ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sunil Gavaskar: ಕೊಹ್ಲಿ, ರೋಹಿತ್‌ ಏಕದಿನ ವಿಶ್ವಕಪ್‌ ಆಡಲು ಸಾಧ್ಯವಿಲ್ಲ; ಗವಾಸ್ಕರ್‌ ಅಚ್ಚರಿಯ ಹೇಳಿಕೆ

Virat Kohli And Rohit Sharma: ಇಂಡಿಯಾ ಟುಡೇ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಗವಾಸ್ಕರ್‌, 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿ ಮತ್ತು ರೋಹಿತ್‌ ಅದ್ಭುತ ಪ್ರದರ್ಶನ ನೀಡಿದ್ದರೂ, ಅವರು ಇನ್ನೂ ಎರಡು ವರ್ಷಗಳ ದೂರದಲ್ಲಿರುವ ಏಕದಿನ ವಿಶ್ವಕಪ್‌ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

ಕೊಹ್ಲಿ, ರೋಹಿತ್‌ ಏಕದಿನ ವಿಶ್ವಕಪ್‌ ಆಡಲು ಸಾಧ್ಯವಿಲ್ಲ; ಗವಾಸ್ಕರ್‌

Profile Abhilash BC May 13, 2025 10:06 AM

ಮುಂಬಯಿ: ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಹೇಳಿರುವ ಟೀಮ್‌ ಇಂಡಿಯಾದ ಆಟಗಾರರಾದ ರೋಹಿತ್‌ ಶರ್ಮ(Rohit Sharma) ಮತ್ತು ವಿರಾಟ್‌ ಕೊಹ್ಲಿ(Virat Kohli) ಇನ್ನು ಏಕದಿನ ಹಾಗೂ ಐಪಿಎಲ್‌ ಮಾತ್ರ ಆಡಲಿದ್ದಾರೆ. ಉಭಯ ಆಟಗಾರರು 2027ರ ಏಕದಿನ ವಿಶ್ವಕಪ್‌(2027 ODI World Cup) ಮೇಲೆ ಕಣ್ಣಿಟ್ಟಿದ್ದು, ಆ ಬಳಿಕವೇ ಏಕದಿನದಿಂದ ನಿವೃತ್ತಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಮಾಜಿ ದಿಗ್ಗಜ ಆಟಗಾರ ಸುನೀಲ್‌ ಗವಾಸ್ಕರ್‌(Sunil Gavaskar) ಅವರು ರೋಹಿತ್‌ ಮತ್ತು ಕೊಹ್ಲಿ 2027 ರ ಏಕದಿನ ವಿಶ್ವಕಪ್ ಭಾರತದ ತಂಡದಲ್ಲಿ ಇರುವುದಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಜತೆಗೆ ಇದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ.

ಇಂಡಿಯಾ ಟುಡೇ ಜತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಗವಾಸ್ಕರ್‌, 50 ಓವರ್‌ಗಳ ಸ್ವರೂಪದಲ್ಲಿ ಕೊಹ್ಲಿ ಮತ್ತು ರೋಹಿತ್‌ ಅದ್ಭುತ ಪ್ರದರ್ಶನ ನೀಡಿದ್ದರೂ, ಅವರು ಇನ್ನೂ ಎರಡು ವರ್ಷಗಳ ದೂರದಲ್ಲಿರುವ ಏಕದಿನ ವಿಶ್ವಕಪ್‌ ಆಡುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದಾರೆ.

2027 ರ ಏಕದಿನ ವಿಶ್ವಕಪ್ ನಡೆಯುವ ಹೊತ್ತಿಗೆ ರೋಹಿತ್‌ಗೆ 40 ವರ್ಷ ವಯಸ್ಸಾಗಿದ್ದರೆ, ವಿರಾಟ್‌ಗೆ 38 ವರ್ಷ ವಯಸ್ಸಾಗಿರುತ್ತದೆ. ರೋಹಿತ್ ಅವರ ಫಿಟ್ನೆಸ್ ಮುಖ್ಯ ಕಾಳಜಿಯಾಗಿರುತ್ತದೆ. ಏಕೆಂದರೆ ಅವರು 2025 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಫೀಲ್ಡಿಂಗ್ ಮಾಡಿಲ್ಲ. ಮತ್ತೊಂದೆಡೆ, ವಿರಾಟ್ ಅವರ ಸಾಮರ್ಥ್ಯ ಕಡಿಮೆಯಾಗುತ್ತಿರುವ ಲಕ್ಷಣಗಳನ್ನು ತೋರಿಸಿದ್ದಾರೆ. ಇದು ಅವರ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಅವರ ಇನ್ನಿಂಗ್ಸ್‌ನ ಆರಂಭಿಕ ಭಾಗಗಳಲ್ಲಿ ಅವರನ್ನು ತೊಂದರೆಗೆ ಸಿಲುಕಿಸಿದೆ. ಇನ್ನೊಂದೆಡೆ ಭಾರತ ಹೆಚ್ಚಾಗಿ ಟಿ20 ಸರಣಿಯನ್ನು ಆಡುತ್ತಿದೆ. ಕೊಹ್ಲಿ, ರೋಹಿತ್‌ ಈ ಮಾದರಿಯಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಉಭಯ ಆಟಗಾರರಿಗೆ ಬೆರಳೆಣಿಕೆಯ ಏಕದಿನ ಸರಣಿ ಆಡಲು ಸಿಗುತ್ತದೆ. ಆದ್ದರಿಂದ ಅವರು ಫಾರ್ಮ್‌ ಉಳಿಸಿಕೊಳ್ಳುವುದು ಕಷ್ಟ ಎಂದು ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ IPL 2025: ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ ಆಡುವುದು ಅನುಮಾನ

"ಪ್ರಾಮಾಣಿಕವಾಗಿ ಹೇಳುವುದಾದರೆ, ನನ್ನ ಪ್ರಕಾರ ಅವರು ಆಡುತ್ತಾರೆಂದು ನಾನು ಭಾವಿಸುವುದಿಲ್ಲ. ಒಂದೊಮ್ಮೆ ಮುಂದಿನ ವರ್ಷ ಉತ್ತಮ ಫಾರ್ಮ್‌ನಲ್ಲಿದ್ದರೆ, ಮತ್ತು ಅವರು ಶತಕಗಳನ್ನು ಗಳಿಸುತ್ತಲೇ ಇದ್ದರೆ, ದೇವರು ಕೂಡ ಅವರನ್ನು ಕೈಬಿಡಲು ಸಾಧ್ಯವಿಲ್ಲ" ಎಂದು ಗವಾಸ್ಕರ್ ಹೇಳಿದರು.