Virat Kohli tribute: ಕೆಕೆಆರ್ ಪಂದ್ಯದ ವೇಳೆ ಆರ್‌ಸಿಬಿ ಅಭಿಮಾನಿಗಳಿಂದ ಕೊಹ್ಲಿಗೆ ವಿಶೇಷ ಗೌರವ
ಮೇ 17 ಶನಿವಾರದಂದು ನಡೆಯುವ ಆರ್‌ಸಿಬಿ ಮತ್ತು ಕೆಕೆಆರ್(RCB vs KKR) ಪಂದ್ಯದ ವೇಳೆ ಕೊಹ್ಲಿಯ ಟೆಸ್ಟ್ ವೃತ್ತಿಜೀವನಕ್ಕೆ ಗೌರವ ಸೂಚಿಸುವ ಸಲುವಾಗಿ ಪ್ರೇಕ್ಷಕರು ಬಿಳಿ ಬಣ್ಣದ ಉಡುಗೆ ತೊಟ್ಟು ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಕರೆಕೊಟ್ಟಿದ್ದಾರೆ.


ಬೆಂಗಳೂರು: ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರ ಸಾಲಲ್ಲಿ ಗುರುತಿಸಿಕೊಳ್ಳುವ, ಭಾರತೀಯ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ ವಿರಾಟ್ ಕೊಹ್ಲಿ(Virat Kohli) ಟೆಸ್ಟ್ ಕ್ರಿಕೆಟ್‌ಗೆ ಸೋಮವಾರ(ಮೇ 12) ಗುಡ್‌ಬೈ ಹೇಳಿದ್ದರು. ಕೊಹ್ಲಿ ಈ ದಿಢೀರ್ ನಿರ್ಧಾರ ಅವರ ಅಭಿಮಾನಿಗಳಿಗೆ ಅಚ್ಚರಿ ತಂದಿತ್ತು. ಇದೀಗ ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳು(RCB fans) ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್(IPL 2025) ಪಂದ್ಯದ ವೇಳೆ ಕೊಹ್ಲಿಗೆ ವಿಶೇಷ ಗೌರವ ಸೂಚಿಸಲು ಅಭಿಯಾನವೊಂದನ್ನು(Virat Kohli tribute ) ಆರಂಭಿಸಿದ್ದಾರೆ.
ಮೇ 17 ಶನಿವಾರದಂದು ನಡೆಯುವ ಆರ್‌ಸಿಬಿ ಮತ್ತು ಕೆಕೆಆರ್(RCB vs KKR) ಪಂದ್ಯದ ವೇಳೆ ಕೊಹ್ಲಿಯ ಟೆಸ್ಟ್ ವೃತ್ತಿಜೀವನಕ್ಕೆ ಗೌರವ ಸೂಚಿಸುವ ಸಲುವಾಗಿ ಪ್ರೇಕ್ಷಕರು ಬಿಳಿ ಬಣ್ಣದ ಉಡುಗೆ ತೊಟ್ಟು ಬರುವಂತೆ ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಕರೆಕೊಟ್ಟಿದ್ದಾರೆ.
ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪಂದ್ಯಕ್ಕೆ ಆಗಮಿಸುವ ತಂಡದ ಬೆಂಬಲಿಗರನ್ನು ಟೆಸ್ಟ್ ಬಿಳಿ ಜೆರ್ಸಿ ಅಥವಾ ಸಂಪೂರ್ಣ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವಂತೆ ಒತ್ತಾಯಿಸಿದ್ದಾರೆ.
A tribute to the one who brought Test cricket to life in this generation. Wear a white Test jersey at the next RCB game at Chinnaswamy.
— Yashvi (@BreatheKohli) May 13, 2025
Please spread the word as much as you can. ❤️ pic.twitter.com/7GTMrdW77t
2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೊಹ್ಲಿ, ಭಾರತ ಪರ 123 ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9230 ರನ್ ಕಲೆಹಾಕಿದ್ದಾರೆ. ಇದರಲ್ಲಿ 30 ಶತಕ, 31 ಅರ್ಧಶತಕಗಳೂ ಒಳಗೊಂಡಿವೆ. ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ಅದೇ ಸರಣಿಯಲ್ಲಿ ತಮ್ಮ ಕೊನೆ ಪಂದ್ಯವಾಡಿದ್ದರು.
ಇದನ್ನೂ ಓದಿ ಕುಚುಕು ಗೆಳೆಯ ವಿರಾಟ್ ಕೊಹ್ಲಿಗೆ ಎ ಬಿ ಡಿವಿಲಿಯರ್ಸ್ ವಿಶೇಷ ಸಂದೇಶ!
ಕಳೆದ ವರ್ಷ ಟಿ20 ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದ ಕೊಹ್ಲಿ, ಇನ್ನು ಏಕದಿನ ಹಾಗೂ ಐಪಿಎಲ್‌ನಲ್ಲಿ ಮಾತ್ರ ಕಾಣಸಿಗಲಿದ್ದಾರೆ. ಅವರು 2027ರ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದು, ಆ ಬಳಿಕವೇ ಏಕದಿನದಿಂದ ನಿವೃತ್ತಿಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿ ಇನ್ನೂ 2-3 ವರ್ಷ ಆಡುವ ನಿರೀಕ್ಷೆಯಿದೆ.