ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gruha Lakshmi Scheme: ತಿಪಟೂರಿನ ವಿದ್ಯಾರ್ಥಿನಿಗೆ ವರದಾನವಾದ ಗೃಹಲಕ್ಷ್ಮಿ ಯೋಜನೆ; ವಿದ್ಯಾಭ್ಯಾಸಕ್ಕಾಗಿ ಕಂಪ್ಯೂಟರ್‌ ಕೊಡಿಸಿದ ತಾಯಿ

Gruha Lakshmi Scheme: ತಿಪಟೂರಿನ ವಿದ್ಯಾರ್ಥಿಯೊಬ್ಬಳಿಗೆ ಗೃಹಲಕ್ಷ್ಮಿ ಯೋಜನೆ ಹಣ ವರದಾನವಾಗಿದೆ. ಮಗಳ ವಿದ್ಯಾಭ್ಯಾಸಕ್ಕಾಗಿ ತಾಯಿ, ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ.

Gruha Lakshmi Scheme: ತಿಪಟೂರಿನ ವಿದ್ಯಾರ್ಥಿನಿಗೆ ವರದಾನವಾದ ಗೃಹಲಕ್ಷ್ಮಿ ಯೋಜನೆ; ವಿದ್ಯಾಭ್ಯಾಸಕ್ಕಾಗಿ ಕಂಪ್ಯೂಟರ್‌ ಕೊಡಿಸಿದ ತಾಯಿ

Profile Prabhakara R Jan 22, 2025 1:52 PM

ತಿಪಟೂರು: ಕಾಂಗ್ರೆಸ್‌ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಸಾಕಷ್ಟು ನೆರವಾಗುತ್ತಿದೆ. ವಿಶೇಷವಾಗಿ ಗೃಹಲಕ್ಷ್ಮಿ ಯೋಜನೆಯಿಂದ (Gruha Lakshmi Scheme) ಕೋಟ್ಯಂತರ ಮಹಿಳೆಯರು ಪ್ರಯೋಜನ ಪಡೆಯುತ್ತಿದ್ದಾರೆ. ಯಲಬುರ್ಗಾದಲ್ಲಿ ಇತ್ತೀಚೆಗೆ ಯೋಜನೆಯ ಹಣವನ್ನು ತಾಯಿ ಕೂಡಿಟ್ಟು ಮಗನಿಗೆ ಲ್ಯಾಪ್‌ಟಾಪ್ ಕೊಡಿಸಿ ಗಮನ ಸೆಳೆದಿದ್ದರು. ಅದೇ ರೀತಿ ತಿಪಟೂರಿನ ವಿದ್ಯಾರ್ಥಿಯೊಬ್ಬಳಿಗೆ ಗೃಹಲಕ್ಷ್ಮಿ ಯೋಜನೆ ಹಣ ವರದಾನವಾಗಿದೆ. ಮಗಳ ವಿದ್ಯಾಭ್ಯಾಸಕ್ಕಾಗಿ ತಾಯಿ, ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ಕಂಪ್ಯೂಟರ್ ಕೊಡಿಸಿದ್ದಾರೆ.

ನಗರದ ಕೆಕೆ ಕಾನ್ವೆಂಟ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸೈದಾ ಆಫೀಫಾಗೆ ತಾಯಿ ನಗ್ಮಾಬಾನು ಗೃಹಲಕ್ಷ್ಮಿ ಯೋಜನೆ ಹಣದಲ್ಲಿ ಕಂಪ್ಯೂಟರ್ ಕೊಡಿಸಿದ್ದಾರೆ. ವಿದ್ಯಾರ್ಥಿನಿಯ ತಂದೆಯು ಟು ವೀಲರ್ ಮೆಕಾನಿಕ್ ಆಗಿದ್ದು, ತಾಯಿಯು ಗೃಹಲಕ್ಷ್ಮಿ ಯೋಜನೆ ಅಡಿ ಬರುತ್ತಿದ್ದ ಹಣವನ್ನು ಸಂಗ್ರಹಿಸಿ, ಮಗಳಿಗೆ ಇತ್ತೀಚಿಗೆ ಕಂಪ್ಯೂಟರ್ ಕೊಡಿಸಿದ್ದಾರೆ.

Tiptur Student News

ಇನ್ನು ಈ ವಿದ್ಯಾರ್ಥಿನಿ ಸೈದಾ ಆಫೀಫಾ ಬಹುಮುಖ ಪ್ರತಿಭೆಯಾಗಿದ್ದು, ಇತ್ತೀಚಿಗೆ ನಡೆದ ರಾಜ್ಯಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ (ರಿ) ವತಿಯಿಂದ ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ -2024 ನೀಡಿ ಗೌರವಿಸಲಾಗಿತ್ತು.

Tiptur Student 1

ವಿದ್ಯಾರ್ಥಿನಿಗೆ ಇಬ್ಬರು ಸಹೋದರಿಯರಿದ್ದು ಅದರಲ್ಲಿ ಮೊದಲನೇ ತಂಗಿ ಸೈದಾ ಅನಿಕಾ ನೃತ್ಯ ಮಾಡುವುದರಲ್ಲಿ ಹೆಸರು ಮಾಡುತ್ತಿದ್ದು, ಇನ್ನು ಎರಡನೇ ತಂಗಿಯಾದ ಸೈದಾ ಆರ್ಫ ಒಂದೂವರೆ ವರ್ಷದವಳಿದ್ದಾಗಲೇ 2022 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಪುಟ ಸೇರಿದ್ದಾಳೆ. ಅದೇ ರೀತಿ ವಿದ್ಯಾರ್ಥಿನಿ ಸೈದಾ ಆಫೀಪಾ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಬಹುಮಾನ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಥಮ ಬಹುಮಾನ, ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲೂ ಪ್ರಥಮ ಬಹುಮಾನಗಳಿಸಿ ಹಂತ ಹಂತವಾಗಿ ಬಹುಮುಖ ಪ್ರತಿಭೆಯಾಗಿ ಸಾಧನೆಯ ಮೆಟ್ಟಿಲನ್ನು ಏರುತ್ತಿದ್ದಾಳೆ.

tiptur student (1)

ವಿದ್ಯಾರ್ಥಿನಿಯು ಚಿತ್ರಕಲೆ, ನೃತ್ಯ ಮತ್ತು ಸ್ವಷ್ಟವಾಗಿ ಹಾಗೂ ಸುಲಲಿತವಾಗಿ ಕನ್ನಡದಲ್ಲಿ ನಿರೂಪಣೆ ಮಾಡುವುದರಲ್ಲಿ ನೈಪುಣ್ಯ ಹೊಂದಿದ್ದು ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡು, ಇತರೆ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿಯಾಗಿದ್ದಾಳೆ. ಹುಲಿಕಲ್ ನಟರಾಜು ಸೇರಿ ಹಲವಾರು ಗಣ್ಯರಿಂದ ಗೌರವ ಸನ್ಮಾನಗಳು ಕೂಡ ದೊರೆತಿದ್ದು, ಮಗಳ ಸಾಧನೆಗೆ ತಂದೆ-ತಾಯಿ ಮತ್ತು ಕುಟುಂಬಸ್ಥರು ಬೆನ್ನೆಲುಬಾಗಿ ನಿಂತಿದ್ದಾರೆ.

Tiptur Student (2)

ಈ ಸುದ್ದಿಯನ್ನೂ ಓದಿ | Gruha Lakshmi Scheme: ಗೃಹಲಕ್ಷ್ಮಿ ಹಣದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ಕಂಪ್ಯೂಟರ್ ಕೊಡಿಸಿದ ತಾಯಿ