MLA K H PuttaswamyGowda: ಪ್ರಾಚೀನ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಯುವಶಕ್ತಿ ಮುಂದಾಗಬೇಕು : ಕೆ.ಹೆಚ್.ಪುಟ್ಟಸ್ವಾಮಿಗೌಡ
ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಕಸರತ್ತಿನೊಂದಿಗೆ ಧಾರ್ಮಿಕ ಶ್ರದ್ಧೆಯನ್ನು ಬೇಡುತ್ತವೆ. ಜಾರುಟ್ಲು ತರದ ಕ್ರೀಡೆಗಳಿಗೆ ಹಿಂದಿನ ಕಾಲದಲ್ಲಿ ಬಹಳ ಮಾನ್ಯತೆಯಿತ್ತು. ದೈವಸನ್ನಿಧಿಯಲ್ಲಿ ನಡೆಯುವ ಇಂತಹ ಮನರಂಜನೆಯ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ. ಆದರೂ ಹೊಸೂರು ಹೋಬಳಿಯ ಯುವ ಕರು ಉತ್ಸಾಹದಿಂದ ಈ ಕ್ರೀಡೆಯನ್ನು ಆಯೋಜಿಸಿ ಜನತೆಗೆ ಮನರಂಜನೆ ನೀಡುವುದು ಸಂತೋಷದ ಸಂಗತಿಯೆಂದು ಬಣ್ಣಿಸಿದರು

ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಬಸವ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಶ್ರೀ ಹನುಮ ದೇವರ "ಜಾರುಟ್ಲು ಪರಷೆ"ಕ್ರೀಡೆಗೆ ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡರು ಚಾಲನೆ ನೀಡಿದರು.

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಬಸವ ಜಯಂತಿಯ ಪ್ರಯುಕ್ತ ಆಯೋಜಿ ಸಲಾಗಿದ್ದ ಜನಪ್ರಿಯ ಕ್ರೀಡೆಗಳಲ್ಲಿ ಒಂದಾದ ಶ್ರೀ ಹನುಮ ದೇವರ "ಜಾರುಟ್ಲು ಪರಷೆ"ಕ್ರೀಡೆಗೆ ಶಾಸಕ ಕೆ ಹೆಚ್ ಪುಟ್ಟಸ್ವಾಮಿಗೌಡರು ಚಾಲನೆ ನೀಡಿದರು. ಈ ವೇಳೆ ಮಾತನಾಡುತ್ತಾ ಈ ರೀತಿಯ ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಕಸರತ್ತಿನೊಂದಿಗೆ ಧಾರ್ಮಿಕ ಶ್ರದ್ಧೆಯನ್ನು ಬೇಡುತ್ತವೆ. ಜಾರುಟ್ಲು ತರದ ಕ್ರೀಡೆಗಳಿಗೆ ಹಿಂದಿನ ಕಾಲದಲ್ಲಿ ಬಹಳ ಮಾನ್ಯತೆಯಿತ್ತು. ದೈವಸನ್ನಿಧಿಯಲ್ಲಿ ನಡೆಯುವ ಇಂತಹ ಮನರಂಜನೆಯ ಕ್ರೀಡೆಗಳು ಕಣ್ಮರೆ ಯಾಗುತ್ತಿವೆ. ಆದರೂ ಹೊಸೂರು ಹೋಬಳಿಯ ಯುವಕರು ಉತ್ಸಾಹದಿಂದ ಈ ಕ್ರೀಡೆಯನ್ನು ಆಯೋಜಿಸಿ ಜನತೆಗೆ ಮನರಂಜನೆ ನೀಡುವುದು ಸಂತೋಷದ ಸಂಗತಿಯೆಂದು ಬಣ್ಣಿಸಿದರು.
ಇದನ್ನೂ ಓದಿ: Roopa Gururaj Column: ಮುಕುಂದೂರು ಸ್ವಾಮಿಗಳ ಮಡಿಯ ವ್ಯಾಖ್ಯಾನ
ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಉಳಿಸುಕೊಂಡು ಬಂದಿರುವ ಪ್ರಾಚೀನ ಕ್ರೀಡೆಗಳನ್ನು ಮುಂದುವರೆಸಿಕೊAಡು ಹೋಗಲು ನಮ್ಮ ಯುವಕರು ಇನ್ನಷ್ಟು ಜಾಗೃತೆ ವಹಿಸಬೇಕು. ನಿಮ್ಮೊಂದಿಗಿದ್ದು ಶಾಸಕನಾಗಿ ಬೇಕಾದ ಸಹಕಾರ ನೀಡುತ್ತೇನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಜ್ಯೋತಿರೆಡ್ಡಿ,,ಹೊಸೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗೀತಾ ನಾಗರಾಜ್,ಕೆ.ಹೆಚ್.ಪಿ.ಬಣದ ಲಕ್ಷ್ಮಣ್ ರಾವ್ ಪ್ರಮುಖ ಮುಖಂಡರುಗಳು ಚುನಾಯಿತ ಜನ ಪ್ರತಿನಿಧಿಗಳು, ಕಾರ್ಯಕರ್ತರುಗಳು, ಕ್ರೀಡೆಯನ್ನು ವೀಕ್ಷಿಸಲು ಹಲವು ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರುಗಳು ಉಪಸ್ಥಿತರಿದ್ದರು.