ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepika Padukone: ಬಾಲಿವುಡ್ ನಟಿ ದೀಪಿಕಾ ವಿರುದ್ಧ ಅನಿಮಲ್ ನಿರ್ದೇಶಕ ಕಿಡಿಕಾರಿದ್ಯಾಕೆ?

ನಟ ಪ್ರಭಾಸ್ ನಾಯಕನಾಗಿ ನಟಿಸಲಿರುವ ಸ್ಪಿರಿಟ್ ಸಿನಿಮಾಕ್ಕೆ ನಾಯಕಿಯಾಗಲು ನಟಿ ದೀಪಿಕಾ ಪಡುಕೋಣೆ ಅವರನ್ನು ಕೇಳಲಾಗಿತ್ತು. ಆದರೆ ನಟಿ ದೀಪಿಕಾ ಅವರು ಕೆಲವು ಷರತ್ತುಗಳನ್ನು ಹಾಕಿದ್ದ ಕಾರಣ ಚಿತ್ರ ತಂಡ ದೀಪಿಕಾ ಬದಲು ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಈ ನಡುವೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವೆ ವೈಮನಸ್ಸು ಏರ್ಪಟ್ಟಿದೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು. ಇದೀಗ ಸ್ಪಿರಿಟ್ ಚಿತ್ರದ ಕಥೆ ಲೀಕ್ ಆಗಿದ್ದ ವಿಚಾರಕ್ಕೆ ದೀಪಿಕಾ ವಿರುದ್ಧ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಿಡಿಕಾರಿದ್ದಾರೆ‌. ಈ ಬಗ್ಗೆ ನಿರ್ದೇಶಕರು ಆಕ್ರೋಶಿತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನಟಿ ದೀಪಿಕಾ ವಿರುದ್ಧ ಅನಿಮಲ್ ನಿರ್ದೇಶಕ ಕಿಡಿಕಾರಿದ್ಯಾಕೆ?

Profile Pushpa Kumari May 27, 2025 2:50 PM

ನವದೆಹಲಿ: ಅರ್ಜುನ್ ರೆಡ್ಡಿ, ಅನಿಮಲ್ ನಂತಹ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ (Sandeep Reddy) ಅವರು ಸ್ಪಿರಿಟ್ ಸಿನಿಮಾಗಾಗಿ ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ನಟ ಪ್ರಭಾಸ್ ನಾಯಕನಾಗಿ ನಟಿಸಲಿರುವ ಸ್ಪಿರಿಟ್ ಸಿನಿಮಾಕ್ಕೆ ನಾಯಕಿಯಾಗಲು ನಟಿ ದೀಪಿಕಾ ಪಡುಕೋಣೆ (Deepika Padukone) ಅವರನ್ನು ಕೇಳಲಾಗಿತ್ತು. ಆದರೆ ನಟಿ ದೀಪಿಕಾ ಅವರು ಕೆಲವು ಷರತ್ತುಗಳನ್ನು ಹಾಕಿದ್ದ ಕಾರಣ ಚಿತ್ರತಂಡ ದೀಪಿಕಾ ಬದಲು ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಈ ನಡುವೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಡುವೆ ವೈಮನಸ್ಸು ಏರ್ಪಟ್ಟಿದೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು. ಇದೀಗ ಸ್ಪಿರಿಟ್ ಚಿತ್ರದ ಕಥೆ ಲೀಕ್ ಆಗಿದ್ದ ವಿಚಾರಕ್ಕೆ ದೀಪಿಕಾ ವಿರುದ್ಧ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಕಿಡಿಕಾರಿದ್ದಾರೆ‌. ಈ ಬಗ್ಗೆ ನಿರ್ದೇಶಕರು ಆಕ್ರೋಶಿತ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸ್ಪಿರಿಟ್ ಸಿನಿಮಾ ಮಾಡುವುದಾಗಿ ತಿಳಿಸಿದಾಗ ಇದು ಕೂಡ ಅನಿಮಲ್‌ನಂತೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಹಿಟ್ ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಹೀಗಾಗಿ ಯಾರೆಲ್ಲ ಈ ಸಿನಿಮಾದಲ್ಲಿ ಇರ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದ್ದು ಇದೆ. ಸಿನಿಮಾ ತಂಡ ನಾಯಕಿಯಾಗಿ ತೃಪ್ತಿ ದಿಮ್ರಿ ಆಯ್ಕೆ ಮಾಡಿದ್ದ ಬೆನ್ನಲ್ಲೆ ಸಿನಿಮಾ ಕಥೆಯ ಮುಖ್ಯ ಅಂಶಗಳೇ ಲೀಕ್ ಆಗಿದೆ. ಹೀಗಾಗಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪಿಆರ್ ತಂಡವೇ ಇದಕ್ಕೆ ಕಾರಣ ಎಂಬಂತೆ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ನಟಿ ದೀಪಿಕಾ ಅವರ ಹೆಸರನ್ನು ಬಳಸದೆ ಪಿಆರ್ ತಂಡ ಎಂದು ಉಲ್ಲೇಖಿಸಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.



