Avneet Kaur: ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ಜತೆ ನಟಿ ಅವನೀತ್ ಕೌರ್; ಫೋಟೊ ವೈರಲ್
ʼಮಿಷನ್ ಇಂಪಾಸಿಬಲ್ - ದಿ ಫೈನಲ್ ರೆಕನಿಂಗ್ʼ ಹಾಲಿವುಡ್ ಚಿತ್ರ ಬಿಡುಗಡೆಗೂ ಮುನ್ನವೇ ಸುದ್ದಿಯಾಗುತ್ತಿದೆ. ಹಾಲಿವುಡ್ ನಟ ಟಾಮ್ ಕ್ರೂಸ್ ಅಭಿನಯದ ಈ ಸಿನಿಮಾ ವಿಶ್ವದ ಬೇರೆ ದೇಶಗಳಿಗಿಂತ ಒಂದು ವಾರ ಮೊದಲೇ ಭಾರತದಲ್ಲಿ ತೆರೆ ಕಾಣುತ್ತಿದೆ ಎಂಬ ಸುದ್ದಿ ಇತ್ತೀಚೆಗಷ್ಟೆ ವೈರಲ್ ಆಗಿತ್ತು. ಇದೀಗ ನಟಿ ಅವನೀತ್ ಕೌರ್ ಅವರು ಈ ಸಿನಿಮಾದ ಹಾಲಿವುಡ್ ನಟ ಟಾಮ್ ಕ್ರೂಸ್ ಅವರನ್ನು ಲಂಡನ್ನಲ್ಲಿ ಭೇಟಿ ಮಾಡಿದ್ದು, ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Avneet Kaur


ಹಾಲಿವುಡ್ ನಟ ಟಾಮ್ ಕ್ರೂಸ್ ಅವರು ಜಾಗತಿಕ ಐಕಾನ್ ಆಗಿದ್ದಾರೆ. ಹೀಗಾಗಿ ಇವರ ಜತೆಗೆ ಫೋಟೊ ತೆಗೆಸಿಕೊಳ್ಳಲು ಸಾಮಾನ್ಯ ಜನರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಆಸಕ್ತಿ ವಹಿಸುತ್ತಾರೆ. ಅಂತೆಯೇ ಬಾಲಿವುಡ್ ನಟಿ ಅವನೀತ್ ಕೌರ್ ಕೂಡ ಇತ್ತೀಚೆಗಷ್ಟೆ ಟಾಮ್ ಕ್ರೂಸ್ ಅವರನ್ನು ಭೇಟಿಯಾಗಿದ್ದು ಇವರಿಬ್ಬರು ಜತೆಗಿದ್ದ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಪ್ರೀತಿಯ ಭಾರತದ ಜನತೆಗೆ ವಿಶೇಷ ನಮನಗಳು, ನಿಮ್ಮನ್ನು ಮತ್ತೆ ನೋಡಿ ಬಹಳ ಸಂತೋಷವಾಗಿದ್ದೇನೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ಅವನೀತ್ ಕೌರ್ ಅವರ ಫೋಟೊ ಒಂದಕ್ಕೆ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಲೈಕ್ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿಯಾಗಿತ್ತು.

2024ರಲ್ಲಿಯೇ ನಟಿ ಟಾಮ್ ಕ್ರೂಸ್ ಅವರನ್ನು ಭೇಟಿಯಾಗಿದ್ದ ಅವನೀತ್ ಕೌರ್ ಅವರ ಹಳೆ ಫೋಟೊ ಕೂಡ ಈಗ ಮತ್ತೆ ವೈರಲ್ ಆಗ್ತಿದೆ. ನಟನೊಂದಿಗಿನ ಫೋಟೋಗಳನ್ನು ಈಗ ಮತ್ತೆ ಪೋಸ್ಟ್ ಮಾಡಿದ್ದಾರೆ. ಟಾಮ್ ಕ್ರೂಸ್ ನಟಿಸಿದ ʼಮಿಷನ್ ಇಂಪಾಸಿಬಲ್ʼ ಚಿತ್ರದ ಸೆಟ್ಗೆ ಭೇಟಿ ನೀಡುವ ಅದ್ಭುತ ಅವಕಾಶ ನನಗೆ ಸಿಕ್ಕಿತು. ಚಲನಚಿತ್ರ ನಿರ್ಮಾಣದ ಮ್ಯಾಜಿಕ್ ಅನ್ನು ನೇರವಾಗಿ ನೋಡುವುದು ವಿಸ್ಮಯಕಾರಿಯಾಗಿತ್ತು ಎಂದು ಕ್ಯಾಪ್ಶನ್ ಬರೆದಿದ್ದಾರೆ.

ವೈರಲ್ ಆದ ಫೋಟೊದಲ್ಲಿ ಟಾಮ್ ಕ್ರೂಸ್ ಮತ್ತು ಅವನೀತ್ ಕೌರ್ ಬ್ಲ್ಯಾಕ್ ಟ್ರೆಂಡಿಂಗ್ ಡ್ರೆಸ್ನಲ್ಲಿ ಕಂಗೊಳಿಸಿದ್ದಾರೆ. ಈ ಡ್ರೆಸ್ ಸಿಂಪಲ್ ವಿನ್ಯಾಸವಿದ್ದರೂ ಇಬ್ಬರೂ ಕೂಡ ಸ್ಟೈಲಿಶ್ ಲುಕ್ನಿಂದ ಜನ ಮನ ಸೆಳೆದಿದ್ದಾರೆ. ಅವನೀತ್ ಎರಡು ಫೋಟೊ ಹಂಚಿಕೊಂಡಿದ್ದು ಒಂದರಲ್ಲಿ ಮಾಡೆಲ್ನಂತೆ ಪೋಸ್ ನೀಡಿದ್ದಾರೆ. ಇನ್ನೊಂದರಲ್ಲಿ ನಮಸ್ಕರಿಸುವಂತಹ ದೃಶ್ಯ ಕಾಣಬಹುದು.

ಈ ಸಿನಿಮಾದ ಪ್ರೀಮಿಯರ್ ಶೋ ಕೆನ್ಸ್ ಚಲನಚಿತ್ರೋತ್ಸವದಲ್ಲಿ ಮೇ 14ರಂದು ಪ್ರಥಮ ಪ್ರದರ್ಶನದ ಮೂಲಕ ತೆರೆಕಂಡಿದೆ. ಮೇ 17ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ನಡುವೆ ನಟಿ ಅವನೀತ್ ಕೌರ್ ಅವರು ನಟ ಟಾಮ್ ಕ್ರೂಸ್ ಜತೆಗಿನ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ʼಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್’ ಚಿತ್ರದ ಟಿಕೆಟ್ಗೆ ಭಾರಿ ಬೇಡಿಕೆ ಕಂಡು ಬಂದಿದೆ. ಈಗಾಗಲೇ 11,000 ಟಿಕೆಟ್ಗಳು ಮುಗಂಡ ಬುಕ್ಕಿಂಗ್ ಆಗಿವೆ ಎಂದು ಸ್ವತಃ ಚಿತ್ರತಂಡವೇ ಮಾಹಿತಿ ನೀಡಿದೆ. ಹೀಗಾಗಿ ʼಮಿಷನ್ ಇಂಪಾಸಿಬಲ್ʼ ಸಿನಿಮಾ ಹೈಪ್ ಸೃಷ್ಟಿಸಿದ್ದು ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ.