Donald Trump: ಖಡ್ಗ ಹಿಡಿದು ವಿಚಿತ್ರ ಡಾನ್ಸ್- ಕಮಾಂಡೊಗಳಿಗೆ ಮುಜುಗರ ತಂದ್ರಾ ಟ್ರಂಪ್?
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಜಗತ್ತಿನ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸಾಕಷ್ಟು ಕುಣಿದು ಕುಪ್ಪಳಿಸಿದ್ದ ಟ್ರಂಪ್ ಇದೀಗ ಕಮಾಂಡೊಗಳ ಖಡ್ಗ ಹಿಡಿದು ವಿಚಿತ್ರವಾಗಿ ಕುಣಿದಿದ್ದಾರೆ. ಎಪ್ಪತ್ತೊಂಬರ ಇಳಿ ವಯಸ್ಸಿನ ಅಮೆರಿಕ ಅಧ್ಯಕ್ಷರ ಜೋಶ್ ನೋಡಿ ಹಲವರು ಫಿದಾ ಆಗಿದ್ದಾರೆ. ಮತ್ತೊಂದೆಡೆ ಜತೆಗಿದ್ದ ಕಮಾಂಡೋಗಳು ಮುಜುಗರಕ್ಕೊಳಗಾಗಿದ್ದಾರೆ.
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್(Donald Trump) ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪದಗ್ರಹಣ ಸಮಾರಂಭದಲ್ಲಿ ಜಗತ್ತಿನ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಸಾಕಷ್ಟು ಕುಣಿದು ಕುಪ್ಪಳಿಸಿದ್ದ ಟ್ರಂಪ್ ಇದೀಗ ಕಮಾಂಡೊಗಳ ಖಡ್ಗ ಹಿಡಿದು(Military Sword) ವಿಚಿತ್ರವಾಗಿ ಕುಣಿದಿದ್ದಾರೆ. ಎಪ್ಪತ್ತೊಂಬರ ಇಳಿ ವಯಸ್ಸಿನ ಅಮೆರಿಕ ಅಧ್ಯಕ್ಷರ ಜೋಶ್ ನೋಡಿ ಹಲವರು ಫಿದಾ ಆಗಿದ್ದಾರೆ. ಟ್ರಂಪ್ ಡ್ಯಾನ್ಸ್ ಮಾಡಿರುವ ವಿಡಿಯೊ ಸಖತ್ ವೈರಲ್ ಆಗುತ್ತಿದೆ.(Trump Sword Dance)
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷ ಗದ್ದುಗೆ ಏರಿರುವ ಡೊನಾಲ್ಡ್ ಟ್ರಂಪ್ ಸಂಭ್ರಮದಲ್ಲಿದ್ದಾರೆ. ಆಗಾಗ್ಗೆ ಕುಣಿದು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಪದಗ್ರಹಣ ಆದ ಕೂಡಲೇ ವೇದಿಕೆಯಲ್ಲೂ ಕಮಾಂಡೊಗಳ ಕೈಯಲ್ಲಿದ್ದ ಖಡ್ಗ ಹಿಡಿದು ಉತ್ಸಾಹದಿಂದ ಹಲವು ನಿಮಿಷಗಳು ಹೆಜ್ಜೆ ಹಾಕಿದ್ದಾರೆ. ಅಲ್ಲಿದ್ದ ಸಹಸ್ರಾರು ಜನರು ಶಿಳ್ಳೆ, ಚಪ್ಪಾಳೆ ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆದರೆ ಅವರ ಜತೆಗಿದ್ದ ಸೀಕ್ರೆಟ್ ಏಜೆಂಟ್‌ಗಳು ಮುಜುಗರಕ್ಕೀಡಾಗಿದ್ದಾರೆ.
It's legal to have fun in America.
— Usha Vance News (@UshaVanceNews) January 21, 2025
🇺🇸pic.twitter.com/SssvADlniq
ಟ್ರಂಪ್ ಮಹತ್ವದ ಘೋಷಣೆ
ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಮಹತ್ವದ ಘೋಷಣೆಗಳನ್ನು ಪ್ರಕಟಿಸಿದ್ದಾರೆ. ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ದಕ್ಷಿಣ ಗಡಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.
ಮೆಕ್ಸಿಕೋ- ಅಮೆರಿಕ ಗಡಿ ಭಾಗದಲ್ಲಿ ಅಮೆರಿಕ ಸೇನೆಯನ್ನು ನಿಯೋಜಿಸಲಾಗುತ್ತದೆ, ಈ ಮೂಲಕ ಅಕ್ರಮ ನುಸುಳುಕೋರರಿಗೆ ಬಾಗಿಲು ಬಂದ್ ಆಗಲಿದೆ, ಈಗಾಗಲೇ ಅಮೆರಿಕ ಪ್ರವೇಶಿಸಿರುವ ಅಕ್ರಮ ನುಸುಳುಕೋರರನ್ನು ಹೊರಹಾಕುತ್ತೇವೆ, ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಿಸುವ ಕೆಲಸ ನಡೆಯಲಿದೆ ಎಂದು ಘೋಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Cylinder Blast: ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಸಿಲಿಂಡರ್‌ಗಳ ಸ್ಫೋಟ!