ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಿಗಾಗಿ ಶಿಬಿರ ಆಯೋಜಿಸಿದ ನೂವೋ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್
ಶಿಬಿರದ ಕಾರ್ಯಕ್ರಮವನ್ನು 30% ಆರೋಗ್ಯ ಶಿಕ್ಷಣ ಮತ್ತು 70% ಮನರಂಜನಾ ಚಟುವಟಿಕೆಗಳನ್ನಾಗಿ ವಿನ್ಯಾಸಗೊಳಿಸಲಾಗಿದ್ದು , ಮಕ್ಕಳು ಕಲಿಕೆಯ ಜೊತೆಗೆ ಆಟಕ್ಕೂ ಸಹ ಸಮಯ ವಿನಿಯೋಗಿಸುವ ಉದ್ದೇಶ ಇತ್ತು. ಮಕ್ಕಳು ಸ್ನೇಹಿತರೊಂದಿಗೆ ತಮ್ಮ ರಕ್ತದ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸುವುದ ರೊಂದಿಗೆ ಇನ್ಸುಲಿನ್ ಸಹ ತೆಗೆದುಕೊಳ್ಳುವುದನ್ನ ಕಲಿತರು.


ಬೆಂಗಳೂರು: ನೂವೋ ನಾರ್ಡಿಸ್ಕ್ ಎಜುಕೇಷನ್ ಫೌಂಡೇಶನ್ ತಮ್ಮ ಎಕ್ಸೆಲೆನ್ಸ್ ಕೇಂದ್ರದ ಮೂಲಕ, 5 ರಿಂದ 18 ವಯಸ್ಸಿನ, ಟೈಪ್ 1 ಡಯಾಬಿಟಿಸ್ ಇರುವ ಮಕ್ಕಳಿಗಾಗಿ ಒಂದು ದಿನದ ಒಳಾಂಗಣ ಬೇಸಿಗೆ ಶಿಬಿರವನ್ನು ಆಯೋಜಿಸಿತ್ತು. ಡಯಾಬಿಟಿಸ್ ಬೆಸ್ಟಿ ಬೇಸಿಗೆ ಶಿಬಿರವು ಇಂದು ಇಂದಿರಾ ಗಾಂಧಿ ಇನ್ಸ್‌ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ (ಐಜಿಐಸಿಎಚ್) ನಲ್ಲಿ ನಡೆಯಿತು.
ಈ ಶಿಬಿರವು, ಮಕ್ಕಳು ತಮ್ಮ ಆರೋಗ್ಯವನ್ನು ನಿಭಾಯಿಸುತ್ತಾ, ಯಾವುದೇ ನಿರ್ಬಂಧಗಳಿಲ್ಲದೆ ಬೇಸಿಗೆ ಶಿಬಿರದ ಸಂಪೂರ್ಣ ಅನುಭವವನ್ನು ಪಡೆಯಲು ಸಹಾಯ ಮಾಡುವ ಉದ್ದೇಶ ಹೊಂದಿತ್ತು. ಸುಮಾರು 130–140 ಜನರು, ಅವರಲ್ಲಿ 50–60 ಮಕ್ಕಳು, ಪೋಷಕರೊಂದಿಗೆ ಶಿಬಿರದಲ್ಲಿ ಭಾಗಿಯಾಗಿದ್ದರು. ಶಿಬಿರದ ಕಾರ್ಯಕ್ರಮವನ್ನು 30% ಆರೋಗ್ಯ ಶಿಕ್ಷಣ ಮತ್ತು 70% ಮನರಂಜನಾ ಚಟುವಟಿಕೆಗಳನ್ನಾಗಿ ವಿನ್ಯಾಸಗೊಳಿಸಲಾಗಿದ್ದು , ಮಕ್ಕಳು ಕಲಿಕೆಯ ಜೊತೆಗೆ ಆಟಕ್ಕೂ ಸಹ ಸಮಯ ವಿನಿಯೋಗಿಸುವ ಉದ್ದೇಶ ಇತ್ತು. ಮಕ್ಕಳು ಸ್ನೇಹಿತರೊಂದಿಗೆ ತಮ್ಮ ರಕ್ತದ ಸಕ್ಕರೆಯ ಪ್ರಮಾಣವನ್ನು ಪರೀಕ್ಷಿಸುವುದರೊಂದಿಗೆ ಇನ್ಸುಲಿನ್ ಸಹ ತೆಗೆದುಕೊಳ್ಳುವುದನ್ನ ಕಲಿತರು.
