ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranveer Allahbadia: ಲೈವ್‌ ಕಾರ್ಯಕ್ರಮದಲ್ಲೇ ಕೇವಲ ಒಂದು ಫೋಟೋ ತೋರಿಸಿ ಪಾಕ್‌ ಮುಖವಾಡ ಕಳಚಿದ ರಣವೀರ್ ಅಲ್ಲಾಬಾದಿಯಾ

Ranveer Allahbadia: ವಿವಾದಾತ್ಮಕ ಹೇಳಿಕೆಯಿಂದ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಭಾರತೀಯ ಪಾಡ್‌ಕಾಸ್ಟರ್ ರಣವೀರ್ ಅಲ್ಲಾಬಾದಿಯಾ ಪಿಯರ್ಸ್ ಮಾರ್ಗನ್ ಅನ್‌ಸೆನ್ಸರ್ಡ್ ಟಾಕ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪಾಕಿಸ್ತಾನಿಗಳೂ ಇದ್ದರು, ಇದರಲ್ಲಿ ಭಾರತ-ಪಾಕಿಸ್ತಾನದ ಇತ್ತೀಚಿನ ಸಂಘರ್ಷದ ಬಗ್ಗೆ ಚರ್ಚೆ ನಡೆಯಿತು.

ಬಿನ್‌ ಲಾಡೆನ್‌ ಫೋಟೋ ಹಿಡಿದು ಮತ್ತೆ ಸುದ್ದಿಯಾದ ರಣವೀರ್ ಅಲ್ಲಾಬಾದಿಯಾ

Profile Sushmitha Jain May 13, 2025 3:45 PM

ನವದೆಹಲಿ: ವಿವಾದಾತ್ಮಕ ಹೇಳಿಕೆಯಿಂದ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ಭಾರತೀಯ ಪಾಡ್‌ಕಾಸ್ಟರ್ (Podcaster) ರಣವೀರ್ ಅಲ್ಲಾಬಾದಿಯಾ (Ranveer Allahabadia), ಪಿಯರ್ಸ್ ಮಾರ್ಗನ್ ಅನ್‌ಸೆನ್ಸರ್ಡ್ ಟಾಕ್ ಶೋನಲ್ಲಿ (Piers Morgan Uncensored Talk Show) ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಇಬ್ಬರು ಪಾಕಿಸ್ತಾನಿಗಳೂ ಇದ್ದರು, ಇದರಲ್ಲಿ ಭಾರತ-ಪಾಕಿಸ್ತಾನದ ಇತ್ತೀಚಿನ ಸಂಘರ್ಷದ ಬಗ್ಗೆ ಚರ್ಚೆ ನಡೆಯಿತು. ಅಲ್ಲಾಬಾದಿಯಾ ಪಾಕಿಸ್ತಾನದ ಭಯೋತ್ಪಾದಕ ಸಂಪರ್ಕಗಳನ್ನು ಬಯಲಿಗೆಳೆದು, ಆ ರಾಷ್ಟ್ರವು ವಿಶ್ವದ ಭಯೋತ್ಪಾದಕ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತದ ಕಾರ್ಯಾಚರಣೆಗಳನ್ನು “ನಿಖರವಾದ, ಸಂಯಮಿತ ಮತ್ತು ಪ್ರತೀಕಾರಾತ್ಮಕ” ಎಂದು ಸಮರ್ಥಿಸಿದರು. “ಭಾರತ ಯಾವುದೇ ಸಂದರ್ಭದಲ್ಲೂ ಆಕ್ರಮಣಕಾರಿಯಾಗಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ, ಅಲ್ಲಾಬಾದಿಯಾ 2011 ರಲ್ಲಿ ಪಾಕಿಸ್ತಾನದ ಅಬ್ಬೋಟಾಬಾದ್‌ನಲ್ಲಿ ಕೊಲ್ಲಲ್ಪಟ್ಟ ಅಲ್-ಖೈದಾ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಒಸಾಮ ಬಿನ್ ಲಾಡೆನ್‌ನ ಫೋಟೋವನ್ನು ತೋರಿಸಿದರು. “ಒಸಾಮ ಬಿನ್ ಲಾಡೆನ್‌ನನ್ನು ಪಾಕಿಸ್ತಾನದ ಸೇನಾ ನೆಲೆಯಿಂದ 800 ಮೀಟರ್ ದೂರದಲ್ಲಿ ಪತ್ತೆಮಾಡಲಾಯ್ತು. ಪ್ರಪಂಚಕ್ಕೆ ಈ ವ್ಯಕ್ತಿ ಮಾತ್ರ ಗೊತ್ತು, ಆದರೆ ಭಾರತದ ಬಳಿ ಇಂತಹ ಹಲವರ ಪಟ್ಟಿಯೇ ಇದೆ” ಎಂದು ಅವರು ಹೇಳಿದರು.



