ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru News: ನೆಲಮೂಲ ಸಂಸ್ಕೃತಿ ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಬೇಕು : ಕುಲಸಚಿವ ಪ್ರೊ. ಬಿ. ರಮೇಶ್

ಎ.ಪಿ.ಎಸ್ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಕರ್ನಾಟಕ ಜಾನ ಪದ ಅಕಾಡೆಮಿ ಸಹಯೋಗದೊಂದಿಗೆ “ಜನಪದ ಮಹಾಕಾವ್ಯಗಳು ಪರಂಪರೆಯ ಮೌಲ್ಯಗಳು” ವಿಷಯ ಕುರಿತು ಒಂದು ದಿನದ ರಾಷ್ಟ್ರೀ ಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜನಪದ ಮಹಾ ಕಾವ್ಯ ಗಳು ಯುಗ ಯುಗಗಳ ಕಥನಕ್ಕೆ ಸಾಕ್ಷಿಯಾಗಿವೆ. ಇಂತಹ ಮಹಾ ಕಾವ್ಯಗಳ ಸಂರಕ್ಷಣೆ ಇಂದಿನ ಅಗತ್ಯ ವಾಗಿದೆ

ನೆಲಮೂಲ ಸಂಸ್ಕೃತಿ ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಬೇಕು

Profile Ashok Nayak May 14, 2025 10:55 PM

ಬೆಂಗಳೂರು: ಯುವ ಸಮೂಹ ಮತ್ತು ಶಿಕ್ಷಣ ಸಂಸ್ಥೆಗಳು ನೆಲಮೂಲ ಸಂಸ್ಕೃತಿಯನ್ನು ಉಳಿಸಿ ಜನಪದ ಮಹಾಕಾವ್ಯಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ.ಬಿ.ರಮೇಶ್ ಹೇಳಿದ್ದಾರೆ. ನಗರದ ಎ.ಪಿ.ಎಸ್ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಕರ್ನಾಟಕ ಜಾನ ಪದ ಅಕಾಡೆಮಿ ಸಹಯೋಗದೊಂದಿಗೆ “ಜನಪದ ಮಹಾಕಾವ್ಯಗಳು ಪರಂಪರೆಯ ಮೌಲ್ಯಗಳು” ವಿಷಯ ಕುರಿತು ಒಂದು ದಿನದ ರಾಷ್ಟ್ರೀ ಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಜನಪದ ಮಹಾ ಕಾವ್ಯಗಳು ಯುಗ ಯುಗಗಳ ಕಥನಕ್ಕೆ ಸಾಕ್ಷಿಯಾಗಿವೆ. ಇಂತಹ ಮಹಾ ಕಾವ್ಯಗಳ ಸಂರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು.

Acharya

ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಹಿ.ಚಿ ಬೋರಲಿಂಗಯ್ಯ ಮಾತನಾಡಿ, 'ಪರಂಪರೆ ಮೆಲುಕಿನಲ್ಲಿ ಜನಪದ ಮಹಾಕಾವ್ಯಗಳ ಸ್ವರೂಪ ಮತ್ತು ಗುಣ ಲಕ್ಷಣಗಳು ಅನನ್ಯ. ಜನಪದ ವೃತ್ತಿಗಾಯಕರ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಇಂದಿನ ಯುವ ಜನತೆಗೆ ಪರಿ ಚಯಿಸುವ ಅಗತ್ಯವಿದೆ ಎಂದು ತಿಳಿಸಿದರು.

ಎ.ಪಿ.ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿಎ. ಡಾ. ವಿಷ್ಣು ಭರತ್ ಎ.ಎಸ್, ಉಪಾಧ್ಯಕ್ಷ ವಿಜಯ ಭಾಸ್ಕರ್, ಪ್ರಧಾನ ಕಾರ್ಯದರ್ಶಿಗಳು ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿಗಳು ಮಂಜುನಾಥ್, ಮೆಂಟರ್ ಮತ್ತು ಟ್ರಸ್ಟಿ ಎ. ಪಿ. ಆಚಾರ್ಯ, ಎ.ಪಿ.ಎಸ್.ಇ.ಟಿ, ಮತ್ತು ಎ.ಪಿ.ಸ್ ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಬಿ. ಜಯಶ್ರೀ ಉಪಸ್ಥಿತರಿದ್ದರು.