ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur rain: ಬಾಗೇಪಲ್ಲಿ ಪಟ್ಟಣದಲ್ಲಿ ಭಾರಿ ಮಳೆ ಅವಾಂತರ ಜನಜೀವನ ಅಸ್ತವ್ಯಸ್ತ

ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸಂಭವಿಸಿದವರ ಪಟ್ಟಣದ ಹೆಚ್ ನರಸಿಂಹಯ್ಯ ವೃತ್ತದಲ್ಲಿ  ರಸ್ತೆಗಳ ಸಂಪೂರ್ಣ ಜಲಾವೃತ ಗೊಂಡಿದ್ದು, ಚರಂಡಿಗಳ ಕೊಳಚೆ ನೀರು ಮಳೆ ನೀರಿರೊಂದಿಗೆ ಸೇರಿ ರಸ್ತೆ ಅಗಲಕ್ಕೂ ಹರಡಿ ಅವಾಂತರ ಸೃಷ್ಟಿಸಿದೆ.

ಬಾಗೇಪಲ್ಲಿ ಪಟ್ಟಣದಲ್ಲಿ ಭಾರಿ ಮಳೆ ಅವಾಂತರ ಜನಜೀವನ ಅಸ್ತವ್ಯಸ್ತ

ಮನೆ ಅವಾಂತರದ ಚಿತ್ರಗಳು

Profile Ashok Nayak May 15, 2025 9:56 AM

ಬಾಗೇಪಲ್ಲಿ: ಬಿಸಿಲ ಬೇಗೆಯಿಂದ ಬೆಂದು ಹೋಗಿದ್ದ ಪಟ್ಟಣದ ವಾಸಿಗಳಿಗೆ ಮಳೆಯ ಸ್ಪರ್ಶ ತಂಪು ನೀಡಿದೆ.ಆದರೆ ಪಟ್ಟಣದ ವಿವಿಧ ವಾರ್ಡಗಳಲ್ಲಿ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಯಲ್ಲೇ ನೀರು ನಿಂತು ಪ್ರಯಾಣಿಕರಿಗೆ ಬಾರಿ ತೊಂದರೆಯಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ಇಳೆ ತಂಪಾದರೂ ಮನೆಗಳಿಗೆ ನೀರು ನುಗ್ಗಿ  ನೀರನ್ನು ಹೊರ ಹಾಕಲು ಮಹಿಳೆಯರು ಹಾಗೂ ಮಕ್ಕಳು ಕಿರಿಕಿರಿ ಅನುಭವಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಹಲವು ಅವಾಂತರಗಳು ಸಂಭವಿಸಿದವರ ಪಟ್ಟಣದ ಹೆಚ್ ನರಸಿಂಹಯ್ಯ ವೃತ್ತದಲ್ಲಿ  ರಸ್ತೆಗಳ ಸಂಪೂರ್ಣ ಜಲಾವೃತ ಗೊಂಡಿದ್ದು, ಚರಂಡಿಗಳ ಕೊಳಚೆ ನೀರು ಮಳೆ ನೀರಿರೊಂದಿಗೆ ಸೇರಿ ರಸ್ತೆ ಅಗಲಕ್ಕೂ ಹರಡಿ ಅವಾಂತರ ಸೃಷ್ಟಿಸಿದೆ.

ಇದನ್ನೂ ಓದಿ: Chip-Based E-Passports: ಚಿಪ್‌ ಆಧಾರಿತ ಇ-ಪಾಸ್‌ಪೋರ್ಟ್‌ ಪರಿಚಯಿಸಿದ ಭಾರತ! ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

ಇದರಿಂದಾಗಿ ಕೆಲಕಾಲ ವಾಹನ ಸಂಚಾರ ಸೇರಿದಂತೆ ನಾಗರೀಕರು ಪರದಾ ಡುವ ಪರಿಸ್ಥಿತಿ ನಿರ್ಮಾಣವಾಯಿತು. ಪದೇ ಪದೇ ಮಳೆ ಬಂದಾಗ ಈ ಸಮಸ್ಯೆ ಪುನರಾವರ್ತನೆ ಯಾಗುತ್ತಿದ್ದರೂ ಸಂಬAಧಪಟ್ಟವರು ಕಣ್ಣಿದ್ದು ಕುರುಡರಂತಾಗಿದ್ದಾರೆ. ಇಂತಹ ಗಂಭೀರ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ಶಪಿಸುತ್ತಿದಾರೆ.

ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿದ ನೀರು ಪಟ್ಟಣದ 13ನೇ ವಾರ್ಡ್ ಸೇರಿದಂತೆ ಹಲವು ವಾರ್ಡುಗಳಲ್ಲಿ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಮಳೆ ನೀರು ಮತ್ತು ಚರಂಡಿಯ ನೀರು ನುಗ್ಗಿ ಜನರು ನೀರನ್ನು ಹೊರ ಹಾಕುವಲ್ಲಿ ಹರಸಾಹಸ ಪಟ್ಟಿದ್ದಾರೆ.