ಯುಎಸ್‌ನಿಂದ ಗ್ಲೋಬಲ್ ಭಯೋತ್ಪಾದಕ ಎಂದು ಗೊತ್ತುಪಡಿಸಲ್ಪಟ್ಟ ಲಷ್ಕರ್-ಎ-ತೊಯ್ಬಾದ ಹಿರಿಯ ಕಮಾಂಡರ್ ಹಫೀಝ್ ಅಬ್ದುಲ್ ರಾಫ್‌ನ ಫೋಟೋವನ್ನು ಸಹ ಅಲ್ಲಾಬಾದಿಯಾ ತೋರಿಸಿದರು, ಅವರು ಭಾರತದ ಗಡಿಯಾಚೆಗಿನ ನಿಖರ ದಾಳಿಗಳಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಿಗೆ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುನ್ನಡೆಸುತ್ತಿದ್ದರು. “ಯುಎನ್‌ನಿಂದ ಗೊತ್ತುಪಡಿಸಲ್ಪಟ್ಟ ಭಯೋತ್ಪಾದಕನನ್ನು ಪಾಕಿಸ್ತಾನ ಸೇನೆ ಸೆಲಬ್ರೇಟ್ ಮಾಡುತ್ತದೆ. ಯುಎಸ್‌ನೊಂದಿಗೆ ಪರಿಶೀಲಿಸಿದರೆ, ಅವರು ಇವನನ್ನು ಅಬ್ದುಲ್ ರಾಫ್ ಎಂದು ಗುರುತಿಸುತ್ತಾರೆ, ರಾಫ್‌ನ ಮುಖವನ್ನು ಭಾರತ ಗುರುತಿಸುತ್ತದೆ” ಎಂದು ಅವರು ಫೋಟೋ ತೋರಿಸುತ್ತಾ ಹೇಳಿದರು.

ಈ ಸುದ್ದಿಯನ್ನು ಓದಿ: Viral Video: ಮಗಳಿಗೆ ಕಿರುಕುಳ ನೀಡಿದ ಯುವಕನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿಸಿದ ತಾಯಿ; ವಿಡಿಯೊ ವೈರಲ್!

ಅಲ್ಲಾಬಾದಿಯಾ ಲಾಡೆನ್ ಮತ್ತು ರಾಫ್‌ನ ಫೋಟೋಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಿಯರ್ಸ್ ಮಾರ್ಗನ್ ಶೋನ ಪ್ಯಾನೆಲ್‌ನಲ್ಲಿ ಭಾರತೀಯ ಪತ್ರಕರ್ತೆ ಬರ್ಖಾ ದತ್, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ಖಾರ್, ಮತ್ತು ‘ದಿ ಪಾಕಿಸ್ತಾನ ಎಕ್ಸ್‌ಪೀರಿಯನ್ಸ್’ನ ಶೆಹಜಾದ್ ಘಿಯಾಸ್ ಶೇಖ್ ಸಹ ಭಾಗವಹಿಸಿದ್ದರು. ಪಾಕಿಸ್ತಾನದ ವಿರುದ್ಧ ಮತ್ತಷ್ಟು ಆಕ್ರಮಣಕಾರಿಯಾಗಿ ಮಾತನಾಡಿದ ಅಲ್ಲಾಬಾದಿಯಾ, ಭಾರತದ ಆರ್ಥಿಕತೆಯು ಪಾಕಿಸ್ತಾನದ ಆರ್ಥಿಕತೆಗಿಂತ ಹನ್ನೊಂದು ಪಟ್ಟು ದೊಡ್ಡದಾಗಿದೆ ಎಂದು ಒತ್ತಿಹೇಳಿದರು.

'ಪಾಕಿಸ್ತಾನಿ ಸಹೋದರ ಸಹೋದರಿಯರನ್ನು' ದ್ವೇಷಿಸುವುದಿಲ್ಲ ಎಂದು ಹೇಳಿದ್ದ ಅಲ್ಲಾಬಾದಿಯಾ ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು. ಈ ಬಗ್ಗೆ ಮಾರ್ಗನ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅಲ್ಲಾಬಾದಿಯಾ, ಅದಕ್ಕೆ ಅಲ್ಲಾಬಾದಿಯಾ, ಕದನ ವಿರಾಮ ಘೋಷಣೆಯಾದ ಕಾರಣ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ ಎಂದು ಉತ್ತರಿಸಿದರು. ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದೆ, ಅವರ ಮೇಲೆ ಏಕೆ ವಿಶ್ವಾಸ ಇಡಬಾರದು ಎಂಬುದಕ್ಕೆ ನಮಗೆ ಇನ್ನೊಂದು ಕಾರಣ ನೀಡಿದೆ ಎಂದು ಅವರು ವಿವರಿಸಿದ್ದಾರೆ. ನಾವು ಭಯೋತ್ಪಾದನೆಯನ್ನು ಎದುರಿಸುತ್ತಿದ್ದೇವೆ, ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ, ಇದು ಭಾರತದ ಕಥೆ ಅಲ್ಲ, ಇದು ವಿಶ್ವಕ್ಕೆ ತಿಳಿಯಬೇಕಾದ ಕಥನ” ಎಂದು ಅಲ್ಲಾಬಾದಿಯಾ ಖಾರವಾಗಿ ಹೇಳಿದರು.