ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK Playoff Scenario: 4 ಅಂಕ ಹೊಂದಿರುವ ಚೆನ್ನೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ಲೆಕ್ಕಾಚಾರ

ಪ್ಲೇ ಆಫ್ ಕನಸು ಜೀವಂತವಿರಿಸಲು ಚೆನ್ನೈ ಮುಂದಿನ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು.

4 ಅಂಕ ಹೊಂದಿರುವ ಚೆನ್ನೈಗೆ ಇನ್ನೂ ಇದೆ ಪ್ಲೇ ಆಫ್ ಅವಕಾಶ

Profile Abhilash BC Apr 26, 2025 7:56 AM

ಚೆನ್ನೈ: ಹಾಲಿ ಆವೃತ್ತಿಯ ಐಪಿಎಲ್‌(IPl 2025)ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕೇವಲ 2 ಪಂದ್ಯ ಗೆದ್ದು 4 ಅಂಕಗಳನ್ನು ಹೊಂದಿರುವ ಎಂ.ಎಸ್‌ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌(Chennai Super Kings) ತಂಡದ ಪ್ಲೇ ಆಫ್(CSK Playoff Scenario) ಕನಸು ಇನ್ನೂ ಜೀವಂತವಾಗಿದೆ. ಹಾಗಾದರೆ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಸೋತ ನಂತರ ಚೆನ್ನೈ ತಂಡ ಪ್ಲೇ ಆಫ್‌ಗೆ ಹೇಗೆ ಅರ್ಹತೆ ಪಡೆಯಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಚೆನ್ನೈ ಉಳಿದಿರುವ ಉಳಿದ ಎಲ್ಲಾ 5 ಪಂದ್ಯಗಳನ್ನು ಗೆದ್ದರೆ ಗರಿಷ್ಠ 14 ಅಂಕಗಳನ್ನು ಪಡೆಯಬಹುದು. 2024 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 14 ಅಂಕಗಳೊಂದಿಗೆ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಆರ್‌ಸಿಬಿ 14 ಅಂಕಗಳೊಂದಿಗೆ ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್ (DC) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ಜತೆ ಸಮಬಲ ಸಾಧಿಸಿತ್ತು. ಆದರೆ ಉತ್ತಮ ರನ್‌ರೇಟ್‌ ಆಧಾರದ ಮೇಲೆ ಮುನ್ನಡೆ ಸಾಧಿಸಿದ್ದ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆದಿತ್ತು. ಇದೀಗ ಚೆನ್ನೈಗೂ ಅದೇ ರೀತಿಯ ಅವಕಾಶವಿದೆ. ಆದರೆ ಇಲ್ಲೂ ಒಂದು ಲೆಕ್ಕಾಚಾರವಿದೆ.

ಪ್ಲೇ ಆಫ್ ಕನಸು ಜೀವಂತವಿರಿಸಲು ಚೆನ್ನೈ ಮುಂದಿನ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲುವುಗಳನ್ನು ಪಡೆಯಬಾರದು. ಆರ್‌ಸಿಬಿ 9 ಪಂದ್ಯಗಳಿಂದ 12 ಅಂಕ ಹೊಂದಿದ್ದರೆ, ಮುಂಬೈ 9 ಪಂದ್ಯಗಳಲ್ಲಿ 10 ಅಂಕ ಪಡೆದಿದೆ. ಇದರ ಜತೆಗೆ ಪಂಜಾಬ್‌ ಮತ್ತು ಲಕ್ನೋ ಕೂಡ ಸೋಲು ಕಾಣಬೇಕು.

ಇದನ್ನೂ ಓದಿ IPL 2025: 7 ಪಂದ್ಯ ಸೋತ ರಾಜಸ್ಥಾನ್‌ ತಂಡದ ಪ್ಲೇ ಆಫ್‌ ಲೆಕ್ಕಾಚಾರ ಹೇಗಿದೆ?

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಡಿವಾಲ್ಡ್​ ಬ್ರೆವಿಸ್​ 42 ರನ್​ (25 ಎಸೆತ, 1 ಬೌಂಡರಿ, 4 ಸಿಕ್ಸರ್​) ದಿಟ್ಟ ಆಟದ ನೆರವಿನಿಂದ 19.5 ಓವರ್​ಗಳಲ್ಲಿ 154 ರನ್​ ಗಳಿಸಿತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಸನ್​ರೈಸರ್ಸ್​ ಇಶಾನ್​ ಕಿಶನ್​ (44 ರನ್​, 34 ಎಸೆತ, 5 ಬೌಂಡರಿ, 1 ಸಿಕ್ಸರ್​) ಮತ್ತು ಹೋರಾಟದಿಂದ 18.4 ಓವರ್​ಗಳಲ್ಲಿ 5 ವಿಕೆಟ್​ಗೆ 155 ರನ್​ ಗಳಿಸಿ ಗೆಲುವು ಸಾಧಿಸಿತು. ಹೈದರಾಬಾದ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್​ ಪಟೇಲ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.