ಇದನ್ನೂ ಓದಿ: Bangalore palace grounds: ಮೈಸೂರು ರಾಜಮನೆತನಕ್ಕೆ ಟಿಡಿಆರ್: ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ರಿಲೀಫ್
ಕಾರ್ಯಕ್ರಮದ ಪ್ರಮುಖ ಅಂಶಗಳು:
- ಕನ್ನಡದಲ್ಲಿ ಡಯಾಬಿಟಿಸ್ ಬೆಸ್ಟೀಸ್ (Diabetes Besties) ಪರಿಕಲ್ಪನೆಯ ಪರಿಚಯ; ಈ ಪುಸ್ತಕ ಮತ್ತು ವಿಡಿಯೋ ಕನ್ನಡದಲ್ಲಿ ಮಾತ್ರವಲ್ಲದೆ ಇಂಗ್ಲಿಷ್ ಹಾಗು ಹಿಂದಿ ಭಾಷೆಗಳಲ್ಲೂ ಯೌಟ್ಯೂಬ್ ನಲ್ಲಿ ಲಭ್ಯವಿದೆ
- ಮಕ್ಕಳಿಗೆ ಇನ್ಸುಲಿನ್ ವಿತರಣೆ
- ಮಕ್ಕಳಿಗಾಗಿ ಆಕರ್ಷಕ ಆಟಗಳು ಮತ್ತು ಜಾದೂ ಪ್ರದರ್ಶನ, ಹಚ್ಚೆ ಕಲೆ ಹಾಗು ಬಣ್ಣ ತುಂಬುವಂತಹ ಸೃಜನಾತ್ಮಕ ಚಟುವಟಿಕೆಗಳು
ಡಾ. ಸಂಜಯ್ ಕೆ ಎಸ್, ನಿರ್ದೇಶಕರು (ಐಜಿಐಸಿಎಚ್),ಉಲ್ಲಾ ಉಟ್ರೂಪ್ , ಡಿಡಿ & ಐಟಿ ಎಂಟರ್‌ಪ್ರೈಸ್ ಪ್ಲಾಟ್‌ಫಾರ್ಮ್ಸ್ ಮತ್ತು ಟೆಕ್ ಸೇವೆಗಳ ಕಾರ್ಪೊರೇಟ್ ಉಪಾಧ್ಯಕ್ಷರು ಹಾಗೂ ಎನ್‌ಎನ್ ಜಿಬಿಎಸ್‌ನ ಇತರ ಸಹೋದ್ಯೋಗಿಗಳು ಸಮಾರಂಭಕ್ಕೆ ಮೆರುಗು ನೀಡಿದರು. ಡಾ. ವಾಣಿ, ಕೇಂದ್ರದ ಮುಖ್ಯಸ್ಥೆ, ಸ್ಥಳೀಯ ಶೈಕ್ಷಣಿಕ ಕಾರ್ಯಗಳನ್ನುಮುನ್ನಡೆಸಿದರು . ಎನ್‌ಎನ್‌ಇಎಫ್ ಮತ್ತು ನೂವೋ ನಾರ್ಡಿಸ್ಕ್ ಗ್ಲೋಬಲ್ ಬಿಸಿನೆಸ್ ಸರ್ವೀಸಸ್ (ಎನ್‌ಎನ್ ಜಿಬಿಎಸ್) ಪ್ರತಿನಿಧಿಗಳು ಹಾಜರಿದ್ದರು. ಶಿಬಿರದಲ್ಲಿ ವೈದ್ಯರು, ನರ್ಸ್‌ಗಳು, ಪೌಷ್ಟಿಕ ತಜ್ಞರು, ಡಯಾಬಿಟಿಸ್ ತಜ್ಞರು ಹಾಗೂ ಆಡಳಿತ ಸಿಬ್ಬಂದಿಯ ಸ್ವಯಂಸೇವಕರ ತಂಡವು ಮಕ್ಕಳ ಆರೈಕೆಗಾಗಿ ಹಾಜರಿದ್ದರು.

ಇತ್ತೀಚೆಗೆ ನೋವೋ ನೊರ್ಡಿಸ್ಕ್ ನ ಎಕ್ಸೆಲೆನ್ಸ್ ಕೇಂದ್ರ ಸ್ನೇಹ ಸ್ಪರ್ಶ ಎಂಬ ಆರು ಹಂತಗಳ ಮಾರ್ಗದರ್ಶಿ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರೋಗಿಗಳಿಗೆ ಮಾಹಿತಿ, ಆಹಾರ ಯೋಜನೆ, ಆರೋಗ್ಯಕರ ಆಹಾರ ಸೇವನೆ, ಆರೋಗ್ಯ ನಿರ್ವಹಣಾ ತಂತ್ರಗಳು, ಎದುರಿಸುವ ಸಾಮರ್ಥ್ಯಗಳ ತರಬೇತಿ, ಮತ್ತು ಇನ್ನಿತರ ಸಹಾಯವನ್ನು ನೀಡಲಾಗುತ್ತದೆ. Confidence Kit, Healthy Chef Cookbook ಮತ್ತು 6 Diabetes Hacks ಎಂಬ ಪುಸ್ತಕಗಳನ್ನು ಸಹ ಬಿಡುಗಡೆ ಮಾಡಿದ್ದಾರೆ .
ಟೈಪ್ 1 ಡಯಾಬಿಟೀಸ್ ಇರುವ ಮಕ್ಕಳು ಮೊದಲ ಬಾರಿ ಅವರ ಜೀವನ ಶೈಲಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಹಾಗು ಸಹಪಾಠಿಗಳೊಂದಿಗೆ ಸ್ನೇಹ ಬೆಸೆಯಲು ಒಂದು ಅಪೂರ್ವ ಅವಕಾಶವಾಗಿತ್ತು . ಈ ಕಾರ್ಯಕ್ರಮವು ಸಾಮರ್ಥ್ಯ ಮತ್ತು ಭರವಸೆಯ ಆಚರಣೆಯಾಗಿದ್ದು, ಡಯಾಬಿಟೀಸ್ ಇಂದ ಬಳಲುತ್ತಿರುವ ಮಕ್ಕಳು ಸಾಮಾನ್ಯ ಮಕ್ಕಳಂತೆ ಜೀವನ ಮಾಡಲು ಈ ಸಮಾರಂಭ ಒಂದು ಹೃದಯ ಸ್ಪರ್ಶಿ ಆಚರಣೆ