Sunday, 22nd December 2024

International Masters League: ಭಾರತ ತಂಡಕ್ಕೆ ಸಚಿನ್‌ ನಾಯಕ

ಮುಂಬಯಿ: ಇಂಟರ್‌ನ್ಯಾಷನಲ್ ಮಾಸ್ಟರ್ಸ್ ಕ್ರಿಕೆಟ್‌ ಲೀಗ್‌ನ(International Masters League) ಉದ್ಘಾಟನಾ ಆವೃತ್ತಿ ಮುಂದಿನ ತಿಂಗಳು ನವೆಂಬರ್‌ 17ರಿಂದ ಡಿಸೆಂಬರ್‌ 8ರವರೆ ನಡೆಯಲಿದೆ. ಈ ಟೂರ್ನಿಯಲ್ಲಿ ಮಾಜಿ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್‌(Sachin Tendulkar), ಬ್ರಿಯಾನ್‌ ಲಾರಾ, ಜಾಂಟಿ ರೋಡ್ಸ್‌, ಶೇನ್‌ ವಾಟ್ಸನ್‌, ಕುಮಾರ ಸಂಗಕ್ಕರ, ಜಾಕ್‌ ಕ್ಯಾಲಿಸ್‌ ಸೇರಿದಂತೆ ಹಲವು ಘಟಾನುಘಟಿ ಆಟಗಾರರು ಕಣಕ್ಕಿಳಿಯಲಿದ್ದಾರೆ. ಪಂದ್ಯಗಳು ಮುಂಬೈ, ಲಕ್ನೋ ಮತ್ತು ರಾಯಪುರದಲ್ಲಿ ನಡೆಯಲಿದೆ. ಎಲ್ಲ ಸೆಮಿ ಮತ್ತು ಫೈನಲ್‌ ಪಂದ್ಯಗಳಿಗೆ ರಾಯಪುರ ಆತಿಥ್ಯ ವಹಿಸಿಕೊಂಡಿದೆ.

ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್‌ ಇಂಡೀಸ್‌ ಸೆಣಸಾಟ ನಡೆಸಲಿದೆ. ಸಚಿನ್‌ ತೆಂಡೂಲ್ಕರ್‌ ಅವರು ಭಾರತ ಮಾಸ್ಟರ್ಸ್‌ ತಂಡದ ನಾಯಕರಾಗಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸುನಿಲ್‌ ಗಾವಸ್ಕರ್ ಅವರು ಲೀಗ್‌ ಕಮಿಷನರ್ ಆಗಿದ್ದಾರೆ. ನ.17ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಭಾರತ ಮಾಸ್ಟರ್ಸ್‌ ತಂಡ ಶ್ರೀಲಂಕಾ ಮಾಸ್ಟರ್ಸ್ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಆರು ತಂಡಗಳ ನಾಯಕರು

ತಂಡನಾಯಕ
ಭಾರತಸಚಿನ್‌ ತೆಂಡೂಲ್ಕರ್‌
ಶ್ರೀಲಂಕಾಕುಮಾರ ಸಂಗಕ್ಕರ
ಇಂಗ್ಲೆಂಡ್‌ಇಯಾನ್‌ ಮಾರ್ಗನ್‌
ವೆಸ್ಟ್‌ ಇಂಡೀಸ್‌ಬ್ರಿಯಾನ್‌ ಲಾರಾ
ಆಸ್ಟ್ರೇಲಿಯಾಶೇನ್‌ ವಾಟ್ಸನ್‌
ದಕ್ಷಿಣ ಆಫ್ರಿಕಾಜಾಕ್‌ ಕ್ಯಾಲಿಸ್‌

ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಿದ ಸಚಿನ್

ಸಚಿನ್ ತೆಂಡೂಲ್ಕರ್(Sachin Tendulkar) ಅಮೆರಿಕ ರಾಷ್ಟ್ರೀಯ ಕ್ರಿಕೆಟ್ ಲೀಗ್(America’s NCL) ಮಾಲೀಕರ(NCL ownership) ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಕ್ರಿಕೆಟ್ ನನ್ನ ಜೀವನದ ಅತಿದೊಡ್ಡ ಪ್ರಯಾಣವಾಗಿದೆ. ಅಮೆರಿಕದಲ್ಲಿ ಕ್ರಿಕೆಟ್ ಬೆಳವಣಿಗೆ ಕಾಣುತ್ತಿರುವ ಈ ಉತ್ತೇಜಕ ಸಮಯದಲ್ಲಿ ರಾಷ್ಟ್ರೀಯ ಕ್ರಿಕೆಟ್ ಲೀಗ್ ಸೇರಲು ಅತ್ಯಂತ ಸಂತಸಗೊಂಡಿದ್ದೇನೆ ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿ IND vs BAN: ಸೂರ್ಯಕುಮಾರ್‌ ಸಿಕ್ಸರ್‌ ಏಟಿಗೆ ಜಾಸ್‌ ಬಟ್ಲರ್‌ ದಾಖಲೆ ಪತನ

‘ಹೊಸ ಪೀಳಿಗೆಯ ಅಭಿಮಾನಿಗಳನ್ನು ಪ್ರೇರೇಪಿಸುವ ಮೂಲಕ ವಿಶ್ವ ದರ್ಜೆಯ ಕ್ರಿಕೆಟ್‌ಗೆ ವೇದಿಕೆ ಸೃಷ್ಟಿಸುವುದು ಎನ್‌ಸಿಎಲ್‌ನ ಉದ್ದೇಶವಾಗಿದೆ. ಈ ಹೊಸ ಉಪಕ್ರಮದ ಭಾಗವಾಗಲು ಮತ್ತು ಅಮೆರಿಕದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಸಾಕ್ಷಿಯಾಗಲು ನಾನು ಎದುರು ನೋಡುತ್ತಿದ್ದೇನೆ’ಎಂದು ತೆಂಡೂಲ್ಕರ್ ಹೇಳಿದ್ದಾರೆ.

ಸುನಿಲ್ ಗವಾಸ್ಕರ್, ಜಹೀರ್ ಅಬ್ಬಾಸ್, ವಾಸಿಂ ಅಕ್ರಮ್, ದಿಲೀಪ್ ವೆಂಗ್‌ಸರ್ಕರ್, ಸರ್ ವಿವಿಯನ್ ರಿಚರ್ಡ್ಸ್, ವೆಂಕಟೇಶ್ ಪ್ರಸಾದ್, ಸನತ್ ಜಯಸೂರ್ಯ, ಮೊಯಿನ್ ಖಾನ್ ಮತ್ತು ಬ್ಲೇರ್ ಫ್ರಾಂಕ್ಲಿನ್ ಅವರಂತಹ ಕ್ರಿಕೆಟ್ ದಂತಕಥೆಗಳನ್ನು ಎನ್‌ಸಿಎಲ್‌ ಒಟ್ಟುಗೂಡಿಸುತ್ತದೆ. ಕ್ರಿಕೆಟ್ ಹೀರೊಗಳು ಮುಂದಿನ ಪೀಳಿಗೆಯ ಆಟಗಾರರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಿದ್ದಾರೆ.