೋ (Dr Bro) ಆಗಾಗ ಕೆಲವೊಂದು ಕಾರಣಕ್ಕೆ ಟೀಕೆಗೆ ಒಳಗಾಗಿದ್ದಾರೆ. ಇದೀಗ ʼನಮ್ಮ ಯಾತ್ರಿʼ (Namma Yatri) ಅಪ್ಲಿಕೇಷನ್‌ ಪ್ರಮೋಟ್ ಮಾಡಿರುವುದು ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

ನಮ್ಮ ಯಾತ್ರಿ ಬಗ್ಗೆ ವಿಡಿಯೊವೊಂದನ್ನು ಡಾ.ಬ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಮಿಷನ್‌ ಇಲ್ಲ, ಕೇವಲ ಸರಳವಾದ ವೇದಿಕೆ, ದಿನಕ್ಕೆ ಶುಲ್ಕ: 25 ರೂ ಅಥವಾ ಒಂದು ರೈಡ್‌ಗೆ 3.5 ರೂ. ಎಂದು ಕ್ಯಾಪ್ಟನ್ ನೀಡಿ, ʼನಮ್ಮ ಯಾತ್ರಿʼ ಅಪ್ಲಿಕೇಷನ್‌ ಅನ್ನು ಪ್ರಮೋಟ್ ಮಾಡಿದ್ದಾರೆ.

ಡಾ. ಬ್ರೋ, ನಮ್ಮ ಯಾತ್ರಿ ಹೇಗೆ ವರ್ಕ್ ಆಗ್ತಾ ಇದೆ? ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಆಟೋ ಚಾಲಕ, ಸೂಪರ್ ಬ್ರೋ, ಕಷ್ಟಮ‌ರ್ ಏನ್ ಪೇ ಮಾಡ್ತಾರೋ ಪೂರ್ತಿ ಅಮೌಂಟ್ ನಮಗೇ ಸಿಗುತ್ತಿದೆ. ನೋ ಕಮಿಷನ್‌. ಕರ್ನಾಟಕದ ಎಲ್ಲ ಆಟೋ ಡ್ರೈವರ್‌ಗಳು ಇದನ್ನೇ ಬಳಸ್ತಿದ್ದಾರೆ. ಕೆಲವು ಆ್ಯಪ್‌ಗಳು ಕಮಿಷನ್ ತಗೊಳುತ್ತವೆ. ನಮ್ಮದು ಲೈಫ್‌ ಟೈಮ್ ಕಮಿಷನ್ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬೇರೆ ಯಾರು ಮಾಡದ ಕೆಲಸವನ್ನು ಇವರು ಮಾಡುತ್ತಿದ್ದಾರೆ. ಐ ಚೆಕಪ್, ಹೆಲ್ತ್ ಚೆಕಪ್, ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನವೂ ಸಿಗುತ್ತಿದೆ. ಹೀಗಾಗಿ ನಮ್ಮ ಯಾತ್ರಿಗೆ ಸಪೋರ್ಟ್ ಮಾಡಿ, ನಮ್ಮ ಚಾಲಕರಿಗೂ ಸಪೋರ್ಟ್ ಮಾಡಿ ಎಂದು ಡಾ. ಬ್ರೋ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಕರ್ನಾಟಕ ಚಾಲಕರ ಪರಿಷತ್‌ ಅಧ್ಯಕ್ಷ ಕೆ. ಸೋಮಶೇಖರ್ ಅಸಮಾಧಾನ ಹೊರಹಾಕಿದ್ದು, ಡಾ. ಬ್ರೋ ತಪ್ಪು ಮಾಹಿತಿ ನೀಡುವ ಮೂಲಕ ಆಟೋ , ಕ್ಯಾಬ್ ಚಾಲಕರ ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ್ಯಪ್‌ಗಳು ಚಾಲಕರನ್ನು ಸುಲಿಗೆ ಮಾಡುತ್ತಿವೆ ಎಂದಿರುವ ಅವರು, ಡಾ. ಬ್ರೋ ವಿಡಿಯೋ ಡಿಲೀಟ್ ಮಾಡಬೇಕು, ಕನ್ನಡಿಗ ಚಾಲಕರ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ಚಾಲಕರ ಪರಿಷತ್ ವತಿಯಿಂದ ಡಾ.ಬ್ರೋ ಅವರಿಗೆ ಮನವಿ ಪತ್ರ ಕೂಡ ನೀಡಲಾಗಿದೆ. ಹೀಗಿದ್ದರೂ ಡಾ.ಬ್ರೋ ವಿಡಿಯೋ ಡಿಲೀಟ್ ಮಾಡದೆ ಶೀರ್ಷಿಕೆಯನ್ನು ಮಾತ್ರ ಬದಲಾಯಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಆಂಧ್ರದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿ ಇದ್ದು ಬೆಂಗಳೂರಿನಲ್ಲಿ ಕೂಡ ಬರಲಿದ್ದು ಚಾಲಕರಿಗೆ ಮತ್ತಷ್ಟು ಕಷ್ಟವಾಗಲಿದೆ. ಈ ಆಪ್‌ಗಳು ಹೇಗೆಲ್ಲಾ ಸುಲಿಗೆ ಮಾಡುತ್ತವೆ ಎಂದು ನಿಮ್ಮ ವಿಡಿಯೋಗೆ ಅನೇಕ ಚಾಲಕರು ಕಾಮೆಂಟ್‌ ಹಾಕಿದ್ದಾರೆ ಅದನ್ನು ಒಮ್ಮೆ ನೋಡಿ, ಕೂಡಲೇ ಇಂತಹ ಆಪ್‌ ಪ್ರಮೋಟ್ ಮಾಡಿರುವ ವಿಡಿಯೋವನ್ನು ಡಿಲೀಟ್ ಮಾಡಿ ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ. ಇಷ್ಟೆಲ್ಲಾ ಮನವಿ ಮಾಡಿ ನಮ್ಮ ಸಮಸ್ಯೆಯನ್ನು ವಿವರಿಸಿದರೂ ಡಾ ಬ್ರೋ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ಕೆ. ಸೋಮಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಅಷ್ಟು ಜನ ಕಮೆಂಟ್ ಮಾಡಿದ್ದರು ವಿಡಿಯೋ ಡಿಲೀಟ್ ಮಾಡದೆ ನೀವು ಸಣ್ಣತನ ತೋರಿಸಿದ್ದೀರಾ, ಹಣಕ್ಕೆ ಮಾತ್ರ ಬೆಲೆ ಕೊಡುವುದು ಎಂದು ಸಾಬೀತು ಮಾಡಿದ್ದೀರಾ ಎಂದಿದ್ದಾರೆ.



