Thursday, 28th November 2024

Shafali Verma: ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ

Shafali Verma

ದುಬೈ: ಮಹಿಳಾ ಟಿ20 ವಿಶ್ವಕಪ್‌ನ(Womens T20 World Cup) ಶ್ರೀಲಂಕಾ(INDW vs SLW) ವಿರುದ್ಧದ ಪಂದ್ಯದಲ್ಲಿ ಭಾರತದ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮಾ(Shafali Verma) ಅವರು ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 2 ಸಾವಿರ ರನ್‌ ಪೂರೈಸಿದ ಅತಿ ಕಿರಿಯ ಆಟರ್ಗಾತಿ ಎನಿಸಿಕೊಂಡರು. ಲಂಕಾ ವಿರುದ್ಧ 6 ರನ್‌ ಗಳಿಸುತ್ತಿದ್ದಂತೆ ಶಫಾಲಿ ಈ ಮೈಲುಗಲ್ಲು ನೆಟ್ಟರು.

ಶಫಾಲಿಗೂ ಮುನ್ನ ಈ ದಾಖಲೆ ಐರ್ಲೆಂಡ್‌ನ ಗ್ಯಾಬಿ ಲೆವಿಸ್‌ ಅವರ ಹೆಸರಿನಲ್ಲಿತ್ತು. ಅವರು 23 ವರ್ಷ 35ನೇ ದಿನದಲ್ಲಿದ್ದಾಗ 2,000 ರನ್‌ ಗಡಿ ದಾಟಿದ್ದರು. ಇದೀಗ ಶಫಾಲಿ 20 ವರ್ಷ 255 ದಿನಗಳಲ್ಲಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ. ಶಫಾಲಿ ಲಂಕಾ ವಿರುದ್ಧ 40 ಎಸೆತಗಳಿಂದ 43 ರನ್‌ ಬಾರಿಸಿದ್ದರು.

ಮಹಿಳಾ T20ಯಲ್ಲಿ 2000 ರನ್‌ ಬಾರಿಸಿದ ಕಿರಿಯ ಬ್ಯಾಟರ್‌ಗಳು

ಶಫಾಲಿ ವರ್ಮಾ- 20 ವರ್ಷ, 255 ದಿನ

ಗ್ಯಾಬಿ ಲೆವಿಸ್‌-23 ವರ್ಷ, 35 ದಿನ

ಜೆಮಿಮಾ ರಾಡ್ರಿಗಸ್‌-23 ವರ್ಷ, 318 ದಿನ

ಸ್ಟಾಫಾನಿ ಟೇಲರ್-24 ದಿನ, 279 ದಿನ

ಹೀಲಿ ಮ್ಯಾಥ್ಯೂಸ್-25 ವರ್ಷ, 200 ದಿನ

ಮಂಧನಾ ಮತ್ತು ಶಫಾಲಿ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕವೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಆರಂಭಿಕ ವಿಕೆಟ್‌ಗೆ 98 ರನ್‌ ರಾಶಿ ಹಾಕಿದ ಈ ಜೋಡಿ ಹಾಲಿ ವರ್ಷದ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಜತೆಯಾಟದ ರನ್ ಗಳಿಕೆಯನ್ನು 825ರನ್ ಗಳಿಕೆ ಏರಿಕೆ ಮಾಡಿಕೊಂಡರು. ಇದೇ ವೇಳೆ ಮಹಿಳಾ ಟಿ20ಯಲ್ಲಿ ಜೋಡಿಯೊಂದು ಗಳಿಸಿದ ಗರಿಷ್ಠ ಜತೆಯಾಟದ ಮೊತ್ತವನ್ನು ದಾಖಲಿಸಿದರು. ಇದಕ್ಕೂ ಮೊದಲು 2019ರಲ್ಲಿ ಥಾಯ್ಲೆಂಡ್‌ನ ನರುಯೆಮೊಳ್ ಚೈವೈ ಮತ್ತು ನಟ್ಠಕಾನ್ ಚಂತಂ ಜೋಡಿ 723 ರನ್ ಗಳಿಸಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ, ಮಂಧನಾ(50) ಮತ್ತು ನಾಯಕಿ ಹರ್ಮನ್‌ಪ್ರೀತ್‌ ಕೌರ್‌(ಅಜೇಯ 52) ಬಾರಿಸಿದ ಅರ್ಧಶತಕದ ನೆರವಿನಿಂದ 3 ವಿಕೆಟ್‌ಗೆ 172 ರನ್‌ ಬಾರಿಸಿತು. ಬೃಹತ್‌ ಮೊತ್ತ ಕಂಡು ಆರಂಭದಲ್ಲೇ ಕುಸಿತ ಕಂಡ ಶ್ರೀಲಂಕಾ ಕೇವಲ 90 ರನ್‌ಗೆ ಸರ್ವಪತನ ಕಂಡಿತು. 82 ರನ್ ಗಳ ಭರ್ಜರಿ ಜಯ ದಾಖಲಿಸಿದ ಭಾರತ, ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತೀ ದೊಡ್ಡ ಗೆಲುವು ದಾಖಲಿಸಿತು.