ಸ್ಪಿರಿಟ್ ಸಿನಿಮಾದ ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದ್ದು ಅದಕ್ಕೂ ಮೊದಲೇ ಕಥೆ ಲೀಕ್ ಆಗಿದ್ದಕ್ಕೆ ನಿರ್ದೇಶಕರು ಪಿಆರ್ ತಂಡದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಪಿಆರ್ ಸ್ಟಂಟ್ ಗೇಮ್ ಗಳಿಗೆ ಹೆದರುವ ವ್ಯಕ್ತಿ ನಾನಲ್ಲ. ನಾನು ನಿರ್ದೇಶಕನಾಗಿ ಖ್ಯಾತ ನಾಯಕಿಯ ಬಳಿ 100% ನಂಬಿಕೆ ಇಟ್ಟು ಸಿನಿಮಾದ ಕಥೆಯನ್ನು ಹೇಳಿದ್ದೆ. ಆದರೆ ಅವರು ನನ್ನ ನಂಬಿಕೆ ಉಳಿಸಿಕೊಳ್ಳಲಿಲ್ಲ. ಸಾಮಾನ್ಯವಾಗಿ ನಟ ನಟಿಯರಿಗೆ ಕಥೆ ಹೇಳುವಾಗ ಆ ಕಥೆ ಗೌಪ್ಯವಾಗಿರಿಸಬೇಕೆಂಬ ಒಪ್ಪಂದ ಇರಲಿದೆ. ಆದರೆ ಇವೆಲ್ಲವನ್ನು ಇವರು ಗಾಳಿಗೆ ತೂರಿದ್ದಾರೆ. ಒಂದು ಕಥೆ ಬರೆಯಲು ನಾವು ಅದೆಷ್ಟು ದಿನ ಕಷ್ಟ ಪಟ್ಟು ಶ್ರಮಿಸುತ್ತೇವೆ. ಅವೆಲ್ಲವೂ ವ್ಯರ್ಥಮಾಡಲು ನಾನುಬಿಡಲಾರೆ. ಪ್ರತಿಭೆ ಇದ್ದರೆ ಯಾರಿಗೂ ತಲೆಬಾಗುವ ಅಗತ್ಯವಿಲ್ಲ. ಚಿತ್ರದ ಕಥೆಯನ್ನು ನೀವು ಸೋರಿಕೆ ಮಾಡಿರಬಹುದು ಆದರೆ ನನ್ನ ಪ್ರತಿಭೆಯನ್ನಲ್ಲ. ನೀವೊಂದು ಕೆಲಸ ಮಾಡಿ, ಮುಂದಿನ ಬಾರಿ ಸಂಪೂರ್ಣ ಕಥೆ ಹೇಳಿಬಿಡಿ, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಡರ್ಟಿ ಪಿಆರ್ ಗೇಮ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ವಿಟ್ಟರ್ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kannada New Movie: ʼಠಾಣೆʼ ಚಿತ್ರದ ಟ್ರೈಲರ್ ಅನಾವರಣಗೊಳಿಸಿದ ಮಾಲತಿ ಸುಧೀರ್

ಸ್ಪಿರಿಟ್ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳು ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ನಂತಹ ಪಾತ್ರ ಇದ್ದರೂ ನಟಿ ದಿಪೀಕಾ ಪಡುಕೋಣೆ ಈ ಸಿನಿಮಾದಲ್ಲಿ ನಟಿಸಲು ಒಪ್ಪಿ 20 ಕೋಟಿ ರೂ. ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ. ಚಿಕ್ಕ ಮಗುವಿನ ಆರೈಕೆ ಮಾಡ ಬೇಕಿದ್ದ ಕಾರಣ ದಿನದಲ್ಲಿ ಕೇವಲ 6 ಗಂಟೆಗಳ ಕಾಲ ಮಾತ್ರ ಶೂಟಿಂಗ್ ನಲ್ಲಿ ಭಾಗಿಯಾಗುತ್ತೇನೆ ಎಂದು ನಟಿ ದೀಪಿಕಾ ತಿಳಿಸಿದ್ದರಂತೆ. ಒಂದು ವೇಳೆ ಸ್ಪಿರಿಟ್ ಸಿನಿಮಾದ ಚಿತ್ರೀಕರಣ 100 ದಿನಗಳನ್ನು ಮೀರಿ ಹೋದರೆ, ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಷರತ್ತು ಕೂಡ ಹಾಕಿದ್ದರಂತೆ. ಇದೇ ವಿಚಾರಕ್ಕೆ ನಿರ್ದೇಶಕ ಸಂದೀಪ್ ವಂಗಾ ಮತ್ತು ದೀಪಿಕಾ ನಡುವೆ ವೈಮನಸ್ಸು ಏರ್ಪಟ್ಟಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪೋಸ್ಟ್ ವೈರಲ್ ಆದ ಬೆನ್ನಲ್ಲೆ ನಟಿ ದೀಪಿಕಾ ಅಭಿಮಾನಿಗಳು ಸಂದೀಪ್ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಈ ಕುರಿತು ದೀಪಿಕಾ ಪ್ರತಿಕ್ರಿಯೆ ಏನು ಎಂಬುದನ್ನು ಕಾದು ನೋಡಬೇಕಿದೆ.