ಇನ್ನು ಈ ಬಗ್ಗೆ ಹಲವು ಚಾಲಕರು ಕಮೆಂಟ್‌ ಮಾಡಿದ್ದು, ನಮ್ಮ ಯಾತ್ರೆಯಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರೆ, ದಯವಿಟ್ಟು ಸತ್ಯವನ್ನು ತಿಳಿದುಕೊಂಡು ಈ ವಿಡಿಯೊ ರಿ ಅಪ್ಲೋಡ್ ಮಾಡಿ. ನೀವು ಹೇಳಿರೋದ್ರಲ್ಲಿ 90% ಸುಳ್ಳು ಇದೆ. ನಮ್ಮ ಯಾತ್ರೆ ಕಂಪನಿ ದೊಡ್ಡ ಫ್ರಾಡ್ ಕಂಪನಿ, ಪ್ರತಿ ರೈಡ್‌ನಲ್ಲೂ ಕಮಿಷನ್ ತೆಗೆದುಕೊಳ್ಳುತ್ತದೆ. ಇದರ ಬಗ್ಗೆ ಸ್ವಲ್ಪ ಗಮನಹರಿಸಿ , ನಿಮಗೆ ನಮ್ಮ ಯಾತ್ರೆ ಕಂಪನಿಯವರು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ ಎಂದು ಚಾಲಕರೊಬ್ಬರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Amritsar Golden Temple: ಸ್ವರ್ಣಮಂದಿರ ಮೇಲೆ ಗ್ರೆನೇಡ್‌ ಅಟ್ಯಾಕ್‌- ಆರೋಪಿ ಎನ್‌ಕೌಂಟರ್‌ಗೆ ಬಲಿ

ಮತ್ತೊಬ್ಬ ಚಾಲಕ ಪ್ರತಿಕ್ರಿಯಿಸಿ, ಇವರು ಕ್ಯಾಬ್‌ಗಳಿಗೆ ಸರಿಯಾದ ದರ ಕೊಡ್ತಿಲ್ಲ ಬ್ರದರ್. ಈ ಆಪ್ ಕಂಪನಿಗಳಿಂದ ಚಾಲಕರಿಗೆ ಉಪಯೋಗ ಆಗ್ತಿಲ್ಲ. ಯಾವ ಕಂಪನಿ ಕೂಡ ಸರ್ಕಾರ ನಿಗದಿ ಪಡಿಸಿದ ದರ ಕೊಡ್ತಿಲ್ಲ. ಚಾಲಕರ ಪರವಾಗಿ ಒಂದು ವಿಡಿಯೊ ಮಾಡಿ, ಸರಿಯಾದ ದರ ಯಾಕೆ ಕೊಡ್ತಿಲ್ಲಾ ಅಂತ ಪ್ರಶ್ನಿಸಿ ಎಂದು ಮನವಿ ಮಾಡಿದ್ದಾರೆ.