ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನಗರದಲ್ಲಿ ಅದ್ಧೂರಿಯಾಗಿ ನಡೆದ ದ್ರೌಪದಮ್ಮನ 64ನೇ ಹೂವಿನ ಕರಗ ಮಹೋತ್ಸವ

ಮಳೆಯ ಸಿಂಚನದ ನಡುವೆ ರಾತ್ರಿ 10.30ಕ್ಕೆ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ಹೊರ ಬಂದ ಕರಗದ ಪೂಜಾರಿಣಿ ಹೊಸೂರಿನ ಪುಟ್ಟಮ್ಮ, ದೇವಾಲಯದ ಮುಂಭಾಗ ತಮಟೆ ವಾದನದ ಗಸ್ತಿಗೆ ತಕ್ಕಂತೆ ತಲೆಯ ಮೇಲಿನ ಕರಗ ವಾಲದಂತೆ ಎಚ್ಚರವಹಿಸಿ ನೃತ್ಯ ಪ್ರದರ್ಶಿಸಿ ಭಕ್ತಿಭಾವದ ಶಕ್ತಿಯ ಅನಾವರಣ ಮಾಡಿದರು

ನಗರದಲ್ಲಿ ಅದ್ಧೂರಿಯಾಗಿ ನಡೆದ ದ್ರೌಪದಮ್ಮನ 64ನೇ ಹೂವಿನಕರಗ ಮಹೋತ್ಸವ

ಚಿಕ್ಕಬಳ್ಳಾಪುರದಲ್ಲಿ ದ್ರೌಪದಮ್ಮ ಹೂವಿನ ಕರಗವನ್ನು ಹೊತ್ತು ಹೊಸೂರಿನ ಪುಟ್ಟಮ್ಮ ಸಾಗುತ್ತಿರುವ ದೃಶ್ಯ.

Profile Ashok Nayak May 26, 2025 2:00 PM

ಚಿಕ್ಕಬಳ್ಳಾಪುರ: ನಗರದಲ್ಲಿ ದ್ರೌಪದಮ್ಮನ 64ನೇ ಹೂವಿನ ಕರಗ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ, ಸಾಂಸ್ಕೃತಿಕ ಕಲಾತಂಡಗಳ ನಾದ ವೈಭವದ ಸಾಕ್ಷಿಯಲ್ಲಿ ಅದ್ಧೂರಿಯಾಗಿ ನಡೆ ಯಿತು. ಮಹೋತ್ಸವ ಪ್ರಯುಕ್ತ ಬಾಪೂಜಿ ನಗರದಲ್ಲಿರುವ ಮಹೇಶ್ವರಮ್ಮ ದೇವಾಲಯದಲ್ಲಿ ದ್ರೌಪದಮ್ಮ ಕರಗ ಮಹೋತ್ಸವ ಸಮಿತಿ ಹಾಗೂ ಅರುಂಧತಿ ಹರಿಜನ ಅಭಿವೃದ್ಧಿ ಸಂಘದಿಂದ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಮಳೆಯ ಸಿಂಚನದ ನಡುವೆ ರಾತ್ರಿ 10.30ಕ್ಕೆ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ಹೊರ ಬಂದ ಕರಗದ ಪೂಜಾರಿಣಿ ಹೊಸೂರಿನ ಪುಟ್ಟಮ್ಮ, ದೇವಾಲಯದ ಮುಂಭಾಗ ತಮಟೆ ವಾದನದ ಗಸ್ತಿಗೆ ತಕ್ಕಂತೆ ತಲೆಯ ಮೇಲಿನ ಕರಗ ವಾಲದಂತೆ ಎಚ್ಚರವಹಿಸಿ ನೃತ್ಯ ಪ್ರದರ್ಶಿಸಿ ಭಕ್ತಿ ಭಾವದ ಶಕ್ತಿಯ ಅನಾವರಣ ಮಾಡಿದರು. ಆಹೋರಾತ್ರಿ ನಗರವನ್ನು ಪ್ರದಕ್ಷಿಣೆ ಹಾಕಿದ ಕರಗವು ಭಾನುವಾರ ಮಧ್ಯಾಹ್ನದವರೆಗೂ ಮನೆ ಮನೆಗೆ ತೆರಳಿ ಪೂಜೆಯನ್ನು ಸ್ವೀಕರಿಸಿ ಭಕ್ತರ ಹೃನ್ಮನಗಳಲ್ಲಿ ಭಕ್ತಿಯ ಸಿಂಚನ ಹರಿಸಿದರು.

ಇದನ್ನೂ ಓದಿ: Chikkaballapur News: ವೈಭವದಿಂದ ನಡೆದ ಶ್ರೀರಾಮ ಶೋಭಾಯಾತ್ರೆ

ಕಾರ್ಯಕ್ರಮದ ಅಂಗವಾಗಿ ದೇವಾಲಯದಲ್ಲಿ ವಿದ್ಯುತ್ ದೀಪಾಲಂಕಾರ ಕೈಗೊಳ್ಳಲಾಗಿತ್ತು. ಅಷ್ಟೇ ಅಲ್ಲದೆ ಇಡೀ ನಗರ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿತು. ಆಟೋ ಚಾಲಕರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ನಗರದ ನಾನಕಡೆ ಅನ್ನ ಸಂತರ್ಪಣೆ ಏರ್ಪಡಿಸಿದ್ದರು.

ಕರ್ನಾಟಕದಲ್ಲಿ ಚಿಕ್ಕಬಳ್ಳಾಪುರದ ದ್ರೌಪದಮ್ಮ ಕರಗ ಮಹೋತ್ಸವದಲ್ಲಿ ಮಾತ್ರವೇ ಮಹಿಳೆ ಕರಗಹೊರುವ ಪರಂಪರೆ ನಡೆದುಕೊಂಡು ಬಂದಿದೆ. ಇಂತಹ ಸ್ತ್ರೀವಾದಿ ಕರಗ ಮಹೋತ್ಸವದಲ್ಲಿ ರಾಜ್ಯ ಮತ್ತು ನೆರೆ ರಾಜ್ಯಗಳ ಜಾನಪದ ಕಲಾ ತಂಡಗಳು ಪಾಲ್ಗೊಂಡು ಅಮೋಘ ಪ್ರದರ್ಶನ ನೀಡಿದವು.

ಕರಗ ಮಹೋತ್ಸವಕ್ಕೆ ಮಹೇಶ್ವರಮ್ಮ ದೇವಾಲಯ ಬಳಿ ದ್ರೌಪದಮ್ಮ ಕರಗ ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಎಂ.ಶಿವಾನಂದ್, ಸಮಿತಿ ಸಂಚಾಲಕ ಎಂ.ಎಸ್.ಸAದೀಪ್ ಚಕ್ರವರ್ತಿ, ಶ್ರೀಮಾತಾ ಮಹೇಶ್ವರಿ ಮಹಿಳಾ ಮಂಡಳಿ ಅಧ್ಯಕ್ಷೆ ಕೆ.ಕಸ್ತೂರಿ ಶಿವಾನಂದ್ ಮತ್ತಿತರರು ಚಾಲನೆ ನೀಡಿದರು.