ದೋಹಾ: ಭಾರತದ ದಿಗ್ಗಜ ಪಂಕಜ್ ಅಡ್ವಾಣಿ(Pankaj Advani) ಅವರು ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನಲ್ಲಿ(IBSF World Billiards Championship) ಇಂಗ್ಲೆಂಡ್ನ ರಾಬರ್ಟ್ ಹಾಲ್(Robert Hall) ಅವರನ್ನು 4-2 ರಿಂದ ಸೋಲಿಸುವ ಮೂಲಕ ಸತತ 28ನೇ ವಿಶ್ವ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಕಜ್ಗೆ ಬಿಲಿಯರ್ಡ್ಸ್ನಲ್ಲಿ ಇದು ಒಟ್ಟಾರೆ 20ನೇ ವಿಶ್ವ ಕಿರೀಟವಾಗಿದೆ. ಅವರು ಸ್ನೂಕರ್ನಲ್ಲೂ 8 ವಿಶ್ವ ಕಿರೀಟ ಗೆದ್ದುಕೊಂಡಿದ್ದಾರೆ.
ಗೆಲುವಿನ ಬಳಿಕ ಮಾತನಾಡಿದ ಬೆಂಗಳೂರಿನ ಪಂಕಜ್, ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಳ ಗೆಲುವಿನ ಸರಣಿಯಲ್ಲಿರುವುದು ಅದ್ಭುತವಾಗಿದೆ. ಈ ಗೆಲುವು ನನ್ನ ದೇಶ ಮತ್ತು ಕುಟುಂಬಕ್ಕೆ ಎಂದು ಹೇಳಿದರು. ಶನಿವಾರ ದೋಹಾದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಪಂಕಜ್ ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಆ ಬಳಿಕ ಮೇಲುಗೈ ಸಾಧಿಸಿ ಮೊದಲಿಗರಾಗಿ 150 ಅಂಕಗಳ ತಲುಪಿದರು. ನಂತರ 2 ಮತ್ತು 3ನೇ ಫ್ರೇಮ್ನಲ್ಲೂ ಪಂಕಜ್ ಗೆಲುವು ಸಾಧಿಸಿದರು. ಆದರೆ 4 ಮತ್ತು 5ನೇ ಫ್ರೇಮ್ನಲ್ಲಿ ಹಾಲ್ ತಿರುಗೇಟು ನೀಡಿದರು. 6ನೇ ಫ್ರೇಮ್ನಲ್ಲಿ ಪಂಕಜ್ ಮತ್ತೆ ಲಯ ಕಂಡುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದರು. ಒಟ್ಟಾರೆಯಾಗಿ 151-94, 151-0, 150-84, 74-151, 6-154, 152-46 ಅಂತರದಿಂದ ಪಂಕಜ್ ಗೆಲುವು ಸಾಧಿಸಿದರು.
🚨 Pankaj Advani of India wins 28th World Title at the World IBSF Billiards Championship 🏆
— The Khel India (@TheKhelIndia) November 9, 2024
He defeated Robert Hall🏴 and successfully defends IBSF Billiards Championships 150 Up.
ABSOLUTE LEGEND ✨ pic.twitter.com/4oSzS9fZkP
ಪಂಕಜ್ ಗೆದ್ದ ಪ್ರಶಸ್ತಿ ಪಟ್ಟಿ
ವಿಶ್ವ ಬಿಲಿಯರ್ಡ್ಸ್: 10 (2005, 2008, 2014, 2016, 2017, 2018, 2019, 2022, 2023, 2024)
ವಿಶ್ವ ಬಿಲಿಯರ್ಡ್ಸ್: 9 (2005, 2007, 2008, 2009, 2012, 2014, 2015, 2018, 2023)
ವಿಶ್ವ ತಂಡ ಬಿಲಿಯರ್ಡ್ಸ್ ಚಾಂಪಿಯನ್ಶಿಪ್: 1 (2014)
ವಿಶ್ವ ಸ್ನೂಕರ್ ಚಾಂಪಿಯನ್ಶಿಪ್: 3 (2003, 2015, 2017)
ವಿಶ್ವ 6-ರೆಡ್ ಸ್ನೂಕರ್: 3 (2015, 2014, 2021)
ವಿಶ್ವ ಸ್ನೂಕರ್ ತಂಡ ಚಾಂಪಿಯನ್ಶಿಪ್: 2 (2018, 2019)