ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 final: ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್‌?

ಲೀಗ್‌ ಹಂತದ ಪಂದ್ಯಗಳು ಮೇ 27ರಂದು ಕೊನೆಗೊಳ್ಳಲಿವೆ. ಮೇ 29ರಿಂದ ನಾಕೌಟ್‌ ಹಂತ ಶುರುವಾಗಲಿದ್ದು, ಜೂ.3ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪಂದ್ಯಾವಳಿಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು.

ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಫೈನಲ್‌?

Profile Abhilash BC May 13, 2025 2:44 PM

ನವದೆಹಲಿ: ಐಪಿಎಲ್‌ 18ನೇ ಆವೃತ್ತಿಯ ಪರಿಷ್ಕೃತ ವೇಳಾಪಟ್ಟಿ ಪ್ರಕಟಗೊಂಡರೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಫೈನಲ್(IPL 2025 final) ಮತ್ತು ಮೊದಲ ಎರಡು ಪ್ಲೇಆಫ್‌ಗಳಾದ(IPL playoffs) ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳ ಸ್ಥಳಗಳನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇದೀಗ ಮೂಲಗಳ ಪ್ರಕಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವನ್ನು(Narendra Modi Stadium ) ಕ್ರಮವಾಗಿ ಜೂನ್ 1 ಮತ್ತು 3 ರಂದು ನಡೆಯಲಿರುವ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯವನ್ನು ಆಯೋಜಿಸಲು ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬಿಸಿಸಿಐ ಪ್ಲೇಆಫ್‌ ಪಂದ್ಯಗಳಿಗೆ ಸ್ಥಳಗಳನ್ನು ಘೋಷಣೆ ಮಾಡದಿರಲು ಕಾರಣ ಹವಾಮಾನ ವೈಪರೀತ್ಯದ ಮುನ್ಸೂಚನೆಗಳು. ಜೂನ್‌ನಲ್ಲಿ ಪಂದ್ಯಗಳು ನಡೆಯುವ ಕಾರಣ ಈ ಸಮಯದಲ್ಲಿ ದೇಶಾದ್ಯಂತ ಮಾನ್ಸೂನ್ ಚುರುಕುಗೊಂಡಿತ್ತದೆ. ಆದಾಗ್ಯೂ, ಜೂನ್ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಎಂಬುದು ನಿರೀಕ್ಷೆಯಾಗಿದೆ. ಹೀಗಾಗಿ ಅಂತಿಮವಾಗಿ ಅಹಮದಾಬಾದ್‌ ತಾಣವನ್ನೇ ಬಿಸಿಸಿಐ ಆಯ್ಕೆ ಮಾಡಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.

ಸದ್ಯ ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಉಳಿದಿರುವ ಲೀಗ್‌ ಪಂದ್ಯಗಳು ಬೆಂಗಳೂರು ಸೇರಿ 6 ನಗರಗಳಲ್ಲಿ ನಡೆಯಲಿವೆ. ಬೆಂಗಳೂರಿನಲ್ಲಿ 2, ಜೈಪುರಲ್ಲಿ 3, ಲಖನೌದಲ್ಲಿ 2, ಮುಂಬೈನಲ್ಲಿ 1, ಅಹಮದಾಬಾದ್‌ನಲ್ಲಿ 2, ನವದೆಹಲಿಯಲ್ಲಿ 3 ಪಂದ್ಯಗಳು ನಿಗದಿಯಾಗಿದೆ. ಲೀಗ್‌ ಹಂತದ ಪಂದ್ಯಗಳು ಮೇ 27ರಂದು ಕೊನೆಗೊಳ್ಳಲಿವೆ. ಮೇ 29ರಿಂದ ನಾಕೌಟ್‌ ಹಂತ ಶುರುವಾಗಲಿದ್ದು, ಜೂ.3ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ.

ಇದನ್ನೂ ಓದಿ IPL 2025: ಆಸ್ಟ್ರೇಲಿಯಾ ಆಟಗಾರರು ಐಪಿಎಲ್‌ ಆಡುವುದು ಅನುಮಾನ

ಲೀಗ್‌ ಹಂತದ ಪಂದ್ಯಗಳು ಮೇ 27ರಂದು ಕೊನೆಗೊಳ್ಳಲಿವೆ. ಮೇ 29ರಿಂದ ನಾಕೌಟ್‌ ಹಂತ ಶುರುವಾಗಲಿದ್ದು, ಜೂ.3ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಪಂದ್ಯಾವಳಿಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿತ್ತು.